ಮಳೆಯಿಂದ ಪಂದ್ಯ ರದ್ದು: ರೇಸ್‌ನಿಂದ ಹೊರಬಿದ್ದ ಕೆಕೆಆರ್, ಆರ್ ಸಿಬಿಗೆ ಮುಂದೇನು?

Picture of Savistara

Savistara

Bureau Report

ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಿರಂತರಮಳೆ ಮುಂದುವರಿದ ಕಾರಣ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಶನಿವಾರದ ನಿರ್ಣಾಯಕ ಪಂದ್ಯವನ್ನು ಟಾಸ್ ಇಲ್ಲದೆ ರದ್ದುಗೊಳಿಸಲಾಯಿತು.ಓವರ್‌ಗಳನ್ನು ಕಡಿತ ಮಾಡಿ ಪಂದ್ಯ ಪ್ರಾರಂಭಿಸಲು 8.45 ರ ವರೆಗೆ ಸಮಯವಿತ್ತು ಆಗಲೂ ಮಳೆ ಮುಂದುವರಿಯಿತು, ರಾತ್ರಿ 10.56 ರ ವರೆಗೂ ಐದು ಓವರ್‌ಳ ಪಂದ್ಯಕ್ಕೆ ಕಟ್-ಆಫ್ ಸಮಯವಿತ್ತು ಆಗಲು ಆಟ ಮುಂದುವರಿಸಲು ಸಾಧ್ಯವಾಗದ ಕಾರಣ ಪಂದ್ಯ ರದ್ದು ಮಾಡುವ ತೀರ್ಮಾನ ಕೈಗೊಳ್ಳಲಾಯಿತು.ಆರ್ ಸಿಬಿ 12ಪಂದ್ಯಗಳಲ್ಲಿ 8 ಗೆದ್ದಿದ್ದು ಇಂದಿನ ಒಂದು ಅಂಕದ ಮೂಲಕ 17 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಆಗ್ರ ಸ್ಥಾನಕ್ಕೇರಿದೆ. ಕೆಕೆಆರ್ 13ರಲ್ಲಿ 5 ರಲ್ಲಿ ಮಾತ್ರ ಗೆದ್ದ ಕಾರಣ ಪ್ಲೇ ಆಫ್ ರೇಸ್ ನಿಂದ ಹೊರ ಬಿದ್ದಿದೆ.

ಆರ್ ಸಿಬಿ ಇನ್ನೂ ಎರಡು ಪಂದ್ಯಗಳನ್ನು ಆಡಲಿದ್ದು ಒಂದರಲ್ಲಿ ಗೆದ್ದರೂ ಮುಂದಿನ ಹಂತಕ್ಕೆ ಸಾಗಲಿದೆ. ಆ‌ರ್ ಸಿಬಿ ಮುಂದಿನ ಪಂದ್ಯಗಳನ್ನು ಈಗಾಗಲೇ ಹೊರ ಬಿದ್ದಿರುವ ಹೈದರಾಬಾದ್ ಮತ್ತು ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡಿರುವ ಲಕ್ಕೋ ವಿರುದ್ಧ ಆಡಲಿದೆ.ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಿಕೊಂಡಿದೆ ನಾಳೆ(ಮೇ 18, ರವಿವಾರ) ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಜೈಪುರದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ VS ಗುಜರಾತ್ ಟೈಟಾನ್ಸ್ ಪಂದ್ಯ ಡೆಲ್ಲಿಯಲ್ಲಿ ನಡೆಯಲಿದೆ. ಡೆಲ್ಲಿ ಅಥವಾ ಪಂಜಾಬ್ ಸೋತರೆ ಆರ್‌ಸಿಬಿ ಅಧಿಕೃತವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ.

ಕೊಹ್ಲಿ ಅಭಿಮಾನಿಗಳಿಗೆ ನಿರಾಸೆ

ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸಿದ ವಿರಾಟ್ ಕೊಹ್ಲಿ ಆಟ ವೀಕ್ಷಿಸಲು ಆರ್‌ಸಿಬಿ ಅಭಿಮಾನಿಗಳೆಲ್ಲ ಕೊಹ್ಲಿ ಅವರ 18ನೇ ಕ್ರಮಾಂಕದ ಬಿಳಿ ಟೆಸ್ಟ್ ಜೆರ್ಸಿ ಧರಿಸಿ ಆಗಮಿಸಿದ್ದರು. ಮಳೆ ನಿಲ್ಲುತ್ತದೆ ಎಂದು ಕಾದು ಕಾದು ನಿರಾಶರಾದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!