ಎನ್‌ಎಸ್‌ಜಿ: ಭಯೋತ್ಪಾದನ ವಿರೋಧಿ ಅಣಕು ಕಾರ್ಯಾಚರಣೆ

Picture of Savistara

Savistara

Bureau Report

ಮಂಗಳೂರು, ಜು. 23: ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಜಿ) ಕಮಾಂಡೋಗಳು ಮಂಗಳೂರಿಗೆ ಆಗಮಿಸಿದ್ದು, ಭಯೋತ್ಪಾದನ ವಿರೋಧಿ ಅಣಕು ಕಾರ್ಯಾ ಚರಣೆ ಆರಂಭಿಸಿದ್ದಾರೆ.

ಭಯೋತ್ಪಾದನ ದಾಳಿ ಸಂಭವಿಸಿದರೆ ಅದನ್ನು ಹೇಗೆ ಎದುರಿಸಬೇಕು ಎಂಬ ಸನ್ನದ್ಧತೆಯನ್ನು ಅಣಕು ಕಾರ್ಯಾಚರಣೆ ಮಾಡುವ ಉದ್ದೇಶದಿಂದ ಎನ್ ಎಸ್ ಜಿ ಯವರು ಆಗಮಿಸಿದ್ದಾರೆ. ಬುಧವಾರ ಎಂಆರ್‌ಪಿಎಲ್ ಸ್ಥಾವರದ ಆವರಣದಲ್ಲಿ ಕಾರ್ಯಾಚರಣೆ ನಡೆಸಿದ್ದರು.ಗುರುವಾರ ಬೆಳಗ್ಗೆ ಸುರತ್ಕಲ್‌ನ ಎನ್ ಐಟಿಕೆ ಆವರಣದಲ್ಲಿ ಸಂಜೆ ವೇಳೆ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿ ಕಾರ್ಯಾಚರಣೆ ನಡೆಸಿದರು. ಕಾಲೇಜು ಬಳಿಯ ಬಹುಮಹಡಿ ಕಟ್ಟಡವೊಂದ ರಲ್ಲಿ ರುವ ಹೆಲಿಪ್ಯಾಡ್‌ನಲ್ಲಿ ಎನ್‌ಎಸ್‌ಜಿ ಕಮಾಂಡೋಸ್ ರೋಪ್ ಮೂಲಕ ಇಳಿದು, ಬಳಿಕ ಸಂತ ಅಲೋಶಿಯಸ್ ಕಾಲೇಜು ಕಟ್ಟಡದ ಒಳಗೆ ಹಾಗೂ ಆವರಣದಲ್ಲಿ ಸಂಜೆ 5 ಗಂಟೆಯಿಂದ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರು. ರಾತ್ರಿ ಕಾಲೇಜು ಆವರಣವನ್ನು ಸಂಪೂರ್ಣವಾಗಿ ಕತ್ತಲು ಮಾಡಲಾಗಿತ್ತು.

ಸಾರ್ವಜನಿಕರಲ್ಲಿ ಕುತೂಹಲ

ಬೆಳಗ್ಗೆ ನಗರದ ಬಂದರು, ಸುರತ್ಕಲ್, ಕೊಡಿಯಾಲಬೈಲು ಸಹಿತ ನಗರದ ವಿವಿಧ ಭಾಗಗಳಲ್ಲಿ ಕಡಿಮೆ ಎತ್ತರದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿತು. ಅಲೋಶಿಯಸ್ ಕಾಲೇಜು ಬಳಿ ಪೂರ್ವಾಭ್ಯಾಸವನ್ನೂ ನಡೆಸಿದರು. ಇದು ಸಾರ್ವಜನಿಕರಲ್ಲಿ ಕುತೂಹಲಕ್ಕೆ ಕಾರಣವಾಯಿತು. ಕೆಲವರು ಗಾಬರಿಗೂ ಒಳಗಾದರು. ಎನ್‌ಎಸ್‌ಜಿ ಕಾರ್ಯಾಚರಣೆ ಬಗ್ಗೆ ಜಿಲ್ಲಾಡಳಿತ ಮೊದಲೇ ಪ್ರಕಟನೆ ನೀಡಿತ್ತು.ನಗರದ ಪೊಲೀಸ್ ಇಲಾಖೆಯೂ

ಕಾರ್ಯಾಚರಣೆಗೆ ಸಹಕಾರ ನೀಡಿದೆ.ನಗರ ಪ್ರದೇಶದಲ್ಲಿ ಸಂಭವಿಸಬಹುದಾದ ಭಯೋತ್ಪಾದಕ ಬೆದರಿಕೆಗಳಿಗೆ ಪೊಲೀಸ್ ಇಲಾಖೆ, ಅಗ್ನಿಶಾಮಕದಳ, ನಗರ ಶಸಸ್ತ್ರ ಮೀಸಲು ಪಡೆ, ಜಿಲ್ಲಾಡಳಿತ ತ್ವರಿತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯ, ವಿವಿಧ ಭದ್ರತ ಸಂಸ್ಥೆಗಳ ನಡುವಿನ ಸಮನ್ವಯ ಹಾಗೂ ತುರ್ತು ಕಾರ್ಯಾಚರಣೆಗಳ ಸನ್ನದ್ಧತೆಯನ್ನು ಮೌಲ್ಯಮಾಪನ ಈ ಕಾರ್ಯಾಚರಣೆ ಮೂಲಕ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸುಮಾರು 100 ಮಂದಿ ಅಧಿಕಾರಿ, ಸಿಬಂದಿ ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಜು. 25ರ ವರೆಗೆ ವಿವಿಧೆಡೆ ಈ ಕಾರ್ಯಾಚರಣೆ ನಡೆಯಲಿದೆ.ಚೆನ್ನೈನಿಂದ ಈ ಕಾರ್ಯಾಚರಣೆಗಾಗಿ ಎನ್‌ಎಸ್‌ಜಿ ತಂಡವೇ ಆಗಮಿಸಿದ್ದು ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದೆ. ಮೂರು ದಿನಗಳ ಕಾರ್ಯಾಚರಣೆ ಬಳಿಕ ತೆರಳಲಿರುವುದಾಗಿ ತಿಳಿದುಬಂದಿದೆ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!