‘ಆನಂದದ ಕಣ್ಣೀರು’ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಚಾನು ಮಾತು

Picture of Savistara

Savistara

Bureau Report

ಗ್ಲಾಸ್ಕೊ: ಇಲ್ಲಿ ಭಾನುವಾರ ಮುಕ್ತಾಯಗೊಂಡ ಮಹಿಳೆಯರ 48 ಕೆ.ಜಿ. ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಸಾಯಿಕೋಮ್ ಮೀರಾಬಾಯಿ ಚಾನು ಅವರು ನಿರೀಕ್ಷೆಯಂತೆ ಚಿನ್ನ ಗೆದ್ದರು.2018ರಲ್ಲಿ ಗೋಲ್ಡ್‌ಕೋಸ್ಟ್ ಮತ್ತು 2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಮಾತ್ರವಲ್ಲ, 2014ರಲ್ಲಿ ಗ್ಲಾಸ್ಕೊದಲ್ಲಿ ನಡೆದಿದ್ದ ಕೂಟದಲ್ಲಿಯೂ ಅವರು ಬೆಳ್ಳಿ ಪದಕ ಗೆದ್ದಿದ್ದರು.

31 ವರ್ಷದ ಮೀರಾ ಅವರು ಒಟ್ಟು 190 ಕೆ.ಜಿ. ಭಾರ ಎತ್ತಿದ ಸಾಧನೆ ಮಾಡಿದರು. ಅದರಲ್ಲಿ ಸ್ನಾಚ್‌ನಲ್ಲಿ 85 ಕೆ.ಜಿ ಕ್ಲೀನ್ ಹಾಗೂ ಜರ್ಕ್‌ನಲ್ಲಿ 105 ಕೆ.ಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು. ತಮ್ಮ ಪ್ರತಿಸ್ಪರ್ಧಿಗಳಿಂದ ಚಾನು ಅವರು ಭಾರಿ ಅಂತರ ಕಾಯ್ದುಕೊಂಡಿದ್ದರು. ನೈಜಿರಿಯಾದ ರುಥ್ ಅಸುಕೊ ಎನ್‌ಯಾಂಗ್ (168 ಕೆ.ಜಿ) ಬೆಳ್ಳಿ ಪದಕ ಜಯಿಸಿದರು.ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಮೊದಲ ಚಿನ್ನದ ಪದಕ ಗೆದ್ದ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಚಾನು ಅವರು ಭಾವುಕರಾಗಿದ್ದು ಕಂಡುಬಂದಿತು. ವಿಶೇಷವಾಗಿ, ಪ್ರಶಸ್ತಿ ಪ್ರದಾನದ ಬಳಿಕ ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆ, ಚಾನು ಅರು ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ.ಭಾರತದ ಧ್ವಜ ಮೇಲಕ್ಕೇರಲು ಆರಂಭವಾಗುತ್ತಿದ್ದಂತೆ, ರಾಷ್ಟ್ರಗೀತೆ ಹಾಡುವಾಗ ಚಾನು ಅವರು ಕಣ್ಣೀರು ತಡೆಯಲು ಕಷ್ಟಪಡುತ್ತಿದ್ದರು. ಈ ಕ್ಷಣದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಜನಪ್ರಿಯತೆ ಗಳಿಸಿತು.

ಸಂತೋಷದ ಕಣ್ಣೀರು’

ಗೆಲುವಿನ ನಂತರ ಎಎನ್‌ಐ ಜೊತೆ ಮಾತನಾಡಿದ ಮೀರಾಬಾಯಿ, `ಭಾರತ ಧ್ವಜ ಎತ್ತರದಲ್ಲಿ ಹಾರುತ್ತಿರುವುದನ್ನು ನೋಡುವುದೇ ಆನಂದ. ರಾಷ್ಟ್ರಗೀತೆ ಹಾಡುವಾಗ ನನಗೇ ಅರಿಯದೆ ನನ್ನ ಕಣ್ಣಂಚಲಿ ನೀರು ಬರಲು ಪ್ರಾರಂಭವಾಯಿತು’ ಎಂದಿದ್ದಾರೆ.

‘ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಮೊದಲ ಚಿನ್ನದ ಪದಕ ಗೆದ್ದಿರುವುದರಿಂದ ನನಗೆ ಸಂತೋಷವಾಗುತ್ತಿದೆ. ನನ್ನ ಗೆಲುವಿಗಾಗಿ ಪ್ರಾರ್ಥಿಸಿದ ಎಲ್ಲಾ ಭಾರತೀಯರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅದು ನೋವಿನ ಕಣ್ಣೀರು ಅಲ್ಲ, ಆನಂದದ ಕಣ್ಣೀರು’ ಎಂದು ತಿಳಿಸಿದ್ದಾರೆ.

[t4b-ticker]
error: Content is protected !!