Srinagar: ಕಾಶ್ಮೀರದಲ್ಲಿ ಹಿಮಪಾತ, ಮಳೆ: ಕಣಿವೆಯಲ್ಲಿ ಕುಸಿದ ತಾಪಮಾನ!

Picture of Savistara

Savistara

Bureau Report

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿಹೊಸದಾಗಿ ಹಿಮಪಾತವಾಗುತ್ತಿದ್ದು, ಬಯಲು ಸೀಮೆಯಲ್ಲಿ ಮಳೆ ಸುರಿಯುತ್ತಿದೆ. ಇದರಿಂದಾಗಿ ರವಿವಾರ ಕಣಿವೆಯಾದ್ಯಂತ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಧಾರಾಕಾರ ಹಿಮಪಾತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಪ್ರಮುಖ ರಸ್ತೆಗಳನ್ನು ಸಂಚಾರಕ್ಕೆ ಸ್ಥಗಿತಗೊಳಿಸಲಾಗಿದೆ.

ಶೋಪಿಯಾನ್‌ ಜಿಲ್ಲೆಯನ್ನು ಪೂಂಚ್-ರಾಜೇರಿ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆ ಬಂದ್ ಆಗಿದೆ.ಸೋನಾಮಾರ್ಗ್‌ ಜೊಜಿಲಾ ಪಾಸ್ ಬಳಿ ಹಿಮ ಸಂಗ್ರಹವಾಗುತ್ತಿರುವ ಕಾರಣ ವಾಹನ ಸಂಚಾರ ನಿಲ್ಲಿಸಲಾಗಿದೆ.

ಗುರೇಜ್ ಕಣಿವೆಯ ತುಲೈಲ್ ಪ್ರದೇಶದಲ್ಲಿ ಹಿಮಪಾತ ಹೆಚ್ಚಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ವಾತಾವರಣದಲ್ಲಿ ಬದಲಾವಣೆ

ಬಾಂಡಿಪೋರಾ ಜಿಲ್ಲೆಯ ಗುರೇಜ್ ಕಣಿವೆ, ಗಂದರ್ಬಲ್ ಜಿಲ್ಲೆಯ ಸೋನಾಮಾರ್ಗ್ ಮತ್ತು ಜೊಜಿಲಾ ಪಾಸ್‌ನ ಎರಡೂ ಬದಿಗಳಲ್ಲಿ ಹಿಮಪಾತ ವರದಿಯಾಗಿದೆ. ಇಂದು ಮುಂಜಾನೆ ಕಣಿವೆಯ ಬಯಲು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದ್ದು, ಇದರಿಂದ ಹಗಲಿನ ತಾಪಮಾನವು ಕೆಲವು ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದೆ. ಚಳಿಯ ವಾತಾವರಣವು ಮರುಕಳಿಸಿದ್ದು, ಜನರು ಮತ್ತೆ ಬೆಚ್ಚಗಿನ ಉಡುಪುಗಳ ಮೊರೆ ಹೋಗಿದ್ದಾರೆ.

ಹವಾಮಾನ ಇಲಾಖೆ ಮುನ್ಸೂಚನೆಇಂದು ದಿನವಿಡೀ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆಯ ವೇಳೆಗೆ ಹವಾಮಾನದಲ್ಲಿ ಸುಧಾರಣೆಯಾಗುವ ನಿರೀಕ್ಷೆಯಿದೆ” ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರು ಮತ್ತು ವಾಹನ ಚಾಲಕರು ರಸ್ತೆ ಸ್ಥಿತಿಗತಿಯನ್ನು ಪರಿಶೀಲಿಸಿದ ನಂತರವೇ ಪ್ರಯಾಣ ಬೆಳೆಸುವಂತೆ ಸೂಚಿಸಲಾಗಿದೆ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!