ಇಂದಿನಿಂದ ‘ಮನೆ ಮನೆ ಜನಗಣತಿ’ ಆರಂಭ: ಅಧಿಕಾರಿಗಳು ಬರುವ ಮುನ್ನ ಈ ಮಾಹಿತಿ ರೆಡಿ ಇಟ್ಟುಕೊಳ್ಳಿ!

Picture of Savistara

Savistara

Bureau Report

ಬೆಂಗಳೂರು: ದೇಶದ ಭವಿಷ್ಯ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ‘ಜನಗಣತಿ’ ಪ್ರಕ್ರಿಯೆಯು ದಿನಾಂಕ 19-04-2026ರ ಇಂದಿನಿಂದ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆಗೆ ಬರುವ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ.

ಜನಗಣತಿ ಕಾರ್ಯಕ್ಕಾಗಿ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯತ್ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಗಮನಿಸಬೇಕಾದ ಪ್ರಮುಖ ಅಂಶಗಳು ಇಲ್ಲಿವೆ:

ಸಂದರ್ಶನಕ್ಕೆ ಮುನ್ನ ಹೀಗೆ ಸಿದ್ಧರಾಗಿ:

ಮಾಹಿತಿ ಸಿದ್ಧವಿರಲಿ: ಮನೆಯ ಯಜಮಾನನ ಹೆಸರು, ನಿಖರವಾದ ದೂರವಾಣಿ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಮೊದಲೇ ಬರೆದಿಟ್ಟುಕೊಳ್ಳಿ. ಅಧಿಕಾರಿಗಳು ಬಂದಾಗ ಹುಡುಕಾಡಿ ಸಮಯ ವ್ಯರ್ಥ ಮಾಡಬೇಡಿ.

ತ್ವರಿತ ಸಹಕಾರ: ಅಧಿಕಾರಿಗಳ ಪ್ರಶ್ನೆಗಳಿಗೆ ನಿಖರ ಮತ್ತು ಸ್ಪಷ್ಟ ಉತ್ತರ ನೀಡಿ. ಇದು ಗಣತಿ ಕಾರ್ಯವು ವೇಗವಾಗಿ ಸಾಗಲು ಸಹಾಯ ಮಾಡುತ್ತದೆ.

ಗೌರವವಿರಲಿ: ಅಧಿಕಾರಿಗಳು ನಿಮಗಾಗಿ ಮತ್ತು ದೇಶದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರ ಜೊತೆ ಅಸಮಾಧಾನ ವ್ಯಕ್ತಪಡಿಸದೆ, ಕೇವಲ 10 ನಿಮಿಷಗಳ ಕಾಲ ಅವರಿಗಾಗಿ ಮೀಸಲಿಡಿ.

ದೂರು ಸಲ್ಲಿಸಬೇಡಿ: ಅವರು ಕೇವಲ ಮಾಹಿತಿ ಪಡೆಯಲು ಬಂದಿರುತ್ತಾರೆ. ಸೌಲಭ್ಯ ಸಿಗಲಿಲ್ಲ ಅಥವಾ ಹಣ ಬರಲಿಲ್ಲ ಎಂಬ ದೂರುಗಳನ್ನು ಅವರ ಮುಂದೆ ಹೇಳಬೇಡಿ, ಏಕೆಂದರೆ ಅವರು ಸಮಸ್ಯೆ ಪರಿಹರಿಸುವ ಅಧಿಕಾರಿಗಳಲ್ಲ.

ಗಮನಿಸಬೇಕಾದ ಮಾನವೀಯ ಅಂಶಗಳು:

ಸಾಕು ಪ್ರಾಣಿಗಳ ಬಗ್ಗೆ ಎಚ್ಚರ: ಅಧಿಕಾರಿಗಳು ಬಂದಾಗ ಮನೆಯ ನಾಯಿಗಳನ್ನು ಕಟ್ಟಿಹಾಕಿ ಅಥವಾ ಸುರಕ್ಷಿತ ದೂರವಿರಿಸಿ ಮಾಹಿತಿ ನೀಡಿ.

ಮಾನವೀಯತೆ ಮೆರೆಯಿರಿ: ಈ ವಿಪರೀತ ಬಿಸಿಲಿನಲ್ಲಿ ಕೆಲಸ ಮಾಡುವ ಅವರಿಗೆ ಕನಿಷ್ಠ ಕುಡಿಯಲು ನೀರು ನೀಡಿ, ಕುಳಿತುಕೊಳ್ಳಲು ಹೇಳಿ ಗೌರವಿಸಿ.

ಮಾರ್ಗದರ್ಶನ ಮಾಡಿ: ನಿಮ್ಮ ನೆರೆಹೊರೆಯ ಮನೆಗಳಿಗೆ ಹೋಗಲು ಅವರಿಗೆ ಸರಿಯಾದ ದಾರಿ ತೋರಿಸಿ ಸಹಾಯ ಮಾಡಿ.

ಪರಿಸರ ಕಾಳಜಿ: ಬಿಸಿಲ ಬೇಗೆ ಹೆಚ್ಚಿರುವುದರಿಂದ ಪ್ರಾಣಿ-ಪಕ್ಷಿಗಳಿಗೂ ನಿಮ್ಮ ಮನೆಯ ಹೊರಗೆ ಪಾತ್ರೆಯಲ್ಲಿ ನೀರಿಡಲು ಮರೆಯದಿರಿ.

ಕೊನೆಯ ಮಾತು: ಜನಗಣತಿಯು ಕೇವಲ ಅಂಕಿ-ಅಂಶಗಳ ಸಂಗ್ರಹವಲ್ಲ, ಇದು ದೇಶದ ಅಭಿವೃದ್ಧಿ ಯೋಜನೆಗಳ ರೂಪರೇಷೆಗೆ ಅಡಿಪಾಯ. ಆದ್ದರಿಂದ ನಗುನಗುತ ಅಧಿಕಾರಿಗಳನ್ನು ಸ್ವಾಗತಿಸಿ, ಸಹಕರಿಸಿ ಮತ್ತು ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಿ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!