ಮಂಗಳೂರಿನ ಸಂಸದರಾದ ಕ್ಯಾ. ಬ್ರಿಜೇಶ್ ಚೌಟರವರು ಜೂ. 20ರಂದು ಸುಳ್ಯ ವಿಧಾನಸಭಾ ಕ್ಷೇತ್ರದದ್ಯಂತ ಪ್ರವಾಸ ಕೈಗೊಂಡರು. ಕಾರ್ಯಕರ್ತರ ಸಭೆಗಳು, ಪಾರ್ಟಿಗಾಗಿ ದುಡಿದ ಹಿರಿಯ ಕಾರ್ಯಕರ್ತರ ಭೇಟಿ, ಪ್ರಧಾನಿ ಮೋದಿಯವರ ಆಶಯದಂತೆ ತಾಯಿಯ ಹೆಸರಲ್ಲೊಂದು ಗಿಡ ನೆಡುವ ಕಾರ್ಯಕ್ರಮ – ಹೀಗೆ ಬೆಳಿಗ್ಗೆ 9.00 ರಿಂದ ರಾತ್ರೆ 11ಗಂಟೆಯ ತನಕ ನಿರಂತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ರಾತ್ರಿ 10ಗಂಟೆಯ ತನಕವು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಬೆಳಿಗ್ಗೆ ಹಿರಿಯ ಕಾರ್ಯಕರ್ತ ದೇವಪ್ಪ ಗೌಡರ ಮನೆ ಭೇಟಿ ಮತ್ತು ಸವಣೂರು, ಪುಣ್ಚತ್ತಾರು ಪಾಲ್ತಾಡಿ ಶಕ್ತಿಕೇಂದ್ರಗಳ ಕಾರ್ಯಕರ್ತರ ಸಭೆ, ಪಿ ಎಂ ಜನ್ ಮನ್ ಯೋಜನೆ ಯಡಿಯಲ್ಲಿ ರೂ 2.25ಕೋಟಿ ವೆಚ್ಚದಲ್ಲಿ ಅಲಂಕಾರು ಪರಕ್ಕಾಲು ಕೊರಗ ಕಾಲನಿಯ ಸಂಪರ್ಕ ರಸ್ತೆ ಉದ್ಘಾಟನೆ,

ನೆಲ್ಯಾಡಿಯಲ್ಲಿ ಪಿ ಎಂ ಶ್ರೀ ಯೋಜನೆ ಯಡಿಯಲ್ಲಿ ಮಂಜೂರಾದ ಕೊಠಡಿ ಗಳ ಹಾಗೂ ಶೌಚಾಲಯ ಉದ್ಘಾಟನೆ, ಬಲ್ಯ ಗ್ರಾಮದಲ್ಲಿ ಸಂಸದರ ಪ್ರದೇಶಅಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಸಂಪರ್ಕ ರಸ್ತೆ ಉದ್ಘಾಟನೆ, ಕಡಬದ ಪಿಜಕ್ಕಲದಲ್ಲಿ ಆಶಕ್ತ ವ್ಯಕ್ತಿಗೆ ವೀಲ್ ಚೇರ್ ಕೊಡುಗೆ ಮತ್ತು ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ, , ಐತ್ತೂರು ಗ್ರಾಮದ ಕಲ್ಲಾಜೆ ಸಿಆರ್ ಸಿ ಕಾಲನಿಯಲ್ಲಿ ಹಿರಿಯ ಕಾರ್ಯಕರ್ತ ಸತ್ಯನಾಥನ್ ರವರ ಮನೆ ಭೇಟಿ, ಕೊಂಬಾರು ಗ್ರಾಮದ ಹಿರಿಯ ಕಾರ್ಯಕರ್ತ ಉಮೇಶ್ ಕೊಂಬಾರು ರವರ ಮನೆ ಭೇಟಿ,

ಗಿಡ ನೆಡುವ ಕಾರ್ಯಕ್ರಮ ಮತ್ತು ಕಾರ್ಯಕರ್ತರ ಸಭೆ, ದೇವಸ್ಥಾನ ಭೇಟಿ, ಏನೇಕಲ್ಲು ಗ್ರಾಮದ ಹಿರಿಯ ಕಾರ್ಯಕರ್ತ ಬಾಲಾಡಿ ಗಿರಿಯಪ್ಪ ಗೌಡರ ಮನೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಭೇಟಿ, ಬಳಿಕ ಬಳ್ಪ ಗ್ರಾಮದಲ್ಲಿ ಗಿಡನೆಡುವ ಕಾರ್ಯಕ್ರಮ ಮತ್ತು ಕಾರ್ಯಕರ್ತ ಹಾಗೂ ಸಾರ್ವಜನಿಕ ರ ಭೇಟಿ, ಬಳಿಕ ಬೆಳ್ಳಾರೆಯಲ್ಲಿ ಹಿರಿಯ ಕಾರ್ಯಕರ್ತ ಸುರೇಶ ಶೆಣೈ ರವರ ಮನೆ ಭೇಟಿ ಹಾಗೂ ಕಾರ್ಯಕರ್ತರ ಸಭೆ,

ಬಳಿಕ ಮಂಡೆಕೋಲಿನಲ್ಲಿ ಹಿರಿಯ ಕಾರ್ಯಕರ್ತ ರಾಮ ಕದಂಬಳಿತ್ತಾಯ ರವರ ಮನೆ ಭೇಟಿ ಹಾಗೂ ಕಾರ್ಯಕರ್ತರ ಸಭೆ – ಹೀಗೇ ಬಿಡುವಿಲ್ಲದ ಕಾರ್ಯಕ್ರಮ ಗಳಲ್ಲಿ ಸಂಸದರು ಪಾಲ್ಗೊಂಡರು. ನಿಗದಿತ ಸಮಯಕ್ಕಿಂತ ತಡವಾಗಿ ರಾತ್ರೆ 10ಗಂಟೆ ಗೆ ಮಂಡೆಕೋಲಿಗೆ ತಲುಪಿದರೂ 100ಕ್ಕೂ ಹೆಚ್ಚು ಕಾರ್ಯಕರ್ತರು ಅಲ್ಲಿ ಸೇರಿದ್ದು ವಿಶೇಷವಾಗಿತ್ತು. ಪ್ರವಾಸದುದ್ದಕ್ಕೂ ಸಂಸದರೊಂದಿಗೆ ಶಾಸಕಿ ಭಾಗೀರಥಿ ಮುರುಳ್ಯ, ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ, ಪ್ರಧಾನ ಕಾರ್ಯದರ್ಶಿಗಳದ ವಿನಯ ಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ಕೆಡೆಂಜಿ, ನಿಕಟ ಪೂರ್ವ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಂಡಲ ಉಪಾಧ್ಯಕ್ಷರು ಗಳಾದ ಶುಭದ ರೈ, ತೇಜಸ್ವಿನಿ, ಆರ್ ಕೆ ಭಟ್, ಜಯರಾಜ್ ಕುಕ್ಕೆಟ್ಟಿ, ಕಾರ್ಯದರ್ಶಿಗಳಾದ ಶಿವಪ್ರಸಾದ್, ಗಣೇಶ್ ಉದನಡ್ಕ ಮತ್ತಿತರರು ಭಾಗಿಯಾಗಿದ್ದರು. ಸ್ಥಳೀಯ ಪ್ರಮುಖರು ಸಂಸದರನ್ನು ಸ್ವಾಗತಿಸಿದರು.











































