ಸುಳ್ಯ: ಮುಜರಾಯಿ ವ್ಯಾಪ್ತಿಗೆ ಒಳಪಟ್ಟ ಕಾಯರ್ತೋಡಿ ದೇವಸ್ಥಾನ ಅಧ್ಯಕ್ಷರಾದ ಎಂ.ವಿ ವೆಂಕಪ್ಪ ಗೌಡರು ಪಕ್ಷ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಮುಜರಾಯಿ ನಿಯಮ ಗಳನ್ನು ಉಲ್ಲಂಘಿಸಿದ್ದಾರೆಂದು ಬಿಜೆಪಿ ಪ್ರಮುಖರು ಆರೋಪಿಸಿದ್ದಾರೆ. ದೇವಸ್ಥಾನ ಅಧ್ಯಕ್ಷರಾದವರು ಪಕ್ಷ ಚಟುವಟಿಕೆಯಿಂದ ದೂರವಿರಬೇಕು,ರಾಜಕೀಯ ಹೇಳಿಕೆಯಿಂದ ಅಂತರವಿರಬೇಕು ಮುಜರಾಯಿ ಬೈಲಾ ಪ್ರಕಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯಿ ದತ್ತಿ ತಿದ್ದುಪಡಿ ಅಧಿನಿಯಮ 2011ರ ಸೆಕ್ಷನ್ 25(3) ಅನರ್ಹತೆಗಳೊಂದಿಗೆ ಹಾಗೂ ಕಾಯಿದೆಯ 2ನೆ ತಿದ್ದುಪಡಿ ಕಲಂ 25(2)ಡಿ ಅನ್ವಯ ಯಾವುದೇ ಹಂತದಲ್ಲಿ ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗಿದ್ದಲ್ಲಿ ಅಂತವರ ಸದಸ್ಯತ್ವ ಸಹಜವಾಗಿ ರದ್ದಾಗಲಿದೆಯೆಂದು ನಿಯಮವಿದೆ ಹಾಗಿದ್ದಗಲೂ ವೆಂಕಪ್ಪ ಗೌಡರು ಕಾಂಗ್ರೆಸ್ ಪಕ್ಷದ ಚಟುವಟಿಕೆಯಲ್ಲಿ ಬಹಿರಂಗವಾಗಿ ತೊಡಗಿಸಿಕೊಳ್ಳುತ್ತಿದ್ದು ಆದಲ್ಲದೆ ಎಐಸಿಸಿ ಸಂಘಟನ್ ಸೃಜನ್ ಅಭಿಯಾನ ಚಿಕ್ಕಮಗಳೂರು ಜಿಲ್ಲೆಯ ವೀಕ್ಷಕರಾಗಿ ಪಕ್ಷ ಇವರನ್ನು ನೇಮಕ ಮಾಡಿದ್ದೂ ಈ ಹಿನ್ನಲೆಯಲ್ಲಿ ಮುಜರಾಯಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.ದೇವಾಲಯದ ಆಡಳಿತ ಬೇಕಾ? ರಾಜಕೀಯ ಬೇಕಾ? ವೆಂದು ಬಿಜೆಪಿ ಗರು ಪೋಸ್ಟರ್ ಮೂಲಕ ಪ್ರಶ್ನಿಸಿದ್ಧಾರೆ
ಮುಜರಾಯಿ ದೇವಸ್ಥಾನ ಅಧ್ಯಕ್ಷರಾಗಿ ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯತೆ ಆರೋಪ| ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡರ ಧೋರಣೆಗೆ ಬಿಜೆಪಿ ಆಕ್ಷೇಪ, ಕ್ರಮಕ್ಕೆ ಅಗ್ರಹ
Savistara
Bureau Report
[t4b-ticker]








































