ಬಿಳಿನೆಲೆ ಬಿಜೆಪಿ ನೂತನ ಕಛೇರಿ ಉದ್ಘಾಟನೆ,ಯೋಧರಿಗೆ ಸನ್ಮಾನ | ಕಾರ್ಗಿಲ್ ವಿಜಯ್ ದಿವಸ ಆಚರಣೆ | ಕಾರ್ಗಿಲ್ ಯುದ್ಧ ಗೆಲುವು ಜಗತ್ತಿಗೆ ಭಾರತದ ಶಕ್ತಿಯ ಅನಾವರಣ : ಪ್ರಸನ್ನ ದರ್ಬೆ

Picture of Savistara

Savistara

Bureau Report

ಕಡಬ:ಬಿಜೆಪಿ ಬಿಳಿನೆಲೆ ನೂತನ ಕಚೇರಿ ಉದ್ಘಾಟನೆ ಮತ್ತು ಕಾರ್ಗಿಲ್ ವಿಜಯ್ ದಿವಸ ಹಾಗೂ ವೀರ ಯೋಧರಿಗೆ ಅಭಿನಂದನಾ ಕಾರ್ಯಕ್ರಮ ವಿದ್ಯಾ ಸಭಾಂಗಣ ಬಿಳಿನೆಲೆ ಯಲ್ಲಿ ಜರಗಿತು.ಶಾಸಕಿ ಭಾಗೀರಥಿ ಮುರುಳ್ಯ ಕಚೇರಿ ಉದ್ಘಾಟಿಸಿದರು,ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್ ಅಂಗಾರ ಉಪಸ್ಥಿತರಿದ್ದರು.

ಸೈನಿಕರಿಗೆ ಅಭಿನಂದನಾ ಕಾರ್ಯಕ್ರಮ ಸಭಾ ಅಧ್ಯಕ್ಷತೆಯನ್ನು ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ವಹಿಸಿದ್ದರು, ಮುಖ್ಯ ಭಾಷಣಕಾರರಾಗಿ ಜಿಲ್ಲಾ ಬಿಜೆಪಿ ಪ್ರಕೋಷ್ಠ ಸಹ ಸಂಚಾಲಕ ಪ್ರಸನ್ನ ದರ್ಬೆ ಮಾತನಾಡಿ ” ಕಾರ್ಗಿಲ್ ಸಮರದಲ್ಲಿ ದೇಶದ ಸೈನಿಕರ ತಾಕತ್ ಜಗತ್ತಿಗೆ ತೆರೆದಿಡುವ ಕೆಲಸವಾಗಿತ್ತು ಆಗಿನ ಪ್ರಧಾನಿ ವಾಜಪೇಯಿ ನೇರ ಯುದ್ಧ ರಂಗಕ್ಕೆ ತೆರಳಿ ಸೈನಿಕರಿಗೆ ಆತ್ಮ ಸ್ಥೆರ್ಯ ತುಂಬುವ ಕೆಲಸ ಮಾಡಿದ್ದನ್ನು ನೆನಪಿಸಿಕೊಳ್ಳಬೇಕಾಗಿದೆ.

ಇಡೀ ದೇಶವೇ ಒಗ್ಗಟ್ಟಾಗಿ ಈ ಯುದ್ಧವನ್ನು ಎದುರಿಸಿದ್ದು ಆನೇಕ ಯೋಧರ ತ್ಯಾಗ,ಬಲಿದಾನ ದಿಂದ ಯುದ್ಧದಲ್ಲಿ ಗೆದ್ದುಕೊಂಡೆವು ಅದಲ್ಲದೆ ಹುತಾತ್ಮ ಯೋಧರ ನೆನಪಿಗಾಗಿ ಸ್ಮಾರಕ ನಿರ್ಮಾಣ ಪ್ರಸ್ತುತ ಬಿಜೆಪಿ ಸರ್ಕಾರ 4600 ಕಿಮೀ ಗಡಿಯಲ್ಲಿ ಹೆದ್ದಾರಿ ನಿರ್ಮಾಣ,ವೈಬ್ರೇಂಟ್ ಯೋಜನೆ,ಶಸ್ತ್ರಸ್ತ್ರ ಪೂರೈಕೆಯಲ್ಲಿ ನಿರ್ಭರತೆ ಹೀಗೆ ಸೈನಿಕರ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ ಒತ್ತು ನೀಡಿದೆಯೆಂದು ಪ್ರಸನ್ನ ದರ್ಬೆ ಭಾಷಣದಲ್ಲಿ ಉಲ್ಲೇಖಸಿದರು.ಈ ವೇಳೆ ಸುಬ್ರಮಣ್ಯ ಎಜ್ಯುಕೇಶನ್ ಸೊಸೈಟಿ ಯ ಕೃಷ್ಣ ಶರ್ಮ,

ಬಿಜೆಪಿ ಸುಬ್ರಮಣ್ಯ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಮಧುಸೂದನ್ ಕೊಂಬಾರು,ಬಿಳಿನೆಲೆ ಶಕ್ತಿ ಕೇಂದ್ರ ಅಧ್ಯಕ್ಷ ಸತೀಶ್ ಎರ್ಕ,ಬೂತ್ ಸಮಿತಿ ಅಧ್ಯಕ್ಷ ಕಿರಣ್ ಮದೆಪೆರ್ಲ ಉಪಸ್ಥಿತರಿದ್ದರು ಈ ವೇಳೆ ನಿವೃತ್ತ ಸೈನಿಕರಿಗೆ ಗೌರವರ್ಪಣೆ,ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ ನಡೆಯಿತು,ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!