ಸುಳ್ಯ ವಿಧಾನ ಸಭಾ ಕ್ಷೇತ್ರದ ಕನಕಮಜಲು ಗ್ರಾಮದ 190ನೇ ಬೂತ್ ನಲ್ಲಿ ಮನ್ ಕೀ ಬಾತ್ ಕಾರ್ಯಕ್ರಮವು ಶ್ರೀರಾಮ ಭಟ್ ದೇರ್ಕಜೆ ಇವರ ಮನೆಯಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ BDS ವ್ಯಾಸಂಗದಲ್ಲಿ 8 ಚಿನ್ನದ ಪದಕ ಪಡೆದು ಸಾಧನೆ ಮಾಡಿರುವ ಡಾ. ದೀಕ್ಷಾ ದೇರ್ಕಜೆ ಇವರಿಗೆ ನಿವೃತ್ತ ಶಿಕ್ಷಕರಾದ ಪದ್ಮಾವತಿ ಬುಡ್ಲೆಗುತ್ತು ಮತ್ತು ಆನಂದ ಮಾಸ್ತರ್ ಅಕ್ಕಿಮಲೆ ಇವರು ಗೌರವಾರ್ಪಣೆ ಮಾಡಿ ಶುಭ ಹಾರೈಸಿದರು.

ನಂತರ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಾಲ್ಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹೇಮಂತ್ ಮಠ, ಬೂತ್ ಅಧ್ಯಕ್ಷ ಜಗನ್ನಾಥ ಬಿ. ಹೆಚ್, ಕಾರ್ಯದರ್ಶಿ ಸಂತೋಷ್ ನೆಡಿಲು, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಮಂಡಲ ಸಮಿತಿ ಸದಸ್ಯ ಶ್ರೀಧರ ಕುತ್ಯಾಳ, 189 ಬೂತ್ ಅಧ್ಯಕ್ಷ ಹರಿಪ್ರಸಾದ ಮಾಣಿಕೋಡಿ ಕಾರ್ಯದರ್ಶಿ ಶ್ರೀಧರ ಅಡ್ಕಾರ್, ಸಹಕಾರಿ ಸಂಘದ ಉಪಾಧ್ಯಕ್ಷ ವೆಂಕಪ್ಪ ದೇರ್ಕಜೆ, ನಿರ್ದೇಶಕಿ ವಿನುತಾ ಸಾರಕುಟೇಲು,

ಆತ್ಮಾರಾಮ ಭಜನಾ ಮಂದಿರದ ಅಧ್ಯಕ್ಷ ಈಶ್ವರ ಕೊರಂಬಡ್ಕ, ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಸೇರಿದಂತೆ ಬಾಲಚಂದ್ರ BH, ಚೇತನ ಮಾಣಿ ಮಜಲು ಮೋಹನ ಸಾರಕುಟೇಲು, ಚಂದ್ರ ಶೇಖರ ನೆಡಿಲು,ಕಿಶನ್ ದೇವರಗುಂಡ, ಭಾಸ್ಕರ ಉಗ್ಗ ಮೂಲೆ ಭಾಸ್ಕರ ದೇರ್ಕಜೆ, ತ್ರಿಶಾಲ ಕುದ್ಕುಳಿ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
















































