ನವದೆಹಲಿ: ಇಂದಿನ ಯುವಜನಾಂಗವು ಪ್ರಶ್ನೆ ಕೇಳದೇ ಯಾವುದನ್ನು ಕೂಡ ಸುಮ್ಮನೆ ಒಪ್ಪಿಕೊಳ್ಳುವುದಿಲ್ಲ. ಕುರುಡಾಗಿ ಒಪ್ಪಿಕೊಳ್ಳುವ ಕಾಲ ಮುಗಿದಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಶನಿವಾರ(ಜುಲೈ 25) ಹೇಳಿದ್ದಾರೆ.
ನವದೆಹಲಿಯಲ್ಲಿ ವಿಶ್ವಮಾಂಗಲ್ಯ ಸಭಾ ಆಯೋಜಿಸಿದ್ದ ಎರಡು ದಿನಗಳ ಯುಗಾನುಕೂಲ ಮಾತೃತ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.ನಾವು ಯುವಕರಾಗಿದ್ದಾಗಿನ ಕಾಲವು ವಿಧೇಯತೆಯಿಂದ ಕೂಡಿತ್ತು. ಆದರೆ, ಈಗ ಆಗಿಲ್ಲ. ಹಿರಿಯರ ಸಲಹೆ ಮತ್ತು ಸೂಚನೆಗಳನ್ನು ಇಂದಿನ ಯುವಜನಾಂಗವು ಸುಮ್ಮನೆ ಒಪ್ಪಿಕೊಳ್ಳುವುದಿಲ್ಲ. ಅವರು ಅದನ್ನು ಪ್ರಶ್ನಿಸುತ್ತಾರೆ. ಅವರಿಂದ ವಿವರಣೆಯನ್ನು ನಿರೀಕ್ಷಿಸುತ್ತಾರೆ ಎಂದು ಹೇಳಿದ್ದಾರೆ.ಪ್ರಶ್ನೆ ಕೇಳಿದ ಯುವಜನತೆಗೆ ನಾವು ಉತ್ತರಿಸಬೇಕು. ಅವರೊಂದಿಗೆ ಸಂವಾದ ಮಾಡಬೇಕು. ಅವರಿಗೆ ಆಜ್ಞೆಗಳನ್ನು ನೀಡುವುದಲ್ಲ. ಅವರೊಂದಿಗಿನ ಚರ್ಚೆಯನ್ನು ಪ್ರೋತ್ಸಾಹಿಸಿ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಪ್ರತಿಭಟನೆ ನಡೆಯುತ್ತಿರುವ ವೇಳೆಯೇ ಮೋಹನ್ ಭಾಗವತ್ ಅವರು ಈ ರೀತಿಯ ಹೇಳಿಕೆ ನೀಡಿದ್ದು, ಜಾಲತಾಣಗಳಲ್ಲಿ ನೆಟ್ಟಿಗರು ಅವರ ಕಾಲೆಯುತ್ತಿದ್ದಾರೆ.









































