ಗ್ರೇಟರ್‌ ಬೆಂಗಳೂರಿಗೆ ನಾನೇ ಅಧ್ಯಕ್ಷ ಎಂದ ಸಿದ್ದರಾಮಯ್ಯ! GBA ಜಾರಿಯಾಗುತ್ತಿದ್ದಂತೆ ಸಿಎಂ ಘೋಷಣೆ

Picture of Savistara

Savistara

Bureau Report

ಮೇ 15ರಿಂದ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಯಾಗಿದೆ. ಅದಕ್ಕೆ ನಾನೇ ಅಧ್ಯಕ್ಷನಾಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಘೋಷಸಿದ್ದಾರೆ.ವಿಧಾನ ಸೌಧ: ಗ್ರೇಟರ್‌ ಬೆಂಗಳೂರು (Grater Banaglore) ಆಡಳಿತ ಕಾಯ್ದೆಯನ್ನು ಮೇ 15ರಂದು ಜಾರಿಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಬುಧವಾರ (ಮೇ 14) ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಅನುಸಾರ ಇಂದಿನ ಅಧಿಕೃತವಾಗಿ ಬಿಬಿಎಂಪಿ (BBMP) ಇರುವುದಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ (CM Siddaramaiah), ಇವತ್ತಿಂದ ಗ್ರೇಟರ್ ಬೆಂಗಳೂರು ಅಥಾರಟಿ ಜಾರಿಯಾಗುತ್ತಿದೆ. ಜಿಬಿಎ ಆಗಿದೆ, ಇನ್ಮೇಲೆ‌ ಬಿಬಿಎಂಪಿ ಇರಲ್ಲ ನಾನೇ ಅದಕ್ಕೆ ಅಧ್ಯಕ್ಷನಾಗಿರುತ್ತೇನೆ ಎಂದು ತಿಳಿಸಿದರು.ಗ್ರೇಟರ್ ಬೆಂಗಳೂರು ವಿಧೇಯಕದ ಕುರಿತು ವಿಧಾನ ಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಇವತ್ತಿಂದ ಗ್ರೇಟರ್ ಬೆಂಗಳೂರು ಅಥಾರಟಿ ಜಾರಿಯಾಗುತ್ತಿದೆ. ಜಿಬಿಎ ಆಗಿದೆ, ಇನ್ಮೇಲೆ‌ ಬಿಬಿಎಂಪಿ ಇರಲ್ಲ. ಎರಡೂ ಸದನದಲ್ಲಿ ಪಾಸ್ ಆಗಿತ್ತು, ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇನ್ಮೇಲೆ ಗ್ರೇಟರ್ ಬೆಂಗಳೂರು ಆಗಿ ಇರುತ್ತದೆ ಅದಕ್ಕೆ ನಾನೇ ಅಧ್ಯಕ್ಷ ಆಗಿರುತ್ತೇನೆ ಎಂದು ತಿಳಿಸಿದರು.ರಾಜ್ಯಾದ್ಯಂತ ಭಾರೀ ಮಳೆ ಹಾಗೂ ಹಾನಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಏನೇ ಅನಾಹುತ ಆದರೂ ಕೂಡ ಅದನ್ನ ಪರಿಹಾರ ಮಾಡಬೇಕು ಎಂದರು. ಇನ್ನು ಇದೇ ಸಂದರ್ಭದಲ್ಲಿ ಸಭೆ ಮುಗಿಸಿ ಹೊರ ಬರ್ತಿದ್ದಂತೆ ಸಿಎಂ ಅಂಧ ವ್ಯಕ್ತಿಯೊಬ್ಬರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗುತ್ತಾರೆ. ಈ ವೇಳೆ ಸಿಎಂ ಬಳಿ ಆ ವ್ಯಕ್ತಿ ತನ್ನ ನೋವು ಹೇಳಿಕೊಳ್ಳುತ್ತಾರೆ. ತಕ್ಷಣ ನೋವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಕೂಡಲೇ ಅಂಧ ವ್ಯಕ್ತಿಗೆ 1 ಸಾವಿರ ರೂಪಾಯಿ ನೀಡಿದರು.ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ತುಷಾರ್ ಗಿರಿನಾಥ್ ಗುರುವಾರದಿಂದ ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಜಿ) ಕಾಯ್ದೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಜಿಬಿಎ ಅಡಿಯಲ್ಲಿ ವಿವಿಧ ನಿಗಮಗಳ ಪುನರ್‌‌ ರಚನೆ ಪೂರ್ಣಗೊಳ್ಳುವವರೆಗೆ, ನಿಗಮದ ಕಾರ್ಯಚಟುವಟಿಕೆಯಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.ಮುಂದಿನ ಹಂತದಲ್ಲಿ, ಜಿಬಿಎ ಅಡಿಯಲ್ಲಿ ಬರುವ ಪ್ರದೇಶಗಳನ್ನು ಸೂಚಿಸಲಾಗುತ್ತದೆ. ಅದು ಮುಗಿದ ನಂತರ, ಈ ಪ್ರದೇಶಗಳನ್ನು ಜಿಬಿಜಿ ಕಾಯ್ದೆಯ ಸೆಕ್ಷನ್ 5 ರ ಪ್ರಕಾರ ನಿಗಮಗಳನ್ನು ರಚಿಸಲು ಮತ್ತಷ್ಟು ವಿಂಗಡಿಸಲಾಗುತ್ತದೆ. ಕಾರ್ಯವಿಧಾನದ ಪ್ರಕಾರ, ಇದು ಅಧಿಸೂಚನೆಯನ್ನು ನೀಡುವುದು ಮತ್ತು ಆಕ್ಷೇಪಣೆ ಸಲ್ಲಿಸುವುದನ್ನು ಸಹ ಒಳಗೊಂಡಿರುತ್ತದೆ ಎಂದು ಗಿರಿನಾಥ್ ಹೇಳಿದರು.ನಗರ ಆಡಳಿತಕ್ಕೆ ಉಂಟಾಗಬಹುದಾದ ಗೊಂದಲದ ಕುರಿತ ಪ್ರಶ್ನೆಗೆ, ಉತ್ತರಿಸಿದ ಅವರು ಎಲ್ಲವನ್ನೂ ಅಂತಿಮಗೊಳಿಸುವವರೆಗೆ, ಬಿಬಿಎಂಪಿಯ ಪ್ರಸ್ತುತ ಸ್ಥಾನವು ಹಾಗೆಯೇ ಕಾರ್ಯನಿರ್ವಹಿಸುತ್ತದೆ” ಎಂದು ಹೇಳಿದರು. ಜಿಬಿಜಿ ಕಾಯ್ದೆಯ ಸೆಕ್ಷನ್ 7 (5) ಮತ್ತು ಸೆಕ್ಷನ್ 360 ರ ಅಡಿಯಲ್ಲಿ ಪರಿವರ್ತನೆಯ ಬಗ್ಗೆ ನಿರ್ದಿಷ್ಟಪಡಿಸುವ ನಿಬಂಧನೆ ಇದೆ ಎಂದು ಹೇಳಿದರು.ಹೇಗಿರಲಿದೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ)?ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ – 2024ರ ಅನುಸಾರದಲ್ಲಿ ಆಡಳಿತಕ್ಕೆ ಬರಲಿದೆ. ಮುಖ್ಯಮಂತ್ರಿ ನೇತೃತ್ವದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು 120 ದಿನಗಳಲ್ಲಿ ರಚನೆಯಾಗಬೇಕಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ)ಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಬೆಂಗಳೂರು ಅಭಿವೃದ್ಧಿ ಸಚಿವರೇ ಜಿಬಿಎ ನ ಉಪಾಧ್ಯಕ್ಷರಾಗಿರುತ್ತಾರೆ. ಮೂರು ನಗರ ಪಾಲಿಕೆಗಳು ತಲಾ 125 ವಾರ್ಡ್‌ಗಳನ್ನು ಒಳಗೊಂಡಿರುತ್ತದೆ. ಪ್ರತಿ ಪಾಲಿಕೆಗೂ ‘ಗ್ರೇಟರ್ ಬೆಂಗಳೂರು ಪ್ರದೇಶ’ದ ಗಡಿ ನಿಗಧಿಪಡಿಸಲಾಗುತ್ತದೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!