ದೇಶಸೇವೆಗೆ ಆಯ್ಕೆಯಾದ ಕುಲ್ಕುಂದದ ಯುವಕ ಪ್ರಶಾಂತ್‌ಗೆ ಸನ್ಮಾನ

Picture of Savistara

Savistara

Bureau Report

​ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಡಿಪೋ ಮನೆಯ ಶ್ರೀ ಇಂದ್ರೇಶ್ ಮತ್ತು ಶ್ರೀಮತಿ ಕಮಲ ದಂಪತಿಯ ದ್ವಿತೀಯ ಪುತ್ರರಾದ ಪ್ರಶಾಂತ್ ಅವರು ಭಾರತೀಯ ಸೇನೆಯ ‘ಅಗ್ನಿಪಥ್’ ಯೋಜನೆಯಡಿ ‘ಅಗ್ನಿವೀರ್’ ಆಗಿ ಆಯ್ಕೆಯಾಗಿದ್ದಾರೆ. ದೇಶಸೇವೆಗೆ ನಿಯುಕ್ತಿಗೊಂಡ ಈ ಹೆಮ್ಮೆಯ ಯುವಕನನ್ನು ಅವರ ನಿವಾಸದಲ್ಲಿ ಅತ್ಯಂತ ಸಡಗರದಿಂದ ಅಭಿನಂದಿಸಿ, ಸನ್ಮಾನಿಸಲಾಯಿತು.

ಬಿಜೆಪಿ ಬೂತ್ ಸಮಿತಿ ಕುಲ್ಕುಂದ, ಬಿಜೆಪಿ ಯುವಮೋರ್ಚಾ ಸುಬ್ರಹ್ಮಣ್ಯ ಮಹಾಶಕ್ತಿ ಕೇಂದ್ರ ಹಾಗೂ ಸುಬ್ರಹ್ಮಣ್ಯ ಶಕ್ತಿಕೇಂದ್ರದ,ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಕುಲ್ಕುoದ ಇದರ ಜಂಟಿ ಆಶ್ರಯದಲ್ಲಿ ಈ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಕುಲ್ಕುಂದ ಬೂತ್ ಸಮಿತಿ ಅಧ್ಯಕ್ಷರಾದ ಶಿವರಾಮ ಪಳ್ಳಿಗದ್ದೆ ಅವರ ನೇತೃತ್ವದಲ್ಲಿ ಸಾಧಕ ಯುವಕನಿಗೆ ಶುಭ ಹಾರೈಸಲಾಯಿತು.​

​ಈ ಸಂದರ್ಭದಲ್ಲಿ ಊರಿನ ಗಣ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಭಾಗವಹಿಸಿ ಯುವಕನ ಸಾಧನೆಯನ್ನು ಶ್ಲಾಘಿಸಿದರು:

ಈ ಸಂದರ್ಭದಲ್ಲಿ,​ದಿಲೀಪ್ ಉಪ್ಪಳಿಕೆ,ಉಪಾಧ್ಯಕ್ಷರು, ಬಿಜೆಪಿ ಯುವಮೋರ್ಚಾ ಸುಳ್ಯ ಮಂಡಲ.​ಮನೀಶ್ ಪದೇಲ,ಕಾರ್ಯಕಾರಿಣಿ ಸದಸ್ಯರು, ಬಿಜೆಪಿ ಯುವಮೋರ್ಚಾ ಮಂಡಲ​ಗಿರೀಶ್ ಆಚಾರ್ಯ ಪೈಲಾಜೆ,ಅಧ್ಯಕ್ಷರು, ಸುಳ್ಯ ಮಂಡಲ ಒಬಿಸಿ ಮೋರ್ಚಾ​ಭಾರತಿ ದಿನೇಶ್,ನಿಕಟಪೂರ್ವ ಸದಸ್ಯರು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್​ಶೋಭಾ ಗಿರಿಧರ್,ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯರು, ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ.ಜಯನ್ ಕುಮಾರ್ ಡಿಪ್ಪೋ,ಅಧ್ಯಕ್ಷರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಕುಲ್ಕುoದ ​ಈ ಸಂದರ್ಭದಲ್ಲಿ ಪ್ರಮುಖರಾದ , ಅಜಿತ್ ಕಲ್ಲೇರಿ, ವಿಕಾಸ್ ಕುಲ್ಕುಂದ, ವಿನೋದ್, ರೋಹಿತ್, , ಪ್ರದೀಪ್ ರಾಮಚಂದ ದೇವರಗದ್ದೆ ಹಾಗೂ ರಾಷ್ಟ್ರಪ್ರೇಮಿ ಬಂಧುಗಳು ಉಪಸ್ಥಿತರಿದ್ದು, ಅಗ್ನಿವೀರ್ ಪ್ರಶಾಂತ್ ಅವರಿಗೆ ಮುಂದಿನ ಸೇನಾ ಜೀವನಕ್ಕೆ ಯಶಸ್ಸು ಕೋರಿದರು.

[t4b-ticker]
error: Content is protected !!