ಸುಳ್ಯ : ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘ ಚುನಾವಣೆ | ಸಹಕಾರ ಭಾರತೀಯ ಅಭ್ಯರ್ಥಿಗಳಿಗೆ ಗೆಲುವು

Picture of Savistara

Savistara

Bureau Report

ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘ ಇದರ ಮುಂದಿನ 5 ವರ್ಷದ ಆಡಳಿತ ಮಂಡಳಿಗೆ ಜೂ.೨೧ರಂದು ಚುನಾವಣೆ ನಡೆಯಿತು. ಚುನಾವಣೆ ನಡೆದ ೯ ಸ್ಥಾನಗಳಲ್ಲಿಯೂ ಸಹಕಾರ ಭಾರತೀಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅಜ್ಜಾವರ ಹಾಲು ಸೊಸೈಟಿಯ ಒಟ್ಟು 13 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು ಅದರಲ್ಲಿ, ಹಿಂದುಳಿದ ವರ್ಗ ಎ. ಮೀಸಲು ಕ್ಷೇತ್ರದ ೧ ನಿರ್ದೇಶಕ ಸ್ಥಾನಕ್ಕೆ ಗುರುರಾಜ್ ಅಜ್ಜಾವರ ಹಾಗೂ ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದ ೧ ನಿರ್ದೇಶಕ ಸ್ಥಾನಕ್ಕೆ ದಯಾನಂದ ಅಡಂಗಾಯ ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಅವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದರು.

ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

9 ಸ್ಥಾನಕ್ಕೆ 16 ನಾಮಪತ್ರ

7 ಸಾಮಾನ್ಯ ಮೀಸಲು ನಿರ್ದೇಶಕ ಸ್ಥಾನಕ್ಕೆ 13 ಮಂದಿ ನಾಮಪತ್ರ ಸಲ್ಲಿಸಿದ್ದು ಚುನಾವಣೆಯಲ್ಲಿ ಬಾಲಕೃಷ್ಣ ಮುಡೂರು (31), ಲವಕುಮಾ‌ರ್ ಅಡ್ವಂಗಾಯ (29), ರೇಖಾ ಜಯರಾಮ ಗುರುವಮೊಟ್ಟೆ (31), ಪರಮೇಶ್ವರ ನಾರಾಲು (31), ನಾರಾಯಣ ಬಂಟ್ರಬೈಲು (32), ರಾಜ್ ಕುಮಾರ್ ಅತ್ಯಾಡಿ(31), ಕೆ. ಕೇಶವ ಕೊಳ್ಳಿಮಾರ್ (32), ಮಹಿಳಾ ಮೀಸಲು ೨ ನಿರ್ದೇಶಕ ಸ್ಥಾನದಿಂದ ಧನ್ಯ ಕೊಳ್ಳಿಮಾರ್ (33), ನಳಿನಾಕ್ಷಿ ಕಂಬಳಗದ್ದೆ (32) ಗೆಲುವು ಸಾಧಿಸಿದ್ದಾರೆ.ಹಾಲು ಸೊಸೈಟಿಯ ಹಾಲಿ ಅಧ್ಯಕ್ಷ ರಾಹುಲ್ ಅಡ್ವಂಗಾಯ (04), ಬಾಲಚಂದ್ರ ಮುಡೂರು (02), ಜನಾರ್ದನ ನಾರಾಲು(03), ಸುಲೋಚನಾ ರವೀಶ್ ಮಾವಿನಪಳ್ಳ (02), ಯತಿರಾಜ ಅಡ್ಡಂಗಾಯ(೦೦), ಶ್ವೇತಾ ಪುರುಷೋತ್ತಮ ಶಿರಾಜೆ (03) ಮತ ಪಡೆದು ಪರಾಭವಗೊಂಡಿದ್ದಾರೆ.

ಕಣದಿಂದ ಹಿಂದೆ ಸರಿದ ರಾಹುಲ್ ಅಪ್ಪಂಗಾಯ ತಂಡ

ಜೂ.21ರಂದು ನಡೆಯುವ ಚುನಾವಣೆಗೆ ಜೂ.13ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಜೂ.15 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಆದರೆ ಜೂ.19 ರಂದು ಚುನಾವಣಾಧಿಕಾರಿಗಳಿಗೆ ಪತ್ರ ಬರೆದ ರಾಹುಲ್ ಅಡಂಗಾಯರು ನಾವು ಅವಿರೋಧ ಆಯ್ಕೆ ಸಹಕಾರ ನೀಡುತ್ತಿದ್ದು ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದರು. ಅದರಂತೆ ಜೂ.೨೧ ಮತದಾನ ದಿನದಂದು ಅವರ ತಂಡದವರು ಯಾರೂ ಮತದಾನದಲ್ಲಿ ಭಾಗವಹಿಸಿಲ್ಲ. ಒಟ್ಟು 42 ಮತದಾರರಲ್ಲಿ 34 ಮಂದಿ ಮತ ಚಲಾಯಿಸಿದ್ದರು.

[t4b-ticker]
error: Content is protected !!