ನವದೆಹಲಿ: “ಭಾರತದ ನಿಲುವು ತುಂಬಾ ಸ್ಪಷ್ಟವಾಗಿದ್ದು, ಭ*ಯೋತ್ಪಾದನೆ ಮತ್ತು ಮಾತುಕತೆ,ಭ*ಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ಸಾಗಲು ಸಾಧ್ಯವಿಲ್ಲ,ಹಾಗೆಯೇ ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.ಆಪರೇಷನ್ ಸಿಂದೂರ ಬಳಿಕ ಸೋಮವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಜಗತ್ತಿಗೆ ಸಂದೇಶ ನೀಡಿದರು. “ಖಂಡಿತವಾಗಿಯೂ ಇದು ಯುದ್ಧದ ಯುಗವಲ್ಲ, ಆದರೆ ಇದು ಭ*ಯೋತ್ಪಾದನೆಯ ಯುಗವೂ ಅಲ್ಲ. ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯು ಉತ್ತಮ ಜಗತ್ತಿನ ಖಾತರಿಯಾಗಿದೆ” ಎಂದರು.”ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನ ಸರಕಾರ ಭ*ಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ರೀತಿ, ಒಂದು ದಿನ ಪಾಕಿಸ್ತಾನವನ್ನೇ ನಾಶಪಡಿಸುತ್ತದೆ.ಪಾಕಿಸ್ತಾನ ಉಳಿಯಬೇಕಾದರೆ, ತನ್ನ ಭ*ಯೋತ್ಪಾದಕ ಮೂಲಸೌಕರ್ಯವನ್ನು ನಾಶಪಡಿಸಬೇಕು” ಎಂದು ಗುಡುಗಿದರು.
ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ, ಪಾಕಿಸ್ತಾನದ ಭಯೋತ್ಪಾದಕರು ಮತ್ತು ಮಿಲಿಟರಿ ಸ್ಥಾಪನೆಗಳ ವಿರುದ್ಧದ ನಮ್ಮ ಪ್ರತೀಕಾರದ ಕ್ರಮವನ್ನು ನಾವು ಸ್ಥಗಿತಗೊಳಿಸಿದ್ದೇವೆ. ಮುಂದಿನ ದಿನಗಳಲ್ಲಿ, ಪಾಕಿಸ್ತಾನವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯನ್ನು ಅದು ಅಳವಡಿಸಿಕೊಳ್ಳುವ ಮನೋಭಾವದ ಆಧಾರದ ಮೇಲೆ ನಾವು ಅಳೆಯುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಭ*ಯೋತ್ಪಾದಕರ ನೆಲೆಗಳನ್ನು ನಾಶಮಾಡಿದ್ದೇವೆ, ಪಾಕಿಸ್ತಾನವು ತನ್ನ ಕಡೆಯಿಂದ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ಅಥವಾ ಮಿಲಿಟರಿ ಕ್ರಮಗಳು ನಡೆಯುವುದಿಲ್ಲ ಎಂದು ಭರವಸೆ ನೀಡುವಂತೆ ಒತ್ತಾಯಿಸಿದ್ದೇವೆ. ಎಚ್ಚರಿಕೆಯಿಂದ ಪರಿಗಣಿಸಿ, ಪಾಕಿಸ್ತಾನದ ಭ*ಯೋತ್ಪಾದಕ ಕೇಂದ್ರಗಳು ಮತ್ತು ಮಿಲಿಟರಿ ಕೇಂದ್ರಗಳ ವಿರುದ್ಧದ ನಮ್ಮ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ಆದಾಗ್ಯೂ, ನಾವು ಜಾಗರೂಕರಾಗಿರುತ್ತೇವೆ ಮತ್ತು ಭವಿಷ್ಯದಲ್ಲಿ ಅವರ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆ ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಅಡಗುತಾಣಗಳು ಮತ್ತು ಅವರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ಪಡೆಗಳು ನಿಖರವಾದ ದಾಳಿಗಳನ್ನು ನಡೆಸಿವೆ.ಭಯೋತ್ಪಾದಕರು ನಮ್ಮ ಸಹೋದರಿಯರ ಕುಂಕುಮವನ್ನು ಅಳಿಸಿದ್ದರು ಅದಕ್ಕಾಗಿಯೇ ಭಾರತ ಭಯೋತ್ಪಾದನೆಯ ಪ್ರಧಾನ ಕಚೇರಿಗಳನ್ನೇ ನಾಶಪಡಿಸಿತು.ಭಾರತ ನಡೆಸಿದ ದಾಳಿಗಳಲ್ಲಿ 100 ಕ್ಕೂ ಹೆಚ್ಚು ಕ್ರೂರ ಭ*ಯೋತ್ಪಾದಕರು ಹತರಾಗಿದ್ದಾರೆ ಎಂದು ಮೋದಿ ಹೇಳಿದರು.
“ಪಾಕಿಸ್ತಾನದ ಡೋನ್‌ಗಳು ಮತ್ತು ಕ್ಷಿಪಣಿಗಳು ಭಾರತದ ಮುಂದೆ ಒಣಹುಲ್ಲಿನಂತೆ ಚದುರಿಹೋದವು ಎಂಬುದನ್ನು ಜಗತ್ತು ನೋಡಿತು.ಭಾರತದ ಬಲಿಷ್ಠ ವಾಯು ರಕ್ಷಣ ವ್ಯವಸ್ಥೆಯು ಅವುಗಳನ್ನು ಆಕಾಶದಲ್ಲಿಯೇ ನಾಶಪಡಿಸಿತು. ಪಾಕಿಸ್ತಾನ ಗಡಿಯಲ್ಲಿ ದಾಳಿ ಮಾಡಲು ಸಿದ್ಧವಾಗಿತ್ತು, ಆದರೆ ಭಾರತ ಪಾಕಿಸ್ತಾನದ ಎದೆಯ ಮೇಲೆ ದಾಳಿ ಮಾಡಿತು” ಎಂದರು.













































