ಬೆಂಗಳೂರು to ಹೈದರಾಬಾದ್ ‘ಹೈಸ್ಪೀಡ್’ ಸಂಚಾರ ಕ್ರಾಂತಿ: 3 ರಾಜ್ಯಗಳನ್ನು ಜೋಡಿಸಲಿರುವ ಬುಲೆಟ್ ರೈಲು ಮಾರ್ಗ

Picture of Savistara

Savistara

Bureau Report

ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಹೈಸ್ಪೀಡ್ ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ನಡೆದಿವೆ. ಸುಮಾರು 600 ಕಿ.ಮೀ.ಗೂ ಅಧಿಕ ಉದ್ದದ ಈ ಕಾರಿಡಾರ್ ದಕ್ಷಿಣ ಭಾರತದ ವೇಗದ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಲ್ಲಿದೆ.

3 ರಾಜ್ಯಗಳ ಮೂಲಕ ಸಾಗುವ ಮಾರ್ಗ

ಈ ಯೋಜನೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳನ್ನು ಸಂಪರ್ಕಿಸಲಿದೆ. ಹೈದರಾಬಾದ್, ಶಂಶಾಬಾದ್, ಕರ್ನೂಲ್, ಅನಂತಪುರ, ದೇವನಹಳ್ಳಿ ವೈಟ್‌ಫೀಲ್ಡ್ ಹಾಗೂ ಬೈಯಪ್ಪನಹಳ್ಳಿ ಸೇರಿದಂತೆ ಹಲವು ಸ್ಥಳಗಳಲ್ಲಿ ನಿಲ್ದಾಣಗಳನ್ನು ಸ್ಥಾಪಿಸುವ ಸಾಧ್ಯತೆ ಇದೆ.

ಪ್ರಯಾಣದ ಸಮಯದಲ್ಲಿ ಭಾರೀ ಕಡಿತ

ಪ್ರಸ್ತುತ 8 ರಿಂದ 10 ಗಂಟೆಗಳವರೆಗೆ ಬೇಕಾಗುವ ಬೆಂಗಳೂರು-ಹೈದರಾಬಾದ್ ಪ್ರಯಾಣವನ್ನು ಬುಲೆಟ್ ರೈಲು ಕೇವಲ 2 ರಿಂದ 3 ಗಂಟೆಗಳಲ್ಲಿ ಪೂರ್ಣಗೊಳಿಸಲಿದೆ. ಗಂಟೆಗೆ 320 ಕಿ.ಮೀ. ವೇಗದಲ್ಲಿ ರೈಲು ಸಂಚರಿಸುವಂತೆ ವಿನ್ಯಾಸ ರೂಪಿಸಲಾಗಿದೆ.

ಡಿಪಿಆ‌ರ್ ಅಂತಿಮ ಹಂತದಲ್ಲಿ

ಯೋಜನೆಗೆ ಮೂರು ರಾಜ್ಯಗಳ ಸಹಕಾರ ದೊರೆತಿದ್ದು, ವಿವರವಾದ ಯೋಜನಾ ವರದಿ 2027ರೊಳಗೆ ಸಿದ್ಧವಾಗುವ ನಿರೀಕ್ಷೆಯಿದೆ. ಭೂಸ್ವಾಧೀನ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭವಾಗಲಿದೆ.ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಯಾದರೆ, ದಕ್ಷಿಣ ಭಾರತದ ಆರ್ಥಿಕ, ಕೈಗಾರಿಕಾ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಹೊಸ ಉತ್ತೇಜನ ಸಿಗಲಿದೆ.

[t4b-ticker]
error: Content is protected !!