ಜಗತ್ತನ್ನೇ ಗೆದ್ದಷ್ಟು ಸಂತಸವಾಗಿದೆ; ಅನಾಹತ್ ಸಿಂಗ್

Picture of Savistara

Savistara

Bureau Report

ನವದೆಹಲಿ: ವಿಶ್ವ ಜೂನಿಯರ್ ಸ್ಮಾಷ್ ಚಾಂಪಿಯನ್‌ಷಿಪ್‌ನಮಹಿಳಾ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ಅನಾಹತ್ ಸಿಂಗ್ ಅವರು ತಾವಿನ್ನೂ ‘ಕನಸಿನಲ್ಲಿ ತೇಲುತ್ತಿರುವಂತೆ ಭಾಸವಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕೆನಡಾದ ಒಂಟಾರಿಯೊದಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಅನಾಹತ್ 11-3, 11-7, 11-9ರಿಂದ ಎರಡನೇ ಶ್ರೇಯಾಂಕದ ರುಕಯ್ಯಾ ಸಲೀಂ (ಈಜಿಪ್ಟ್) ಅವರನ್ನು ಮಣಿಸಿದರು. ಇದರೊಂದಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಭಾರತದ ಮೊದಲ ಸ್ಪರ್ಧಿ ಎಂಬ ಹಿರಿಮೆಗೆ ಪಾತ್ರರಾದರು. ಕಳೆದ ಆವೃತ್ತಿಯಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು.“ಈ ಪ್ರಶಸ್ತಿಯು ನನಗೆ ಅತ್ಯಂತ ಮೌಲ್ಯಯುತವಾದುದು. ಜೂನಿಯ‌ರ್ ವಿಭಾಗದಲ್ಲಿ ಸ್ಪರ್ಧಿಸಲು ಇದು ಕೊನೆಯ ಅವಕಾಶವಾಗಿತ್ತು. ಇಂದು ಜಗತ್ತನ್ನೇ ಗೆದ್ದಷ್ಟು ಸಂತಸವಾಗಿದೆ’ ಎಂದು ವಿಶ್ವದ 20ನೇ ರ್ಯಾಂಕ್‌ನ ಅನಾಹತ್ ಗೆಲುವಿನ ಬಳಿಕ ಸಂತಸಪಟ್ಟರು.“ಕಳೆದ ನಾಲ್ಕು ವರ್ಷಗಳಿಂದ ನಾನು ಸೆಮಿಫೈನಲ್‌ ಮತ್ತು ಕ್ವಾರ್ಟ‌್ರಫೈನಲ್ ಹಂತದಲ್ಲಿ ಸೋಲುತ್ತಿದ್ದೆ. ಆ ಬಗ್ಗೆ ಯಾರಾದರೂ ಕೇಳಿದರೆ, ‘ಈ ಟೂರ್ನಿ ನನಗೊಂದು ಶಾಪ’ ಎಂದು ಹೇಳುತ್ತಿದ್ದೆ. ಟೂರ್ನಿಯಲ್ಲಿ ಈ ಹಿಂದೆ ಉತ್ತಮವಾಗಿ ಆಡಲು ಸಾಧ್ಯವಾಗಿರಲಿಲ್ಲ’ ಎಂದು ದೆಹಲಿಯ 18 ವರ್ಷದ ಅನಾಹತ್ ಹೇಳಿದರು.

ಜೂನಿಯ‌ರ್ ಹಂತದಲ್ಲಿ ಇದು ಅವರ ಕೊನೆಯ ವರ್ಷವಾಗಿದ್ದರಿಂದ ಈ ಗೆಲುವು ಇನ್ನಷ್ಟು ವಿಶೇಷವಾಗಿದೆ. 2005ರ ನಂತರ ಟೂರ್ನಿಯ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಅನುಭವಿ ಜೋಸ್ನಾ ಚಿಣ್ಣಪ್ಪ ಅವರು 21 ವರ್ಷಗಳ ಹಿಂದೆ ಈ ಸಾಧನೆ ಮಾಡಿದ್ದರು.’ಎದುರಾಳಿಯ ಮುಂದೆ ಒತ್ತಡಕ್ಕೆ ಒಳಗಾದರೆ ಕೆಟ್ಟದಾಗಿ ಆಡುತ್ತೇನೆ ಎಂದು ನನಗೆ ತಿಳಿದಿತ್ತು. ಆದ್ದರಿಂದ ನಾನು ಕೋರ್ಟ್‌ಗೆ ಇಳಿದು ನನ್ನ ಹೊಡೆತಗಳನ್ನು ಸರಿಯಾಗಿ ಪ್ರಯೋಗಿಸಿದೆ. ವಿಶ್ವ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಡುವ ಪ್ರತಿಯೊಂದು ಕ್ಷಣವನ್ನೂ ನಾನು ಆನಂದಿಸಲು ಬಯಸಿದ್ದೆ’ ಎಂದು ತಿಳಿಸಿದರು.ಅನಾಹತ್‌ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದು, ‘ಅನಾಹತ್ ಅವರ ಈ ಸಾಧನೆಯು ಯುವ ಜನರಲ್ಲಿ ಸ್ಮಾಷ್ ಕ್ರೀಡೆಯನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!