ಹೊಸದಿಲ್ಲಿ: ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ (ಛೇರ್ಮನ್) ಜಗದೀಪ್ ಧನ್ಮರ್ ತಮ್ಮ ಸ್ಥಾನಕ್ಕೆ ಸೋಮವಾರ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ.ಅನಾರೋಗ್ಯ ಕಾರಣದಿಂದ ಹಾಗೂ ವೈದ್ಯಕೀಯ ಸಲಹೆ ಮೇರೆಗೆ 74 ವರ್ಷದ ಜಗದೀಪ್ ಧನ್ಮರ್ ಉಪರಾಷ್ಟ್ರಪತಿ (Vice President) ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಸಲ್ಲಿಸಿದ ಪತ್ರದಲ್ಲಿ ಬರೆದಿದ್ದಾರೆ. ತಮ್ಮ ರಾಜೀನಾಮೆಯ ಭಾರತದ ಸಂವಿಧಾನದ 67(ಎ) ವಿಧಿಗೆ ಅನುಸಾರ ಸ್ವೀಕರಿಸಬೇಕೆಂದು ಪತ್ರದಲ್ಲಿ ಜಗದೀಪ್ ಧನ್ನರ್ ಕೋರಿದ್ದಾರೆ.
ದೇಶದ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಸಂಪುಟಕ್ಕೆ ಅವರು ತಮ್ಮ ಕೃತಜ್ಞತೆಯ ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ ವೇಳೆಯೇ ರಾಜೀನಾಮೆ ಸಲ್ಲಿಸಿರುವುದು ಆಶ್ಚರ್ಯಚಕಿತರಾಗಿಸಿದೆ. ನನ್ನ ಅಧಿಕಾರದ ಅವಧಿಯಲ್ಲಿ ಬಹಳಷ್ಟು ಕಲಿತಿದ್ದೇನೆ. ಎಲ್ಲಾ ಸಂಸದರಿಂದ ನಾನು ಪಡೆದ ಗೌರವ, ವಿಶ್ವಾಸ ಸದಾ ನೆನಪಿಸಿಕೊಳ್ಳುತ್ತೇನೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಉಪರಾಷ್ಟ್ರಪತಿಯಾಗಿ ನಾನು ಪಡೆದ ಅನುಭವಗಳು ಮತ್ತು ಒಳನೋಟಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.ಸೋಮವಾರ ಮುಂಜಾನೆಯಿಂದ ರಾಜ್ಯಸಭೆಯ ಕಾರ್ಯವೈಖರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಧನ್ಮರ್, ರಾತ್ರಿಯಾಗುತ್ತಿದ್ದಂತೆ ಹಠಾತ್ ರಾಜೀನಾಮೆ ನಿರ್ಧಾರ ಪ್ರಕಟಿಸಿರುವುದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. 2024ರ ಡಿಸೆಂಬರ್‌ನಲ್ಲಿ ವಿಪಕ್ಷಗಳ ಸುಮಾರು 70 ಸಂಸದರು ಧನ್ನರ್ ವಿರುದ್ಧ ಪಕ್ಷಪಾತದ ಆರೋಪ ಹೊರಿಸಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಯತ್ನಿಸಿ ವಿಫಲರಾಗಿದ್ದು ಸುದ್ದಿಯಾಗಿತ್ತು.
ರಾಜೀನಾಮೆ ನೀಡಿದ್ದ ವಿ.ವಿ.ಗಿರಿ:
1969ರಲ್ಲಿ ಅಂದಿನ ರಾಷ್ಟ್ರಪತಿ ಜಾಕೀರ್ ಹುಸೇನ್ ನಿಧನರಾದಾಗ, ಅಂದು ಉಪರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಮುಂದೇನು?
ಸಂವಿಧಾನದ 64ನೇ ವಿಧಿ ಪ್ರಕಾರ, ಭಾರತದ ಸಂಸತ್ತಿನ ರಾಜ್ಯಸಭೆಯ ಸಭಾಪತಿ (ಛೇರ್ಮನ್) ಸ್ಥಾನದ ಜವಾಬ್ದಾರಿಯನ್ನು ಉಪರಾಷ್ಟ್ರಪತಿ ನಿಭಾಯಿಸುತ್ತಾರೆ. ಸಂವಿಧಾನದ 89ನೇ ವಿಧಿ ಪ್ರಕಾರ ರಾಜ್ಯಸಭೆಯ ಉಪ ಸಭಾಪತಿ ಉಪರಾಷ್ಟ್ರಪತಿ ಗೈರಾದಾಗ, ಇಲ್ಲವೇ ರಾಜೀನಾಮೆ ನೀಡಿದಾಗ ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ. ಇದೀಗ ಧರ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದೇ ಆದಲ್ಲಿ, ಪ್ರಸ್ತುತ ಉಪ ಸಭಾಪತಿ ಆಗಿರುವ ಹರಿವಂಶ್ ನಾರಾಯಣ್ ಸಿಂಗ್, ಈ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ನಿಭಾಯಿಸುವ ಸಾಧ್ಯತೆಯಿದೆ. ತೆರವಾಗುವಂತಹ ಉಪರಾಷ್ಟ್ರಪತಿ ಸ್ಥಾನಕ್ಕೆ ಆದಷ್ಟು ಶೀಘ್ರವೇ ಚುನಾವಣಾ ಪ್ರಕ್ರಿಯೆ ನಡೆಯಬೇಕು ಎಂಬ ನಿಯಮವಿದೆ. ಈ ಚುನಾವಣೆಯಲ್ಲಿ ಸಂಸತ್ತಿನ ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರಿಗಷ್ಟೇ ಮತದಾನದ ಹಕ್ಕಿರಲಿದೆ.
ಜಗದೀಪ್ ಧನ್ಮರ್ 2022ರ ಆಗಸ್ಟ್ ನಲ್ಲಿ ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಹೃದಯ ಸಂಬಂಧಿ ಕಾಯಿಲೆಗಳ ನಂತರ ಅವರನ್ನು ಈ ವರ್ಷದ ಮಾರ್ಚ್‌ನಲ್ಲಿ 4 ದಿನಗಳ ಕಾಲ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸೂಕ್ತ ಸಮಯದಲ್ಲಿ ನಿವೃತ್ತಿಯಾಗುವೆ ಎಂದಿದ್ದ ಧನ್ಮರ್
ದೆಹಲಿಯ ಜವಾಹಾರ್‌ಲಾಲ್ ನೆಹರುವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ಜು.10 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಧನ್‌ಕರ್, “ನಾನು ಸರಿಯಾದ ಸಮಯಕ್ಕೆ ನಿವೃತ್ತಿ ಹೊಂದಲಿದ್ದೇನೆ.2027ರ ಆಗಸ್ಟ್‌ಗೆ ನಾನು ನಿವೃತ್ತಿ ಪಡೆಯುತ್ತೇನೆ’ ಎಂದಿದ್ದರು.













































