ನವದೆಹಲಿ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನಸಂಘರ್ಷ ಮತ್ತೆ ತೀವ್ರಗೊಂಡಿದ್ದು, ಇರಾನ್‌ಗೆ ತೆರಳದಂತೆ ತನ್ನ ಪ್ರಜೆಗಳಿಗೆ ಭಾರತ ಸಲಹೆ ನೀಡಿದೆ. ಅಲ್ಲದೇ, ಯಾವುದೇ ಲಭ್ಯವಿರುವ ಸಾರಿಗೆ ಮೂಲಕ ಕೂಡಲೇ ಇರಾನ್ ತೊರೆಯುವಂತೆ ಅಲ್ಲಿರುವ ಭಾರತೀಯರಿಗೆ ಸೂಚಿಸಿದೆ.
ಇರಾನ್ ಮತ್ತು ಇಸ್ರೇಲ್ ನಡುವೆ ಮತ್ತೆ ಕ್ಷಿಪಣಿ ದಾಳಿಗಳು ಆರಂಭಗೊಂಡಿದ್ದು, ಟೆಹರಾನ್‌ನ ಇಮಾಮ್ ಖಮೇನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾನದ ಸುತ್ತಲಿನ ವಾಯುಪ್ರದೇಶವನ್ನು ಇರಾನ್ ಬಂದ್ ಮಾಡಿದೆ. ಈ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತವು ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.ಸಂಧಾನ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ ಇರಾನ್‌ನ ಹಲವು ನಗರಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ.ಲೆಬನಾನ್‌ನ ಬೈರೂತ್ ಹೊರವಲಯದ ಹಿಬ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಇರಾನ್ ಭಾನುವಾರ ಇಸ್ರೇಲ್‌ನತ್ತ ಕ್ಷಿಪಣಿ ಹಾರಿಸಿದ ನಂತರ ಸಂಘರ್ಷ ತೀವ್ರಗೊಂಡಿದೆ.
ಟೆಹರಾನ್ ಸೇರಿ ಹಲವು ನಗರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ದೇಶದ ವಾಯವ್ಯದಲ್ಲಿ ಪೆಟ್ರೋಕೆಮಿಕಲ್ ಕಂಪನಿಯೊಂದನ್ನು ಇಸ್ರೇಲ್ ಉಡಾಯಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮಹಶಹರ್‌ನ ಕರೂನ್ ಪೆಟ್ರೊಕೆಮಿಕಲ್ ಕಂಪನಿಯನ್ನು ನಾಶ ಮಾಡಲಾಗಿದೆ ಎಂದು ವರದಿ ತಿಳಿಸಿದೆ.ವೈಮಾನಿಕ ದಾಳಿಯ ನಂತರ ವಿಶೇಷ ಪೆಟ್ರೋಕೆಮಿಕಲ್ ಆರ್ಥಿಕ ವಲಯದಲ್ಲಿ ಕಾರ್ಯನಿರ್ವಸುತ್ತಿದ್ದ ಕೆಲಸಗಾರರನ್ನು ಕಂಪನಿಯು ಸ್ಥಳಾಂತರಿಸಿದೆ ಎಂದು ಸುದ್ದಿ ಸಂಸ್ಥೆ ಐಆರ್‌ಎನ್‌ಎ ತಿಳಿಸಿದೆ.2002-2003ರಲ್ಲಿ ಸ್ಥಾಪನೆಯಾದ ಕರೂನ್ ಪೆಟ್ರೋಕೆಮಿಕಲ್ ಕಂಪನಿಯು ಇರಾನ್‌ನ ಮೊದಲ ಪೆಟ್ರೊಕೆಮಿಕಲ್ ಕಂಪನಿಯಾಗಿದೆ.ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಅಂಕಿಅಂಶಗಳ ಪ್ರಕಾರ ಸಂಸ್ಥೆಯು ವಾರ್ಷಿಕವಾಗಿ 2,00,000 ಟನ್‌ಗಳಿಗಿಂತ ಹೆಚ್ಚು ಪೆಟ್ರೊಕೆಮಿಕಲ್ ಉತ್ಪನ್ನಗಳನ್ನು ಉತ್ಪಾದಿಸುತ್ತದೆ.









































