ಸಿಎಂ ಭಾಷಣಕ್ಕೂ ಮುನ್ನವೇ ತೆರಳಿದ ಡಿಕೆಶಿ; ಆಂತರಿಕ ಕಲಹ ಜಗಜ್ಜಾಹೀರು

Picture of Savistara

Savistara

Bureau Report

ಡಿಕೆಶಿ ಹೆಸರು ಹೇಳಿ ಎಂದಿದ್ದಕ್ಕೆ ಗರಂ ಆದ ಸಿಎಂ

ಮೈಸೂರು: ಐದು ವರ್ಷ ನಾನೇ ಸಿಎಂ ಎಂದುಇತ್ತೀಚೆಗಷ್ಟೇ ಘೋಷಣೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಇಂದು (ಶನಿವಾರ, ಜು.19) ತವರು ಜಿಲ್ಲೆ ಮೈಸೂರಿನಲ್ಲಿ ಸಾಧನಾ ಸಮಾವೇಶ ಮಾಡಿದ್ದಾರೆ. ಆದರೆ ಈ ಸಾಧನಾ ಸಮಾವೇಶದಲ್ಲೂ ಕಾಂಗ್ರೆಸ್ ಪಾರ್ಟಿಯ ಆಂತರಿಕ ಕಲಹ ಜಗಜ್ಜಾಹೀರಾಗಿದೆ.ಸಾಧನಾ ಸಮಾವೇಶದಲ್ಲಿ ಭಾಗವಹಿಸಿದ್ದ ಡಿಸಿಎಂ ಡಿ ಕೆ ಶಿವಕುಮಾ‌ರ್, ಭಾಷಣ ಮಾಡಿದ ನಂತರ ವೇದಿಕೆಯಿಂದ ಕೆಳಗಿಳಿದು ನಿರ್ಗಮಿಸಿದರು. ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವುದಕ್ಕೂ ಮುನ್ನವೇ ಡಿಕೆ ಶಿವಕುಮಾರ್ ಮೈಸೂರು ತೊರೆದಿದ್ದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಶುರು ಮಾಡುತ್ತಿದ್ದಂತೆ ಡಿಕೆಶಿ ಖರ್ಚಿಯಿಂದ ಎದ್ದು ಹೊರಟೇಬಿಟ್ಟಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪನವರ ಪುತ್ರ, ಸಂಸದ ಸುನೀಲ್ ಬೋಸ್ ಜೊತೆಯಲ್ಲಿ ವೇದಿಕೆಯಿಂದ ಕೆಳಗಿಳಿದರು. ಆದರೆ ಸುನೀಲ್ ಬೋಸ್ ಮಾತ್ರ ವೇದಿಕೆಗೆ ವಾಪಾಸಾದರು.

ಡಿಕೆಶಿ ಹೆಸರು ಹೇಳಿ ಎಂದಿದ್ದಕ್ಕೆ ಗರಂ ಆದ ಸಿಎಂ

ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವಾಗ ಡಿ ಕೆ ಶಿವಕುಮಾರ್ ಹೆಸರು ಪ್ರಸಾಪಿಸಲಿಲ್ಲ ಎಂದು ವೇದಿಕೆಯ ಮೇಲಿದ್ದ ಕಾಂಗ್ರೆಸ್ ಮುಖಂಡರೊಬ್ಬರು ಸಿದ್ದರಾಮಯ್ಯನವರ ಗಮನ ಸೆಳೆದರು. ಆದರೆ ಇದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆದರು.

ವೇದಿಕೆ ಮೇಲಿರುವವರ ಹೆಸರನ್ನು ಹೇಳಿ ಸ್ವಾಗತಿಸಿದ್ದೇನೆ. ಡಿಕೆ ಶಿವಕುಮಾ‌ರ್ ವೇದಿಕೆಯಲ್ಲಿ ಇಲ್ಲ. ಅವರು ಬೆಂಗಳೂರಿಗೆ ಹೋದರು. ವೇದಿಕೆಯ ಮೇಲೆ ಅವರು ಇಲ್ಲದ ಕಾರಣ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!