ಟಾಟಾ; ವಿಮಾನ ದುರಂತದ ಸಂತ್ರಸ್ತರಿಗಾಗಿ 500 ಕೋಟಿಯ ಕಲ್ಯಾಣ ಟ್ರಸ್ಟ್ ಸ್ಥಾಪನೆ

Picture of Savistara

Savistara

Bureau Report

ನವದೆಹಲಿ: ಏರ್ ಇಂಡಿಯಾ ವಿಮಾನ ದುರಂತದಸಂತ್ರಸ್ತರಿಗಾಗಿ ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ ಜಂಟಿಯಾಗಿ 500 ಕೋಟಿ ರೂ.ಗಳ ಕಲ್ಯಾಣ ಟ್ರಸ್ಟ್‌ ಅನ್ನು ಸ್ಥಾಪಿಸಿವೆ. “ದಿ ಎಐ-171 ಸ್ಮಾರಕ ಮತ್ತು ಕಲ್ಯಾಣ ಟ್ರಸ್ಟ್’ ಹೆಸರಿನಲ್ಲಿ ಟ್ರಸ್ಟ್‌ನ್ನು ಮುಂಬೈನಲ್ಲಿ ನೋಂದಾಯಿಸಲಾಗಿದೆ.ಟಾಟಾ ಸಮೂಹದ ಈ ಎರಡು ಕಂಪೆನಿಗಳು ಈ ಕಲ್ಯಾಣ ಟ್ರಸ್ಟ್‌ಗೆ ತಲಾ 250 ಕೋಟಿ ರೂ.ಗಳ ದೇಣಿಗೆಯನ್ನು ನೀಡಲಿವೆ. ಈ ಮೊತ್ತವನ್ನು ಜನಕಲ್ಯಾಣ ಯೋಜನೆಗಳು ಮತ್ತು ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಒಂದು ಕೋಟಿ ರೂ. ಹೆಚ್ಚುವರಿ ಪರಿಹಾರ ನೀಡಲು ಬಳಸಲಾಗುವುದು ಎಂದು ಟಾಟಾ ಗ್ರೂಪ್ ತಿಳಿಸಿದೆ.

[t4b-ticker]
error: Content is protected !!