ದೇಶದಲ್ಲಿ ಸಹಕಾರ ಕ್ಷೇತ್ರ ಬಲಿಷ್ಠವಾದ ವ್ಯವಸ್ಥೆ,ಗ್ರಾಮೀಣ, ಹಳ್ಳಿಯ ಜನ ತಮ್ಮ ವ್ಯವಹಾರ ದೃಷ್ಟಿಯಿಂದ ಹೆಚ್ಚಾಗಿ ಸಹಕಾರ ಸಂಘಗಳನ್ನೇ ಅವಲಂಬಿಸುತ್ತಿದ್ದಾರೆ. ಸಹಕಾರ ಸಂಘಗಳಲ್ಲಿ ನಿರ್ದೇಶಕರಾಗಿ ಚುನಾಯಿತರಾಗೋದು ಒಂದು ಭಾಗ ಆದರೆ ತದನಂತರ ಹೆಚ್ಚಿನ ಅನೇಕ ಸೊಸೈಟಿ ಗಳಲ್ಲಿ ವೃತ್ತಿಪರ ನಿರ್ದೇಶಕರನ್ನಾಗಿ ಆಯ್ಕೆ ಮಾಡುವ ಅಧಿಕಾರ ಆಡಳಿತ ಮಂಡಳಿಗಿದೆ ಸುಳ್ಯದ ಒಂದು ಸೊಸೈಟಿ ಯಲ್ಲಿ ವೃತ್ತಿಪರ ನಿರ್ದೇಶಕರ ಆಯ್ಕೆ ಬಗ್ಗೆ ಸಹಕಾರ ಕ್ಷೇತ್ರದ ಹಿರಿಯರು,ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವೃತ್ತಿಪರ ನಿರ್ದೇಶಕರ ಆಯ್ಕೆಯಲ್ಲಿ ಹೆಚ್ಚಾಗಿ ಮಾಜಿ ನಿರ್ದೇಶಕರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿವೃತ್ತರರಾದವರು ಅಥವಾ ಸಹಕಾರ ಕ್ಷೇತ್ರ ಬಗ್ಗೆ ಅಪಾರ ಜ್ಞಾನವಿರುವರನ್ನು ಆಯ್ಕೆ ಮಾಡುವುದು ಸಂಪ್ರದಾಯ ಮುಖ್ಯವಾಗಿ ವೃತ್ತಿಪರ ನಿರ್ದೇಶಕರೆಂದರೆ ಆತನ ಸಹಕಾರ ಕ್ಷೇತ್ರದ ಅನುಭವ ವನ್ನು ಬಳಸಿಕೊಳ್ಳುವುದಾಗಿದೆ ರಾಜಕೀಯ ಕಾರಣಗಳಿಗೆ ಆಯ್ಕೆಗಳು ಸಹಕಾರ ವಲಯದ ಆಶಯ ಗಳಿಗೆ ಸರಿತೋರುತ್ತಿಲ್ಲವೆಂದು ಸಹಕಾರ ಕ್ಷೇತ್ರ ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಹಕಾರ ಸಂಘದಲ್ಲಿ ವೃತ್ತಿಪರ ನಿರ್ದೇಶಕರ ಆಯ್ಕೆ ವಿಚಾರ |ಅರ್ಹತೆ, ಮಾನದಂಡಗಳ ಬಗ್ಗೆ ಸಹಕಾರ ವಲಯದಲ್ಲಿ ಗಂಭೀರ ಚರ್ಚೆ
Savistara
Bureau Report
[t4b-ticker]












































