ಹಾರ್ಮುಜ್ ಜಲಸಂಧಿ ಮತ್ತೆ ಬಂದ್‌: ಭಾರತಕ್ಕೆ ಬರುತ್ತಿದ್ದ 14 ಹಡಗುಗಳು ಇರಾನ್ ವಶ

Picture of Savistara

Savistara

Bureau Report

ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್‌ ಜಲಸಂಧಿ’ಯನ್ನು ಇರಾನ್ ಮತ್ತೆ ಬಂದ್ ಮಾಡಿದೆ. ಶನಿವಾರವಷ್ಟೇ ಈ ಮಾರ್ಗವನ್ನು ತಾತ್ಕಾಲಿಕವಾಗಿ ತೆರೆಯುವುದಾಗಿ ಇರಾನ್ ವಿದೇಶಾಂಗ ಸಚಿವರು ಘೋಷಿಸಿದ್ದರು.ಆದರೆ, ಕೇವಲ 24 ಗಂಟೆ ಕಳೆಯುವಷ್ಟರಲ್ಲಿ ಅಮೆರಿಕದ ದಿಗ್ವಂಧನಗಳನ್ನು ವಿರೋಧಿಸಿ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ ಈ ಜಲಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿದೆ.ಈಗಾಗಲೇ ಭಾರತಕ್ಕೆ ಬರುತ್ತಿದ್ದ 14 ಹಡಗುಗಳನ್ನು ಇರಾನ್ ತಡೆಹಿಡಿದಿದ್ದು, ತನ್ನ ಎಚ್ಚರಿಕೆಯನ್ನು ಮೀರಿ ಮುನ್ನುಗ್ಗುವ ಯಾವುದೇ ಹಡಗನ್ನು ಟಾರ್ಗೆಟ್ ಮಾಡಿ ಹೊಡೆದು ಉರುಳಿಸುವುದಾಗಿ ಗುಡುಗಿದೆ. ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನ ಈ ಬೆದರಿಕೆಗೆ ಬಗ್ಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.ಸದ್ಯ ಪರ್ಷಿಯನ್ ಕೊಲ್ಲಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ನೌಕಾಪಡೆಯ ಅನುಮತಿಯಿಲ್ಲದೆ ಯಾವುದೇ ಹಡಗು ಚಲಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

[t4b-ticker]
error: Content is protected !!