ಅನಿಲ್ ಅಂಬಾನಿ ಮೇಲೆ ಮುಗಿಬಿದ್ದ ಇ.ಡಿ, 50 ಕಂಪನಿ, 35ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ

Picture of Savistara

Savistara

Bureau Report

ಬೃಹತ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ .ಡಿ ) ರಿಲಯನ್ಸ್‌ ಗ್ರೂಪ್‌ ಅಧ್ಯಕ್ಷ ಅನಿಲ್‌ ಅಂಬಾನಿಗೆ ಸೇರಿದ ದಿಲ್ಲಿ ಮತ್ತು ಮುಂಬೈನ ಕಚೇರಿಗಳ ಮೇಲೆ ಬೃಹತ್ ದಾಳಿ ನಡೆಸಿದೆ. ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿದ್ದ ಎರಡು ಎಫ್‌ಐಆರ್‌ಗಳನ್ನು ಆಧರಿಸಿ ಈ ಕಾರ್ಯಾಚರಣೆ ನಡೆದಿದೆ.

ನವದೆಹಲಿ, ಜುಲೈ 24 : ಬೃಹತ್ ಅಕ್ರಮ ಹಣ ವರ್ಗಾವಣೆಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಗೆ ಸೇರಿದ ದಿಲ್ಲಿ ಮತ್ತು ಮುಂಬೈನ ಕಚೇರಿಗಳ ಮೇಲೆ ಬೃಹತ್‌ ದಾಳಿ ನಡೆಸಿದೆ. ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿದ್ದ ಎರಡು ಎಫ್‌ಐಆರ್‌ಗಳನ್ನು ಆಧರಿಸಿ ಈ ಕಾರ್ಯಾಚರಣೆ ನಡೆದಿದೆ.ಇ.ಡಿ ಅಧಿಕಾರಿಗಳು ಸುಮಾರು 35 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, 50ಕ್ಕೂ ಹೆಚ್ಚು ಸಂಸ್ಥೆಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬ್ಯಾಂಕ್‌ಗಳು, ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಹೂಡಿಕೆದಾರರು ವಂಚಿಸಲು ರೂಪಿಸಲಾದ ‘ಮೆಗಾ ಪ್ಲಾನ್’ ಇದಾಗಿದೆ ಎಂದು ಇ.ಡಿ ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 25ಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಲಾಗಿದೆ.ಈ ದಾಳಿಯ ಕೇಂದ್ರಬಿಂದು ಯೆಸ್ ಬ್ಯಾಂಕ್ ಹಗರಣವಾಗಿದೆ. ಆರೋಪಗಳ ಪ್ರಕಾರ, 2017 ಮತ್ತು 2019ರ ನಡುವೆ ಯೆಸ್ ಬ್ಯಾಂಕ್, ಅನಿಲ್‌ ಅಂಬಾನಿ ಗ್ರೂಪ್ ಕಂಪನಿಗಳಿಗೆ ಸುಮಾರು 3,000 ಕೋಟಿ ರೂ. ಸಾಲ ವಿತರಿಸಿತ್ತು. ಈ ಬೃಹತ್ ಅಸುರಕ್ಷಿತ ಸಾಲಗಳನ್ನು ಮಂಜೂರು ಮಾಡಲು ಯೆಸ್ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಮತ್ತು ಮಾಜಿ ಪ್ರವರ್ತಕರು ಲಂಚ ಪಡೆದಿದ್ದಾರೆ ಎಂದು ದೂರಲಾಗಿದೆ.ಸಾಲ ಮಂಜೂರಾತಿ ಕಡತಗಳಲ್ಲಿ ಅಗತ್ಯ ದಾಖಲೆಗಳೂ ಇರಲಿಲ್ಲ. ಅಲ್ಲದೆ ಹಳೆಯ ಸಾಲವನ್ನು ತೀರಿಸಲು ಹೊಸ ಸಾಲಗಳನ್ನು ನೀಡುವ ಮೂಲಕ ವಂಚನೆ ಎಸಗಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರಕರಣದ ತನಿಖೆಗೆ ರಾಷ್ಟ್ರೀಯ ವಸತಿ ಬ್ಯಾಂಕ್ (ಎನ್‌ಎಚ್‌ಬಿ), ಸೆಬಿ, ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ಎನ್‌ಎಫ್‌ಆರ್‌ಎ) ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಸಂಸ್ಥೆಗಳು ತಮ್ಮ ತನಿಖಾ ವರದಿಗಳನ್ನು ಇ.ಡಿ ಯೊಂದಿಗೆ ಹಂಚಿಕೊಂಡಿವೆ. ಈ ಎಲ್ಲಾ ದಾಖಲೆಗಳನ್ನು ವಿಶ್ಲೇಷಣೆ ಮಾಡಿ, ಇ.ಡಿ ಇದೀಗ ಅನಿಲ್ ಅಂಬಾನಿ ಮೇಲೆ ಮುಗಿಬಿದ್ದಿದೆ.ಸೆಬಿ ನೀಡಿದ ವರದಿಯಲ್ಲಿ, ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಕಂಪನಿಯಲ್ಲಿ ಗಂಭೀರ ಅಕ್ರಮಗಳು ನಡೆದಿರುವುದಾಗಿ ಹೇಳಲಾಗೊದೆ. ಕೇವಲ ಒಂದೇ ವರ್ಷದಲ್ಲಿ ಅಂದರೆ 2017-18 80 2018-190 ಅವಧಿಯಲ್ಲಿ, ಕಂಪನಿಯ ಕಾರ್ಪೊರೇಟ್ ಸಾಲದ ಮೊತ್ತವು 3,742 ಕೋಟಿ ರೂ.ನಿಂದ 8,670 ಕೋಟಿ ರೂ.ಗೆ ಏರಿಕೆ ಕಾಣುವ ಮೂಲಕ ದ್ವಿಗುಣಗೊಂಡಿದ್ದು, ಇದು ದೊಡ್ಡ ಮಟ್ಟದ ಅಕ್ರಮವನ್ನು ಸೂಚಿಸುತ್ತದೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!