ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ಸುಮ್ಮನೆ ಬಿಡಲ್ಲ: ಪಾಕ್‌ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್‌

Picture of Savistara

Savistara

Bureau Report

ಲಕ್ನೋ: ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ನಾವು ಸುಮ್ಮನೆ ಬಿಡಲ್ಲ ಎಂದು ಪಾಕಿಸ್ತಾನಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಎಚ್ಚರಿಕೆ ನೀಡಿದ್ದಾರೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಲಕ್ನೋದಲ್ಲಿ ‘ಭಾರತ್ ಶೌರ್ಯ ತಿರಂಗ ಯಾತ್ರೆ’ಯನ್ನು ಪ್ರಾರಂಭಿಸಿದ್ದಾರೆ.

ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿ, ಅವರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.- ನಮ್ಮ ಸೈನಿಕರು ‘ನಾವು ಯಾರಿಗೂ ತೊಂದರೆ ನೀಡುವುದಿಲ್ಲ. ಆದರೆ ಯಾರಾದರೂ ನಮಗೆ ತೊಂದರೆ ನೀಡಿದರೆ ನಾವು ಅವರನ್ನು ಬಿಡುವುದಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

ಅಮಾನವೀಯ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಯೋಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಇಡೀ ಜಗತ್ತು ಈಗ ಭಾರತೀಯ ಸೈನಿಕರ ಶೌರ್ಯವನ್ನು ಗುರುತಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ಆಪರೇಷನ್ ಸಿಂಧೂರಗಾಗಿ ನಾವು ಪ್ರಧಾನಿಗೆ ಧನ್ಯವಾದ ಹೇಳುತ್ತೇವೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಅನಾಗರಿಕ ಕೃತ್ಯವನ್ನು ಇಡೀ ದೇಶ ಮತ್ತು ಜಗತ್ತು ಖಂಡಿಸಿತ್ತು. ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನ ಈ ಇಡೀ ಘಟನೆಯಲ್ಲಿ ಮೌನವಾಗಿತ್ತು. ಪಾಕಿಸ್ತಾನ ತನ್ನ ಕ್ರಮದಿಂದ ಪಾಠ ಕಲಿಯದ ನಂತರ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಪ್ರಾರಂಭಿಸಿತು. ಮೊದಲ ದಿನ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತ್ಯೆಯಾದರು. ಈ ಭಯೋತ್ಪಾದಕರಿಗೆ ಅವರ ದುಷ್ಕೃತ್ಯಗಳಿಗೆ ಶಿಕ್ಷೆ ವಿಧಿಸಿದ ರೀತಿಯನ್ನು ಇಡೀ ಜಗತ್ತು ನೋಡಿದೆ. ಭಾರತೀಯ ಸೈನಿಕರ ಶೌರ್ಯವನ್ನು ಒಪ್ಪಿಕೊಂಡಿದೆ ಎಂದು ಸಿಎಂ ತಿಳಿಸಿದ್ದಾರೆ.

ಬಿಜೆಪಿ ಇಡೀ ದೇಶದಲ್ಲಿ ತಿರಂಗ ಯಾತ್ರೆಯನ್ನು ಆಯೋಜಿಸುತ್ತಿದೆ. ಈ ತಿರಂಗ ಭಾರತದ ಗೌರವ, ಪ್ರತಿಷ್ಠೆ ಮತ್ತು ಹೆಮ್ಮೆಯ ಸಂಕೇತವಾಗಿದೆ. ಈ ತಿರಂಗ ಭಾರತದ ಶೌರ್ಯ ಮತ್ತು ಧೈರ್ಯದ ಸಂಕೇತವಾಗಿದೆ. ಈ ತಿರಂಗ ಮತ್ತು ನಮ್ಮ ಸೈನಿಕರಿಗೆ ನಮ್ಮ ಗೌರವವನ್ನು ತೋರಿಸಲು, ಪ್ರಧಾನಿ ಮೋದಿಜಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ವೇದಿಕೆಯಾಗಲಿದೆ ಎಂದು ಮಾತನಾಡಿದ್ದಾರೆ.

[t4b-ticker]
error: Content is protected !!