ಸಂಸತ್ತಲ್ಲಿ ಇಂದಿನಿಂದ ಮುಂಗಾರು ಸಂಗ್ರಾಮ

Picture of Savistara

Savistara

Bureau Report

ಉಗ್ರ ದಾಳಿ, ಟ್ರಂಪ್‌ ಹೇಳಿಕೆಗೆ ಬಗ್ಗೆ ಮೋದಿ ಸ್ಪಷ್ಟನೆಗೆ ವಿಪಕ್ಷಗಳ ಆಗ್ರಹ

ಹೊಸದಿಲ್ಲಿ: ಸಂಸತ್‌ನ ಮುಂಗಾರು ಅಧಿವೇಶನಸೋಮವಾರ ಆರಂಭವಾಗಲಿದ್ದು, ಆಪರೇಷನ್‌ ಸಿಂದೂರ ಕಾರ್ಯಾಚರಣೆ ಹಾಗೂ ಭಾರತ-ಪಾಕ್ ಸಂಘರ್ಷದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.ಏ‌ರ್ ಇಂಡಿಯಾ ವಿಮಾನ ದುರಂತ, ಆಪರೇಷನ್ ಸಿಂದೂರ, ಭಾರತ-ಪಾಕ್ ಕದನ ವಿರಾಮ ಕುರಿತು ಟ್ರಂಪ್ ಹೇಳಿಕೆ, ಬಿಹಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸೇರಿದಂತೆ ಹಲವು ವಿಚಾರಗಳನ್ನು ಸರಕಾರದ ವಿರುದ್ಧ ಅಸ್ತ್ರವಾಗಿ ಬಳಸಲು ವಿಪಕ್ಷಗಳ ಐಎನ್‌ಡಿಐಎ ಒಕ್ಕೂಟ ಸಜ್ಜಾಗಿದೆ.ಆಗಸ್ಟ್ 12ರ ವರೆಗೆ ಅಧಿವೇಶನ ನಡೆಯಲಿದ್ದು, ಉಭಯ ಸದನಗಳಲ್ಲಿ ಒಟ್ಟಾರೆ 21 ದಿನ ಕಲಾಪ ನಡೆಯಲಿದೆ. ಆ.12ರಿಂದ ಆ.18ರ ವರೆಗೆ ಕಲಾಪಕ್ಕೆ ವಿರಾಮ ನೀಡಲಾಗಿದೆ. ಈ ಅಧಿವೇಶನದಲ್ಲಿ 8 ಹೊಸ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

8 ಹೊಸ ಮಸೂದೆ ಮಂಡನೆ ಸಾಧ್ಯತೆ: ರಾಷ್ಟ್ರೀಯ ಕ್ರೀಡಾ ಮಸೂದೆ, ಭೂಪಾರಂಪರಿಕ ತಾಣಗಳು ಮತ್ತು ಭೂ ಅವಶೇಷಗಳ ಸಂರಕ್ಷಣೆ ಮತ್ತು ನಿರ್ವಹಣೆ ಮಸೂದೆ, ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, ರಾಷ್ಟ್ರೀಯ ಡೋಪಿಂಗ್ ನಿಗ್ರಹ ಮಸೂದೆ, ಮಣಿಪುರ ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ಮಸೂದೆ, ಜನ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ತಿದ್ದುಪಡಿ ಮಸೂದೆ ಮತ್ತು ತೆರಿಗೆ ಕಾನೂನುಗಳ ತಿದ್ದುಪಡಿ ಮಸೂದೆಗಳನ್ನು ಸರಕಾರ ಮಂಡಿಸುವ ಸಾಧ್ಯತೆಯಿದೆ. ಇದೇ ವೇಳೆ ಅಧಿವೇಶನದಲ್ಲಿ ಒಟ್ಟು 17 ಮಸೂದೆಗಳ ಮಂಡನೆಯಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಎಲ್ಲ ವಿಚಾರಗಳ ಮುಕ್ತ ಚರ್ಚೆಗೆ ಅವಕಾಶ:

ಸರಕಾರಪಹಲ್ಗಾಮ್ ದಾಳಿ, ಆಪರೇಷನ್ ಸಿಂದೂರ, ಭಾರತ-ಪಾಕ್‌ ಸಂಘರ್ಷ, ಟ್ರಂಪ್ ಮಧ್ಯಸ್ಥಿಕೆ ಹೇಳಿಕೆ, ಬಿಹಾರದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ, ಏ‌ರ್ ಇಂಡಿಯಾ ವಿಮಾನ ದುರಂತ ಸೇರಿದಂತೆ ಹಲವಾರು ಅಸ್ತ್ರಗಳೊಂದಿಗೆ ಸಂಸತ್‌ ಮುಂಗಾರು ಅಧಿವೇಶನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿವೆ. ಮತ್ತೂಂದೆಡೆ, ನಿಯಮದ ಪ್ರಕಾರ ಎಲ್ಲ ವಿಚಾರಗಳ ಚರ್ಚೆಗೂ ಸರಕಾರ ಮುಕ್ತವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ನ್ಯಾ| ವರ್ಮಾ ವಿರುದ್ಧ 100ಕ್ಕೂ ಹೆಚ್ಚು ಸಂಸದರ ಸಹಿ:

ಸಚಿವನ್ಯಾಯಮೂರ್ತಿ ಯಶ್ವಂತ್ ವರ್ಮಾ ಅವರನ್ನು ತೆಗೆದುಹಾಕಲು ಸಂಸತ್ತಿನಲ್ಲಿ ನಿರ್ಣಯ ಮಂಡಿಸಲು 100ಕ್ಕೂ ಹೆಚ್ಚು ಸಂಸದರು ಈಗಾಗಲೇ ಸಹಿ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಲೋಕಸಭೆಯಲ್ಲಿ ಮಹಾಭಿಯೋಗ ನಿರ್ಣಯ ಮಂಡಿಸಲು ಇದು ಅಗತ್ಯವಿರುವ ಬೆಂಬಲ ಮಿತಿಯನ್ನು ದಾಟಿದೆ. ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಗಂಭೀರ ವಿಷಯವಾಗಿದ್ದು, ಎಲ್ಲ ಪಕ್ಷಗಳ ಬೆಂಬಲವಿದೆ ಎಂದಿದ್ದಾರೆ.

ಪ್ರಧಾನಿ ಮೋದಿಯೇ ಉತ್ತರ ನೀಡಬೇಕು: ವಿಪಕ್ಷ

ಪಹಲ್ಲಾಮ್ ದಾಳಿ, ಆಪರೇಷನ್ ಸಿಂದೂರ ಭಾರತ ಮತ್ತು ಪಾಕಿಸ್ಥಾನದ ನಡುವಿನ ಯುದ್ಧ ನಿಲ್ಲಿಸಿದ್ದರ ಬಗ್ಗೆ ಟ್ರಂಪ್ ಪದೇ ಪದೆ ನೀಡುತ್ತಿರುವ ಹೇಳಿಕೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಸ್ವತಃ ಪ್ರಧಾನಿ ಮೋದಿ ಅವರೇ ಉತ್ತರ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಆದರೆ ಪ್ರಧಾನಿ ಮೋದಿಯವರು ಸಂಸತ್‌ನಲ್ಲಿ ಈ ಕುರಿತು ಮಾತನಾಡುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ.

ಚರ್ಚೆಯಾಗುವ ವಿಷಯ

-ಪಹಲ್ಲಾಮ್‌ನಲ್ಲಿ ನಡೆದ ಉಗ್ರ ದಾಳಿ

-ಸೇನೆ ಕೈಗೊಂಡ ಆಪರೇಷನ್ ಸಿಂದೂರ

-ಟ್ರಂಪ್‌ ನೀಡಿದ ಮಧ್ಯಸ್ಥಿಕೆ ಹೇಳಿಕೆ

-ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ

ಏ‌ರ್ ಇಂಡಿಯಾ ವಿಮಾನ ದುರಂತ ವಿಪಕ್ಷಗಳಿಂದ 41 ಪ್ರಶ್ನೆಗಳು ಸಿದ್ಧ

ಅಧಿವೇಶನದ ಮೊದಲ ವಾರ ಕಾಂಗ್ರೆಸ್, ಬಿಜೆಪಿ, ಟಿಎಂಸಿ, ಡಿಎಂಕೆ, ಜೆಡಿಯು, ಸಿಪಿಎಂ, ಸಿಪಿಐ, ಶಿವಸೇನೆ ಸೇರಿದಂತೆ ಸುಮಾರು 50 ಸಂಸದರು ಎರಡೂ ಸದನಗಳ ಪ್ರಶೋತ್ತರ ಅವಧಿಯಲ್ಲಿ ಕನಿಷ್ಠ 41 ಪ್ರಶ್ನೆಗಳನ್ನು ಕೇಳಲು ಸಿದ್ಧತೆ ನಡೆಸಿದ್ದಾರೆ. ಈ ಪೈಕಿ 34 ಪ್ರಶ್ನೆಗಳು(ಲೋಕಸಭೆಯಲ್ಲಿ 23, ರಾಜ್ಯಸಭೆಯಲ್ಲಿ 11) ವಿಶೇಷವಾಗಿ ಏ‌ರ್ ಇಂಡಿಯಾ ದುರಂತಕ್ಕೆ ಸಂಬಂಧಿಸಿದ್ದರೆ, ಕನಿಷ್ಠ 7 ಪ್ರಶ್ನೆಗಳು ನಾಗರಿಕ ವಿಮಾನಯಾನ ಕ್ಷೇತ್ರದ ಸುರಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳಾಗಿವೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!