ಭಾರತದ ದಾಳಿಗೆ 35ಕ್ಕೂ ಹೆಚ್ಚು ಪಾಕ್‌ ಸೇನಾಧಿಕಾರಿಗಳ ಸಾವು, ಕರಾಚಿ ದಾಳಿಗೆ ಸನ್ನದ್ಧವಾಗಿದ್ದಾಗ ತಲೆಬಾಗಿದ ಪಾಕ್‌

Picture of Savistara

Savistara

Bureau Report

ಪಹಲ್ಗಾಮ್ ದಾಳಿಯ ನಂತರ, ಭಾರತವು ಆಪರೇಷನ್ ಸಿಂದೂರ್ ಅಡಿಯಲ್ಲಿ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಿತು. ಈ ನಿಖರ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಪಾಕಿಸ್ತಾನದ ದಾಳಿಗಳನ್ನು ಭಾರತ ಯಶಸ್ವಿಯಾಗಿ ವಿಫಲಗೊಳಿಸಿದೆ.

ಆಪರೇಷನ್ ಸಿಂದೂರ್ ಮತ್ತು ಅದರ ನಂತರ ನಡೆದ ಬೆಳವಣಿಗೆಗಳ ಬಗ್ಗೆ ದೇಶದ ಟಾಪ್ ಸೇನಾ ಅಧಿಕಾರಿಗಳು ಭಾನುವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ಒಂದು ದಿನದೊಳಗೆ ಪತ್ರಿಕಾಗೋಷ್ಠಿ ನಡೆದಿದ್ದು, ಆಪರೇಷನ್ ಸಿಂದೂರ್ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಭಯೋತ್ಪಾದನೆಯ ಅಪರಾಧಿಗಳು ಮತ್ತು ಅದರ ಆಯೋಜಕರನ್ನು ಶಿಕ್ಷಿಸಲು ಮತ್ತು ಅವರ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡಲು ಆಪರೇಷನ್ ಸಿಂದೂರ್ ಅಡಿಯಲ್ಲಿ ಒಂಬತ್ತು ಭಯೋತ್ಪಾದಕ ತಾಣದ ಮೇಲೆ ಗುರಿಗಳನ್ನು ಇಟ್ಟಿದ್ದೆವು. ಭಾರತ ನಡೆಸಿದ ನಿಖರ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ 26 ಜನರ ಸಾವಿಗೆ ಕಾರಣವಾದ ನಂತರ ಭಾರತವು ತಕ್ಕ ಉತ್ತರ ನೀಡಲೇಬೇಕಾಯ್ತು ಎಂದರು.ಮೇ 7 ರಂದು ಪಾಕಿಸ್ತಾನದ ಮುರಿಯ್ಕೆಯಲ್ಲಿ ನಡೆದ ದಾಳಿಯ ಸಮಯದಲ್ಲಿ ನಾಶವಾದ ಭಯೋತ್ಪಾದಕರ ಪ್ರಮುಖ ತಾಣಗಳ ಫೋಟೋಗಳನ್ನು ಬಿಡುಗಡೆ ಮಾಡಿದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸಿರ್ ಅಹ್ಮದ್ ಅವರಂತಹ ಪ್ರಮುಖ ಉಗ್ರ ನಾಯಕರು ಸೇರಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ.

ಮೇ 8 ಮತ್ತು ಮೇ 9 ರಂದು ಪಾಕಿಸ್ತಾನದ ಕಡೆಯಿಂದ ದಾಳಿಗೆ ಯತ್ನ ನಡೆದಿದೆ. ಇದನ್ನು ಭಾರತ ಯಶಸ್ವಿಯಾಗಿ ಎಲ್ಲವನ್ನೂ ವಿಫಲಗೊಳಿಸಿದೆ. ಭಾರತದ ವಾಯುನೆಲೆಗಳ ಮೇಲೆ ಪಾಕಿಸ್ತಾನದ ದಾಳಿ ವಿಫಲವಾಗಿದೆ. ನಾಗರಿಕರನ್ನು ಗುರಿಯಾಗಿಸಿ ಪಾಕ್‌ ದಾಳಿ ನಡೆಸಿದೆ. ಆದರೆ ಭಾರತ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಿದೆ. ಇದುವೇ ಭಾರತ ಮತ್ತು ಪಾಕಿಸ್ತಾನಕ್ಕೆ ಇರುವ ವ್ಯತ್ಯಾಸ. ಭಾರತದ ದಾಳಿಗೆ ಪಾಕಿಸ್ತಾನದ 35 ರಿಂದ 40 ಸೇನಾಧಿಕಾರಿಗಳ ಸಾವಾಗಿದೆ ಎಂದು ಇದೇ ವೇಳೆ ಹೇಳಿದ್ದಾರೆ.

ಭಾರತದ ಮೇಲೆ ಪಾಕ್‌ 700 ಡ್ರೋಣ್ ಬಳಸಿ ದಾಳಿ ನಡೆಸಿದೆ ಎಲ್ಲಾ ದಾಳಿಗಳನ್ನು ಭಾರತ ವಾಯುಸೇನೆ ವಿಫಲಗೊಳಿಸಿದೆ. ಭಾರತದ ದಾಳಿಯಿಂದ ಪಾಕಿಸ್ತಾನದ ಪ್ರಮುಖ ವಾಯುನೆಲೆಗಳು ದ್ವಂಸವಾಗಿದೆ. ಪ್ರಮುಖವಾಗಿ ಪಾಕ್ ನ ಸರ್ಗೋಧಾ ವಾಯುನೆಲೆ ಸಂಪೂರ್ಣ ನಾಶವಾಗಿದೆ. ಇದು ಅವರು ಮಾಡಿದ ಪ್ರತಿದಾಳಿಗೆ ನಮ್ಮ ಪ್ರತ್ಯುತ್ತರವಾಗಿತ್ತು ಎಂದು ಸಾಕ್ಷಿ ಸಮೇತ ಭಾರತೀಯ ಸೇನೆ ಸವಿವರ ನೀಡಿದೆ.ಇನ್ನು ಪಾಕಿಸ್ತಾನದ ಪ್ರಮುಖ ನಗರ ಕರಾಚಿ ಮೇಲೆ ದಾಳಿ ನಡೆಸಲು ಮುಂದಾಗಿದ್ದೆವು. ಇದಕ್ಕಾಗಿ ಅರಬ್ಬೀ ಸಮುದ್ರದಲ್ಲಿ ನೌಕಾ ಸೇನೆಯು ಸರ್ವಸನ್ನದ್ಧವಾಗಿತ್ತು. ನಮ್ಮ ನೌಕಾ ಸೇನೆಯ ತಯಾರಿಯನ್ನು ಗಮನಿಸಿದ ಪಾಕ್ ಕದನ ವಿರಾಮಕ್ಕೆ ಮನವಿ ಮಾಡಿಕೊಂಡಿತು. ಇಂದು ಬೆಳಗ್ಗೆ ಕೂಡ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಅದಕ್ಕೆ ತಕ್ಕ ಉತ್ತರ ನೀಡಿದ್ದೇವೆ. ಇನ್ನು ಎಂದಾದರೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದರೆ ಅದಕ್ಕೆ ತಕ್ಕ ಶಾಸ್ತಿ ಮಾಡಲಿದ್ದೇವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನೂ ಕೂಡ ಸೇನಾಧಿಕಾರಿಗಳು ಇದೇ ವೇಳೆ ನೀಡಿದ್ದಾರೆ.ಪಾಕಿಸ್ತಾನ ಅಂತರಾಷ್ಟ್ರೀಯ ಗಡಿರೇಖೆಯನ್ನು ದಾಟಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಇನ್ನು ಆಪರೇಷನ್ ಸಿಂದೂರ್ ಸಮಯದಲ್ಲಿ 5 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಅವರೆಲ್ಲರಿಗೂ ಶ್ರದ್ದಾಂಜಲಿ ಸಲ್ಲಿಸುವುತ್ತೇವೆ. ದೇಶಕ್ಕಾಗಿ ಸೈನಿಕರ ಬಲಿದಾನ ಸದಾ ಶ್ಲಾಘನೀಯ ಎಂದು ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ (ಡಿಜಿಎಂಒ), ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ಎಕೆ ಭಾರ್ತಿ – ಡಿಜಿ ಏರ್ ಆಪರೇಷನ್ಸ್, ಭಾರತೀಯ ನೌಕಾಪಡೆಯ ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರು ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಮೂರು ಸೇನಾ ಪ್ರಮುಖರು ಭಾಗವಹಿಸಿದ್ದರು.

[t4b-ticker]
error: Content is protected !!