ರಾಜ್ಯಕ್ಕೆ 750 ಇವಿ ಬಸ್: ಸಚಿವ ರಾಮಲಿಂಗಾರೆಡ್ಡಿ

Picture of Savistara

Savistara

Bureau Report

ಹುಬ್ಬಳ್ಳಿ: ‘ಬೆಳಗಾವಿ, ಮೈಸೂರು, ಶಿವಮೊಗ್ಗ ಸೇರಿ ರಾಜ್ಯದ ಏಳು ನಗರಗಳಿಗೆ ತಲಾ 100ರಂತೆ ಮತ್ತು ಒಂದು ನಗರಕ್ಕೆ 50 ವಿದ್ಯುತ್‌ ಚಾಲಿತ (ಇವಿ) ಬಸ್‌ಗಳನ್ನು ಕೇಂದ್ರ ಸರ್ಕಾರ ಒದಗಿಸಲಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

‘ಕೇಂದ್ರ ಸರ್ಕಾರವೇ ನೇರವಾಗಿ ಟೆಂಡರ್ ಕರೆದು, ಚಾಲಕರನ್ನೂ ನೇಮಿಸಲಿದೆ. ಕಂಡಕ್ಟರ್‌ಗಳನ್ನು ನೇಮಿಸಿ, ಬಾಡಿಗೆ ಆಧಾರದಲ್ಲಿ ನಾವು ಬಸ್ ಬಳಸಬಹುದು’ ಎಂದು ಶುಕ್ರವಾರ ಇಲ್ಲಿ ತಿಳಿಸಿದರು.’ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಪ್ರಸಕ್ತ ವರ್ಷ 700 ಬಸ್ ನೀಡಲಾಗುತ್ತದೆ. 300 ಬಸ್‌ಗಳ ಖರೀದಿಗೆ ಈಗಾಗಲೇ ಟೆಂಡ‌ರ್ ಆಗಿದೆ’ ಎಂದು ಹೇಳಿದರು.’ಐದು ವರ್ಷ ಅವಧಿ ಪೂರ್ಣಗೊಳಿಸುವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪಕ್ಷದ ಹೈಕಮಾಂಡ್ ಗರಂ ಆಗಿದೆ ಎಂಬುದು ಊಹಾಪೋಹ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟದ್ದು’ ಎಂದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!