
ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ 12ನೇ ವರ್ಷದ ವಿಶ್ವಾಸ, ವಿಕಾಸ ಮತ್ತು ಜನಕಲ್ಯಾಣ ಪ್ರಯುಕ್ತ ಸುಳ್ಯ ಮಂಡಲದ ವಿಶೇಷ ಜನಸಂಪರ್ಕ ಅಭಿಯಾನದ ಪ್ರಯುಕ್ತ ಜೂ.20 ಶನಿವಾರಂದು ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಇವರು ಸುಳ್ಯ ಮಂಡಲದ ವಿವಿಧ ಕಡೆಗಳ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವರು.
ಬೆಳಿಗ್ಗೆ ಕಡಬ ತಾಲೂಕು ಸವಣೂರು ಗ್ರಾಮದ ಹಿರಿಯ ಕಾರ್ಯಕರ್ತರ ಮನೆ ಭೇಟಿ ಹಾಗೂ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಮತ್ತು ಕಾರ್ಯಕರ್ತರೊಂದಿಗೆ ಸಭೆ.
ಬಳಿಕ ಕಡಬ ತಾಲೂಕು ಹಳೆನೇರಂಕಿ ಪರಕ್ಕಾಲು ಕೊರಗ ಸಮುದಾಯದ ಕಾಲೊನಿ ರಸ್ತೆ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಅನುದಾನದಿಂದ ರೂ.275.50ಲಕ್ಷದ ಕಾಮಗಾರಿ ಪೂರ್ಣಗೊಂಡು ಉದ್ಘಾಟನಾ ಕಾರ್ಯಕ್ರಮ.12:30ಗಂಟೆಗೆ
ಕಡಬ ತಾಲೂಕು ನೆಲ್ಯಾಡಿ ಪಿ.ಎಂ.ಶ್ರೀ ಶಾಲೆಯ ನೂತನ ಕೊಠಡಿ ಹಾಗೂ ಶೌಚಾಲಯಕ್ಕೆ ಕೇಂದ್ರ ಸರಕಾರದ ಅನುದಾನದಿಂದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ.
ಮಧ್ಯಾಹ್ನ 1:00 ಕಾರ್ಯಕರ್ತರ ಮನೆ ಭೇಟಿ.ನಂತರ
ಕಡಬ ತಾಲೂಕು ಕೊಂಬಾರು ಗ್ರಾಮದ ಪ್ರಮುಖ ಕಾರ್ಯಕರ್ತರ ಮನೆ ಭೇಟಿ ಹಾಗೂ ಕಾರ್ಯಕರ್ತರ ಸಭೆ.
3:00ಗಂಟೆಗೆ ಕಡಬ ತಾಲೂಕು ಏನೆಕಲ್ಲು ಗ್ರಾಮದ ಹಿರಿಯ ಕಾರ್ಯಕರ್ತರ ಮನೆ ಭೇಟಿ ಹಾಗೂ ತಾಯಿಯ ಹೆಸರಿನಲ್ಲಿ ಗಿಡ ನೆಡುವುದು.3:30 ಗಂಟೆಗೆ
ಕಡಬ ತಾಲೂಕು ಬಳ್ಪ ಗ್ರಾಮದ ಹಿರಿಯ ಕಾರ್ಯಕರ್ತರ ಮನೆ ಭೇಟಿ.4:00 ಗಂಟೆಗೆ
ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಶಕ್ತಿಕೇಂದ್ರ ಸಭೆ ಮತ್ತು ಹಿರಿಯ ಕಾರ್ಯಕರ್ತರ ಸಭೆ.5:00ಗಂಟೆಗೆ
ಸುಳ್ಯ ಮಂಡೆಕೋಲು ಗ್ರಾಮದ ಕಾರ್ಯಕರ್ತರ ಮನೆ ಭೇಟಿ ಮತ್ತು ಕಾರ್ಯಕರ್ತರೊಂದಿಗೆ ಸಭೆ ಹಾಗೂ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ ಎಂದು ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ.











































