ದೇಶದಲ್ಲಿ ಪೆಟ್ರೋಲ್‌, ಡೀಸೆಲ್ ಬೆಲೆ ಇಳಿಕೆ ಆಗುವ ಸಾಧ್ಯತೆ ಇದೆ: ಪುರಿ

Picture of Savistara

Savistara

Bureau Report

ಸೋನಭದ್ರ : ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಶನಿವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ಸೋನಭದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ಕಚ್ಚಾ ತೈಲದ ಬೆಲೆ ಇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ಮಾತು ಹೇಳಿದ್ದಾರೆ.“ಈಗ ತೈಲ ಕಂಪನಿಗಳ ಬಳಿ ಹೆಚ್ಚಿನ ಬೆಲೆಗೆ ಖರೀದಿಸಿದ ಕಚ್ಚಾ ತೈಲದ ಸಂಗ್ರಹ ಇದೆ. ಕಡಿಮೆ ಬೆಲೆಗೆ ಖರೀದಿ ಆಗುತ್ತಿರುವ ಕಚ್ಚಾ ತೈಲವು ಕಂಪನಿಗಳನ್ನು ತಲುಪಿದಾಗ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಗ್ಗಿಸುವ ಸಾಧ್ಯತೆ ಇದೆ’ ಎಂದು ಪುರಿ ಅವರು ತಿಳಿಸಿದ್ದಾರೆ.ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆಯಲ್ಲಿ ಆಗಿರುವ ಒಟ್ಟು ಹೆಚ್ಚಳವು ಲೀಟರಿಗೆ ₹7.60 ಮಾತ್ರ. ರಷ್ಯಾ-ಉಕ್ರೇನ್ ಯುದ್ಧ 2022ರಲ್ಲಿ ಶುರುವಾದ ಸಂದರ್ಭದಲ್ಲಿನ ಬೆಲೆಗೆ ಹೋಲಿಸಿದರೆ ‘ಇಂಧನ ಬೆಲೆಯಲ್ಲಿ ವಾಸ್ತವದಲ್ಲಿ ಹೆಚ್ಚಳವೇ ಆಗಿಲ್ಲ’ ಎಂದು ಪುರಿ ಹೇಳಿದ್ದಾರೆ.

ಹೊರ್ಮುಜ್ ಜಲಸಂಧಿಯ ಸುತ್ತಲಿನ ಬಿಕ್ಕಟ್ಟಿನ ಬಗ್ಗೆ ಉಲ್ಲೇಖಿಸಿದ ಅವರು, ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ನಿತ್ಯ ₹1,000 ಕೋಟಿಯಷ್ಟು ನಷ್ಟ ಅನುಭವಿಸುತ್ತಿವೆ ಎಂದಿದ್ದಾರೆ. ಆದರೆ, ಹೊರೆಯು ಜನರ ಮೇಲೆ ವರ್ಗಾವಣೆ ಆಗದಂತೆ ಸರ್ಕಾರ ನೋಡಿಕೊಂಡಿದೆ ಎಂದು ಹೇಳಿದ್ದಾರೆ.*2022ರಲ್ಲಿ ಇದ್ದ ಬೆಲೆಗೆ ಹೋಲಿಸಿದರೆ ಈಗ ಬೆಲೆಯು ವಾಸ್ತವದಲ್ಲಿ ಕಡಿಮೆ ಇದೆ’ ಎಂದು ಅವರು ಹೇಳಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಇಂಧನದ ಮೇಲಿನ ಎಕ್ಸೆಸ್ ಸುಂಕವನ್ನು 2021ರ ನವೆಂಬರ್‌ನಲ್ಲಿ ಒಂದು ಬಾರಿ ಹಾಗೂ 2022ರ ಮೇ ತಿಂಗಳಲ್ಲಿ ಒಂದು ಬಾರಿ ತಗ್ಗಿಸಿದ್ದಾರೆ. ಈಚೆಗೂ ಒಮ್ಮೆ ಇಳಿಕೆ ಮಾಡಲಾಗಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ಸರ್ಕಾರವು ಲೀಟರಿಗೆ ₹10ರಷ್ಟು ಹೊರೆ ಹೊರುತ್ತಿದೆ ಎಂದು ಅವರು ತಿಳಿಸಿದ್ದಾರೆ.ಮೋದಿ ಅವರ ನಾಯಕತ್ವದ ಕಳೆದ 12 ವರ್ಷಗಳಲ್ಲಿ ದೇಶವು ಮೂಲಸೌಕರ್ಯ, ಇಂಧನ, ಸಾಮಾಜಿಕ ಭದ್ರತೆ, ಅಭಿವೃದ್ಧಿ ಮತ್ತು ಸ್ವಾವಲಂಬನೆಯಲ್ಲಿ ಹಿಂದೆಂದೂ ಆಗಿರದಿದ್ದ ಬೆಳವಣಿಗೆ ಸಾಧಿಸಿದೆ ಎಂದು ಪುರಿ ಪ್ರತಿಪಾದಿಸಿದ್ದಾರೆ.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!