ಅಹಿಂದ ನಾಯಕರನ್ನು ಹಿಂದಕ್ಕೆ ತಳ್ಳುವವರು ಈಗಲೂ ಇದ್ದಾರೆ: ಸಚಿವ ಸತೀಶ ಜಾರಕಿಹೊಳಿ

Picture of Savistara

Savistara

Bureau Report

ಬೆಳಗಾವಿ: ‘ಅಹಿಂದ ನಾಯಕರನ್ನು ಹಿಂದಕ್ಕೆ ತಳ್ಳುವ ಕೆಲಸ ಹಿಂದಿನಿಂದಲೂ ನಡೆದು ಬಂದಿದೆ. ಈಗಲೂ ಹಿಂದೆ ತಳ್ಳುವವರು ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲವನ್ನೂ ಮೀರಿ ನಾವು ಬೆಳೆಯಬೇಕು; ಬೆಳೆಯುತ್ತೇವೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

‘ಪ್ರಸಕ್ತ ಸರ್ಕಾರದಲ್ಲಿ ಅಹಿಂದ ನಾಯಕರಿಗೆ ಹಿನ್ನಡೆ ಆಗಿದೆಯೇ? ಅಪಪ್ರಚಾರಗಳು ನಡೆಯುತ್ತಿವೆಯೇ’ ಎಂಬ ಪ್ರಶ್ನೆಗೆ ನಗರದಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಅಂಥ ಕೆಲಸಗಳು ನಡೆದೇ ಇವೆ. ಸದ್ಯ ನನ್ನ ಬಗ್ಗೆ ಅಪಪ್ರಚಾರ ಮಾಡಿದವರ ವಿರುದ್ಧ ತನಿಖೆ ನಡೆದಿದೆ’ ಎಂದರು.“ಈಗ ನನಗೆ ಸಿಕ್ಕ ಸ್ಥಾನಕ್ಕೆ ನಾನು ತೃಪ್ತನಾಗಿದ್ದೇನೆ. ಕಾಂಗ್ರೆಸ್‌ನಲ್ಲಿ ತಾಳ್ಮೆಯಿಂದ ಕಾಯುವುದು ಮುಖ್ಯ. ಕಾಯ್ದವರಿಗೆ ಎಲ್ಲವೂ ಸಿಕ್ಕಿದೆ. ನಾನು ಕೂಡ 2028ರವರೆಗೂ ಕಾಯುತ್ತೇನೆ. ಯಾರ ಮೇಲೂ ಅಸಮಾಧಾನ ಇಲ್ಲ’ ಎಂದರು.“ನಿಮಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಿಸುವಲ್ಲಿ ಸಿದ್ದರಾಮಯ್ಯ ಹಿಂದೆ ಸರಿದಿದ್ದು ಏಕೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ, ‘ಸದ್ಯ ಪರಮೇಶ್ವರಪ್ಪ ಅವರಿಗೆ ಕೊಡಿಸಿದ್ದಾರೆ. ಮುಂದೆ ನೋಡೋಣ. ನನಗೆ ಸಿಗುವ ಗೌರವ ಸಿಕ್ಕಿದೆ ಎಂಬುದು ನನ್ನ ಅನಿಸಿಕೆ. ಆದರೆ, ನಮ್ಮ ಜನ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಹಾಗಾಗಿ, ಅವರಿಗೆ ಬೇಸರವಾಗುವುದು ಸಹಜ’ ಎಂದೂ ಹೇಳಿದರು.

[t4b-ticker]
error: Content is protected !!