ರಾಜ್ಯದ ಜನತೆಗೆ ಮತ್ತೆ ‘ಕರೆಂಟ್ ಶಾಕ್’ ! ಪ್ರತಿ ಯೂನಿಟ್‌ಗೆ ದರ ಏರಿಕೆ, ಮೇ 1ರಿಂದ ಜಾರಿ

Picture of Savistara

Savistara

Bureau Report

ಬೆಂಗಳೂರು : ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ ರಾಜ್ಯದ ಜನರಿಗೆ ಶಾಕ್ ಕೊಟ್ಟಿದೆ. ಒಂದು ಯೂನಿಟ್‌ಗೆ 56 ಪೈಸೆ ಮಾಡಿ ಕೆಇಆರ್‌ಸಿ (ಕೆಇಆರ್‌ಸಿ) ಆದೇಶ ಹೊರಡಿಸಲಾಗಿದೆ.ಈ ಹೆಚ್ಚಳವು ಟ್ರೂ ಅಪ್ ಚಾರ್ಜ್ ಎಂಬ ಹೆಸರಿನಲ್ಲಿ ಜಾರಿಗೆ ಬರಲಿದ್ದು, ಮೇ 1, 2026ರಿಂದ ಗ್ರಾಹಕರ ವಿದ್ಯುತ್ ಬಿಲ್‌ನಲ್ಲಿ ಅನ್ವಯವಾಗಲಿದೆ.ಕೆಇಆರ್‌ಸಿ ಹೊರಡಿಸಿರುವ ಆದೇಶದ ಪ್ರಕಾರ, ಈ ಏರಿಕೆಯು 2024-25ರ ಆರ್ಥಿಕ ವರ್ಷದಲ್ಲಿ ಬೆಸ್ಕಾಂಗೆ ಉಂಟಾದ ಆದಾಯದ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ಮಾಡಲಾಗಿದೆ.ಈ ಬೃಹತ್ ಕೊರತೆಯನ್ನು ತುಂಬಿಕೊಳ್ಳಲು ಎಲ್ಲಾ ಎಸ್ಕಾಂಗಳು (ESCOMs) ದರ ಏರಿಕೆ ಪ್ರಸ್ತಾವನೆ ಸಲ್ಲಿಸಿದ್ದವು. KERC ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲು ಅನುಮತಿ ನೀಡಿದೆ.

[t4b-ticker]
error: Content is protected !!