ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘಕ್ಕೆ ಜಾಗ ಮಂಜೂರಾತಿ ವಿಳಂಬ ವಿಚಾರ | ತಕ್ಷಣ ಜಾಗ ಹಸ್ತಾಂತರಿಸಲು ಅಧಿಕೃತ ಅದೇಶ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಸಂಸದ ಕ್ಯಾ ಚೌಟ ಒತ್ತಾಯ

Picture of Savistara

Savistara

Bureau Report

ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕರಿಗಾಗಿ ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘವು ಕಳೆದ ಹಲವು ವರ್ಷಗಳಿಂದ 10 ಸೆಂಟ್ಸ್ ಜಾಗ ಮಂಜೂರಾತಿಗಾಗಿ ಕಚೇರಿಗಳಿಗೆ ಅಲೆದಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆಯೆಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಸದ ಕ್ಯಾ ಬ್ರಿಜೇಶ್ ಚೌಟ ತಿಳಿಸಿದ್ದಾರೆ ಸಂಸದನಾಗಿ ಮಾತ್ರವಲ್ಲದೆ, ಒಬ್ಬ ಯೋಧನಾಗಿಯೂ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ ಸೈನಿಕರ ತ್ಯಾಗ ಮತ್ತು ಕಷ್ಟದ ಸ್ಪಷ್ಟ ಅರಿವು ನನಗಿದೆ. ದೇಶದ ಗಡಿಯಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಯೋಧರ ಈ ಬೇಡಿಕೆ ನೂರಕ್ಕೆ ನೂರರಷ್ಟು ನ್ಯಾಯಯುತವಾದದ್ದು. ಈ ವಿಷಯವಾಗಿ ನಾನು ಖುದ್ದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳ ಜತೆ ಮತ್ತೊಮ್ಮೆ ಮಾತನಾಡಿ, ಜಾಗ ಮಂಜೂರಾತಿ ಪ್ರಕ್ರಿಯೆ ವಿಳಂಬವಾಗಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ.ಈ ವಿಚಾರವಾಗಿ ನಾನು 6 ತಿಂಗಳ ಮುಂಚೆ ಖುದ್ದಾಗಿ ವಿಚಾರಿಸಿ, ಫಾಲೋಆಪ್ ಮಾಡಿದ ಕಾರಣ ಕಡತವು ಪುತ್ತೂರು ಎಸಿ ಕಚೇರಿಗೆ ಬಂದು ಅಲ್ಲಿಂದ ಅದು ತಹಸೀಲ್ದಾರರ ಬಳಿಗೆ ಹೋಗಿತ್ತು. ಕಡತವು ನಂತರ ಜಿಲ್ಲಾಧಿಕಾರಿಗೆ ಬಂದು ಸರ್ಕಾರದ ಮಟ್ಟದಲ್ಲಿ ಸೂಕ್ತ ಮಂಜೂರಾತಿ ದೊರೆಯಬೇಕಿದೆ. ಮಾತೃಭೂಮಿಯ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸಿದ ಗೌರವಾನ್ವಿತ ಯೋಧರನ್ನು ಆಡಳಿತಾತ್ಮಕ ವಿಳಂಬದಿಂದಾಗಿ ಹೀಗೆ ಕಾಯಿಸುವುದು ಅತ್ಯಂತ ವಿಷಾದನೀಯ. ಆದ್ದರಿಂದ ರಾಜ್ಯ ಸರ್ಕಾರವು ವಿಳಂಬ ಧೋರಣೆ ತೋರದೆ, ತಕ್ಷಣವೇ ಸ್ಪಂದಿಸಿ ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘಕ್ಕೆ ಜಾಗವನ್ನು ಹಸ್ತಾಂತರಿಸಲು ಅಧಿಕೃತ ಆದೇಶ ಹೊರಡಿಸಬೇಕು ಎಂದು ನನ್ನ ಆಗ್ರಹವೂ ಆಗಿದೆ. ಅಲ್ಲದೇ ನಮ್ಮ ಯೋಧರ ಹಕ್ಕಿಗಾಗಿ ಮತ್ತು ಅವರ ಗೌರವಕ್ಕಾಗಿ ನಾನು ಸದಾ ಅವರ ಜೊತೆಗಿದ್ದೇನೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!