ಡಿಕೆಶಿ ಪೋಸ್ಟರ್ ಅಂಟಿಸುವ ಎ.ಐ ವಿಡಿಯೊ ಹಂಚಿಕೊಂಡ ಜೆಡಿಎಸ್‌

Picture of Savistara

Savistara

Bureau Report

ರಾಮನಗರ: ರಾಮನಗರ: ಜೆಡಿಎಸ್‌ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟರ್‌ಗಳನ್ನು ಅಂಟಿಸಿರುವುದಕ್ಕೆ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪೋಸ್ಟರ್‌ಗಳನ್ನು ಅಂಟಿಸುತ್ತಿರು ವಂತೆ ಎ.ಐ ವಿಡಿಯೊವನ್ನು ಫೇಸ್‌ಬುಕ್‌ನ ‘kumaraswamy for CM’ ಎಂಬ ಖಾತೆಯಲ್ಲಿ ‘ಹಳೇ ಚಾಳಿ ಮತ್ತೆ ಶುರು.

ಸುಟ್ಟರು ಹೋಗದ ಹುಟ್ಟು ಗುಣ’ ಸಾಲಿನೊಂದಿಗೆ ಪೋಸ್ಟ್ ಮಾಡಿದೆ.ಶಿವಕುಮಾರ್ ಹೋಲುವ ಎ.ಐ ಸೃಷ್ಟಿತ ವ್ಯಕ್ತಿ ಪೋಸ್ಟರ್ ಅಂಟಿಸುವಾಗ ಬರುವ ವ್ಯಕ್ತಿಯೊಬ್ಬ, ‘ಏನಣ್ಣಾ.. ಏನು ಮಾಡುತ್ತಿದ್ದೀಯಾ? ಕಳ್ಳನ ತರ ಪೋಸ್ಟರ್ ಅಂಟಿಸುತ್ತಿದ್ದಿಯಾ?’ ಎನ್ನುತ್ತಾನೆ. ಅದಕ್ಕೆ ಎ.ಐ ವ್ಯಕ್ತಿ, ‘ಸುಮ್ನಿರೊ, ಮೊದಲಿನಿಂದಲೂ ನಾನು ಇದನ್ನೇ ತಾನೇ ಮಾಡಿಕೊಂಡು ಬಂದಿರೋದು’ ಎನ್ನುತ್ತಾನೆ.

ರೈತರಿಗೆ ಮೋಸ ಮಾಡೋದು ತಪ್ಪಲ್ಲವಾ ಅಣ್ಣಾ?’ ಎಂಬ ಪ್ರಶ್ನೆಗೆ, ‘ಲೇ ಮೋಸ ಮಾಡಿ ಬೇರೆಯವರ ಮೇಲೆ ಎತ್ತಾಕಬೇಕು. ಆವಾಗ್ಲೆ ನಾವು ಚನ್ನಾಗಿರೋದು’ ಎನ್ನುವ ಎ.ಐ ವ್ಯಕ್ತಿ, ನಿನಗೊಂದು ಮಾತ ಹೇಳುತ್ತೇನೆ ನೋಡು ಎಂದು ಮಾತು ಮುಗಿಸುತ್ತಿ ದ್ದಂತೆ, ‘ಯಾರಾದ್ರು ಹಾಳಾಗೋಗ್ಲಿ ನಾವ್ ನೆಟ್ಗಿದ್ರೆ ಸಾಕು. ಬೇನಾಮಿ ಆಸ್ತಿ ಮಾಡಿ ಜಂಭ ಕೊಚ್ಕೊ ಬೇಕು’ ಎಂಬ ಹಾಡಿನ ಎರಡು ಸಾಲುಗಳೊಂದಿಗೆ ವಿಡಿಯೊ ಕೊನೆಗೊಳ್ಳುತ್ತದೆ.

https://www.facebook.com/share/r/1BwfTzny9N/: ಡಿಕೆಶಿ ಪೋಸ್ಟರ್ ಅಂಟಿಸುವ ಎ.ಐ ವಿಡಿಯೊ ಹಂಚಿಕೊಂಡ ಜೆಡಿಎಸ್‌

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!