ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆಯ ವತಿಯಿಂದ “ಮಕ್ಕಳಿಗಾಗಿ ಶಾಸಕರು” ವಿಶೇಷ ಸಭೆ

Picture of Savistara

Savistara

Bureau Report

“ಮಕ್ಕಳಿಗಾಗಿ ಶಾಸಕರು”ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆಯ ವತಿಯಿಂದ ಇಂದು ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ “ಮಕ್ಕಳಿಗಾಗಿ ಶಾಸಕರು” ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಕ್ಕಳ ಹಕ್ಕುಗಳು ಮತ್ತು ಅವುಗಳ ರಕ್ಷಣೆ, ಮಕ್ಕಳ ಆರೋಗ್ಯ, ಮಕ್ಕಳ ಶಿಕ್ಷಣ, ಮಕ್ಕಳ ಶೋಷಣೆ ಮುಂತಾದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ಈ ವೇಳೆ ವಿಧಾನ ಪರಿಷತ್ತಿನ ಉಪಸಭಾಪತಿಗಳಾದ ಎಂ.ಕೆ ಪ್ರಾಣೇಶ್ ಅವರು, ವಿಧಾನ ಪರಿಷತ್ತಿನ ಮಾಜಿ ಶಾಸಕರು ಮತ್ತು ಮಕ್ಕಳಿಗಾಗಿ ಶಾಸಕರು ವೇದಿಕೆಯ ಸಂಚಾಲಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು, ಐವನ್ ಡಿಸೋಜಾ ಅವರು, ವಿಧಾನ ಪರಿಷತ್ತಿನ ಶಾಸಕರಾದ ಡಿ.ಎಸ್ ಅರುಣ್ ಅವರು, ಎಂ ನಾಗರಾಜ್ ಅವರು, ಕೆ.ಎಸ್ ನವೀನ ಅವರು, ಮಂಜುನಾಥ್ ಭಂಡಾರಿ ಅವರು, ಶ್ರೀಮತಿ ಭಾರತೀ ಶೆಟ್ಟಿ ಅವರು, ಶ್ರೀಮತಿ ಬಲ್ಕಿಶ್ ಭಾನು ಅವರು, ಪ್ರತಾಪ್ ಸಿಂಹ ನಾಯಕ್ ಅವರು, ಕೇಶವ ಪ್ರಸಾದ್ ಅವರು ಸೇರಿದಂತೆ ಮತ್ತಿತರರ ಶಾಸಕರು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!