ಟಿಎಂಸಿಯ 20 ಸಂಸದರಿಂದ ಕೇಂದ್ರದ ಆಡಳಿತಾರೂಢ ಎನ್‌ಡಿಎಗೆ ಬೆಂಬಲ: ಸ್ಪೀಕರ್‌ಗೆ ಪತ್ರ

Picture of Savistara

Savistara

Bureau Report

ಕೋಲ್ಕತ್ತ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದ್ದು, 20 ಸಂಸದರು ಎನ್‌ಡಿಎಗೆ ಬೆಂಬಲ ಸೂಚಿಸಲು ನಿರ್ಧರಿಸಿದ್ದಾರೆ. ಸಂಸದರು ತಮ್ಮ ನಿಲುವನ್ನು ಲೋಕಸಭಾ ಸ್ಪೀಕರ್ ಡಾ. ಓಂ ಬಿರ್ಲಾ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ ಎಂದು ಪಕ್ಷದ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾ‌ರ್ ಹೇಳಿದ್ದಾರೆ.

ಸದ್ಯ, ಟೆಎಂಸಿಯಲ್ಲಿ 28 ಮಂದಿ ಲೋಕಸಭಾ ಸದಸ್ಯರು ಮತ್ತು 12 ಮಂದಿ ರಾಜ್ಯಸಭಾ ಸದಸ್ಯರಿದ್ದಾರೆ.ಈ ಸಂಬಂಧ ಪಿಟಿಐ ಜೊತೆ ಮಾತನಾಡಿರುವ ಅವರು, ಲೋಕಸಭಾ ಸ್ಪೀಕರ್‌ಗೆ ಪತ್ರ ನೀಡಲಾಗಿದ್ದು, ಕೇಂದ್ರದ ಆಡಳಿತಾರೂಢ ಎನ್‌ಡಿಎಗೆ ಬೆಂಬಲ ನೀಡುವುದಾಗಿ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.’ನಾನೂ ಸೇರಿದಂತೆ ಸುಮಾರು 20 ಸಂಸದರು ಎನ್‌ಡಿಎ ಬೆಂಬಲಿಸುವ ತಮ್ಮ ನಿರ್ಧಾರದ ಕುರಿತಂತೆ ಲೋಕಸಭಾ ಸ್ಪೀಕರ್‌ಗೆ ಪತ್ರದಲ್ಲಿ ತಿಳಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಲೋಕಸಭೆಯಲ್ಲಿ ಮುಖ್ಯಸಚೇತಕರಾಗಿ ಮುಂದುವರಿಯುವುದಾಗಿ ಹೇಳಿದ ಅವರು, ಸಂಸದರ ಜೊತೆ ಸಮಾಲೋಚನೆ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.ಟಿಎಂಸಿ ಪಕ್ಷದ ಆಂತರಿಕ ಬೇಗುದಿ ಬಹಿರಂಗಗೊಂಡು ಹಲವು ಹಿರಿಯ ನಾಯಕರ ರಾಜೀನಾಮೆ, ವಿಧಾನಸಭೆಯಲ್ಲಿ ಬಂಡಾಯ ಬಣದ ನಾಯಕ ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕರಿಸಿದ್ದೂ ಸೇರಿದಂತೆ ಇವೇ ಮುಂತಾದ ಬೆಳವಣಿಗೆಗಳ ನಡುವೆ ಟಿಎಂಸಿ ಸಂಸದರು ಈ ನಿಲುವು ತಳೆದಿದ್ದಾರೆ.

[t4b-ticker]
error: Content is protected !!