Puttur-ಪುತ್ತೂರು: ಇಲಾಖೆಗಳ ಸಮನ್ವಯ ಕೊರತೆಯಿಂದ ರಸ್ತೆ ಕಾಮಗಾರಿ ವಿಳಂಬ – ಶಾಸಕರು ಮುತುವರ್ಜಿ ವಹಿಸಬೇಕು : ಬಿಜೆಪಿ ಮುಖಂಡ ಪ್ರಸನ್ನ ದರ್ಬೆ

Picture of Savistara

Savistara

Bureau Report

ಪುತ್ತೂರು: ‘ವಿವಿಧ ಇಲಾಖೆಗಳ ನಡುವೆ ಸೂಕ್ತ ಸಮನ್ವಯ (ಹೊಂದಾಣಿಕೆ) ಇಲ್ಲದಿರುವುದೇ ಪುತ್ತೂರು ಕ್ಷೇತ್ರದಲ್ಲಿ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗಲು ಮುಖ್ಯ ಕಾರಣ’ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಪ್ರಕೋಷ್ಟಗಳ ಸಹ ಸಂಯೋಜಕ ಪ್ರಸನ್ನ ದರ್ಬೆ ಆರೋಪಿಸಿದ್ದಾರೆ.ಅವರು ಬೊಳುವಾರಿನಿಂದ ಹಾರಾಡಿಯವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಅಸಮರ್ಪಕ ಹಾಗೂ ಕಳಪೆಯಾಗಿದೆ ಎಂಬ ಆರೋಪದ ಕುರಿತು ಮಾತನಾಡಿದರು.

ಇದು ಸ್ಟೇಟ್ ಹೈವೆ ಪ್ರೊಜೆಕ್ಟ್ (ರಾಜ್ಯ ಹೆದ್ದಾರಿ ಯೋಜನೆ) ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ 1.8ಕಿ.ಮೀ. ರಸ್ತೆ ಕಾಮಗಾರಿ. ಇದನ್ನು ಗುತ್ತಿಗೆದಾರರಿಗೆ ಕಳೆದ 8 ತಿಂಗಳುಗಳಿಂದ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಅವರ ಬೇಸರ ವ್ಯಕ್ತಪಡಿಸಿದ್ದಾರೆ.

“ಹಿಂದೆ ನಮ್ಮ ಶಾಸಕರು ಅಧಿಕಾರದಲ್ಲಿದ್ದಾಗ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭವಾಗುವ ಮುನ್ನವೇ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಒಂದೆಡೆ ಸೇರಿಸಿ ಸಮನ್ವಯದೊಂದಿಗೆ ಕೆಲಸ ಮಾಡಿಸಲಾಗುತ್ತಿತ್ತು. ಆದರೆ, ಇಂದಿನ ಸರ್ಕಾರಕ್ಕೆ ಇಲಾಖೆಗಳನ್ನು ಒಟ್ಟು ಸೇರಿಸಿ ಕೆಲಸ ಮಾಡಿಸಿ ಲ್ಲ. ಪರಿಣಾಮವಾಗಿ ಪ್ರತಿಯೊಂದು ಇಲಾಖೆಯೂ ಒಂದೊಂದು ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದು, ಕಾಮಗಾರಿಗಳು ವಿಳಂಭವಾಗುತ್ತಿವೆ.. ಈ ರಸ್ತೆ ಕೆಲಸ ಶೀಘ್ರ ಪೂರ್ಣಗೊಳ್ಳಬೇಕಾದರೆ ಸ್ಥಳೀಯ ಶಾಸಕರು ತಕ್ಷಣವೇ ಮುತುವರ್ಜಿ ವಹಿಸಬೇಕು.

“ಪ್ರಸನ್ನ ದರ್ಬೆ, ದ.ಕ. ಜಿಲ್ಲಾ ಪ್ರಕೋಷ್ಟಗಳ ಸಹ ಸಂಯೋಜಕರು

ಬೊಳುವಾರು-ಹಾರಾಡಿ ರಸ್ತೆ ವೀಕ್ಷಣೆ: ತಿಂಗಳ ಗಡುವು ನೀಡಿದ ಬಿಜೆಪಿ

ಬೊಳುವಾರಿನಿಂದ ಹಾರಾಡಿಯವರೆಗಿನ ರಸ್ತೆ ಕಾಮಗಾರಿ ಅಸಮರ್ಪಕ ಹಾಗೂ ಕಳಪೆಯಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಬಿಜೆಪಿ ಪ್ರಮುಖರು ಮಂಗಳವಾರ ಬೊಳುವಾರಿನಿಂದ ಹಾರಾಡಿಯವರೆಗೆ ಪಾದಯಾತ್ರೆ ನಡೆಸಿ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದರು.ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿ ಆಟೋ ಚಾಲಕರು ಹಾಗೂ ಸ್ಥಳೀಯ ಸಾರ್ವಜನಿಕರಿಂದ ದೂರುಗಳನ್ನು ಆಲಿಸಿದ ಬಿಜೆಪಿ ಮುಖಂಡರು, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು..

ಸಾರ್ವಜನಿಕರ ಪ್ರಮುಖ ದೂರುಗಳು:

ಕುಡಿಯುವ ನೀರು ಕಡಿತ: ಕಾಮಗಾರಿಯ ಅವೈಜ್ಞಾನಿಕತೆಯಿಂದಾಗಿ ಕಳೆದ ಒಂದು ತಿಂಗಳಿನಿಂದ ಸುಮಾರು 15 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಡಿತಗೊಂಡಿದೆ. ಈ ಬಗ್ಗೆ ಸ್ಥಳದಲ್ಲೇ ಪೌರಾಯುಕ್ತರಿಗೆ ಕರೆ ಮಾಡಿದ ಸಂಜೀವ ಮಠಂದೂರು, ನೀರು ಪೂರೈಕೆಯನ್ನು ತಕ್ಷಣವೇ ಸರಿಪಡಿಸುವಂತೆ ಒತ್ತಾಯಿಸಿದರು.50ಅಪಾಯಕಾರಿ ರಸ್ತೆ ಬದಿ: ನೂತನ ಕಾಂಕ್ರೀಟ್ ರಸ್ತೆಯ ಬದಿಗೆ ಮಣ್ಣು ಹಾಕದಿರುವುದರಿಂದ ವಾಹನ ಸವಾರರು ಹಾಗೂ ಹಾದಿಹೋಕರಿಗೆ ಸದಾ ಅಪಘಾತದ ಭೀತಿ ಎದುರಾಗಿದೆ.ಗುತ್ತಿಗೆದಾರರನ್ನು ‘ಬ್ಲ್ಯಾಕ್ ಲಿಸ್ಟ್’ಗೆ ಹಾಕಿಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ (PWD) ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಶ್ ರೈ ಅವರನ್ನು ತರಾಟೆಗೆ ತೆಗೆದುಕೊಂಡ ಸಂಜೀವ ಮಠಂದೂರು, ಟೆಂಡ‌ರ್ ನಿಯಮಾವಳಿಯಂತೆ ಕಳೆದ ಡಿಸೆಂಬರ್‌ನಲ್ಲೇ ಮುಗಿಯಬೇಕಿದ್ದ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.”ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರನ್ನು ತಕ್ಷಣವೇ ಕಪ್ಪು ಪಟ್ಟಿಗೆ (ಬ್ಲ್ಯಾಕ್ ಲಿಸ್ಟ್) ಸೇರಿಸಿ, ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಯ ಆದ್ಯತೆ ನೀಡಬೇಕು. ನಿಯಮಿತ ಕಾಲಮಿತಿಯಲ್ಲಿ ಕೆಲಸ ಮುಗಿಯದೆ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಒಂದು ತಿಂಗಳೊಳಗೆ ಕಾಮಗಾರಿ ಸಂಪೂರ್ಣಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ಎದುರಿಸಲು ಸಿದ್ಧರಾಗಿ” ಎಂದು ಇಲಾಖೆಯ ಅಧಿಕಾರಿಗಳಿಗೆ ಮಾಜಿ ಶಾಸಕರು ಎಚ್ಚರಿಕೆ ನೀಡಿದರು.

[t4b-ticker]
error: Content is protected !!