ಜಿ ಎಸ್ ಟಿ ನೋಟಿಸ್ ಹಿಂಪಡೆದ ರಾಜ್ಯ ಸರ್ಕಾರ : ಕಾಂಗ್ರೆಸ್ ಸರ್ಕಾರದ ತುಘಲಕ್ ನೀತಿ ಬಟಾ ಬಯಲು: ಹರೀಶ್ ಪೂಂಜ

Picture of Savistara

Savistara

Bureau Report

ಬೆಳ್ತಂಗಡಿ :ಜು. 24:ಯೋಜನಾ ಬದ್ಧವಲ್ಲದ ಅವೈಜ್ಞಾನಿಕ ಗ್ಯಾರಂಟಿಗಳಿಂದ ತನ್ನ ಆಶ್ವಾಸನೆಯನ್ನು ಅನುಷ್ಠಾನಗೊಳಿಸಲೂ ಆಗದೆ ಇತ್ತ ದಿವಾಳಿಯಂಚಿಗೆ ತಲುಪಿದ ಆರ್ಥಿಕ ವ್ಯವಸ್ಥೆಯನ್ನು ವಾಮ ಮಾರ್ಗದ ಮೂಲಕ ಬೀದಿ ಬದಿಯ ವ್ಯಾಪಾರಿಗಳಿಗೆ ಜಿ ಎಸ್ ಟಿ ನೋಟಿಸ್ ಕಳುಹಿಸಿ ಭರ್ತಿ ಮಾಡಲು ವಿಫಲ ಯತ್ನ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ನೋಟಿಸ್ ಅನ್ನು ಹಿಂಪಡೆದಿದ್ದನ್ನು ಗಮನಿಸಿದಾಗ ಶಾಲಾ ಪಠ್ಯಪುಸ್ತಕದಲ್ಲಿ ಓದಿದ ತುಘಲಕ್ ದರ್ಬಾರ್ ನ್ನು ನೆನಪಿಗೆ ತರುತ್ತದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ.ಜಿ ಎಸ್ ಟಿ ಕಾಯ್ದೆಯ ಪ್ರಕಾರ ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದೆ ಎಂಬ ಅರಿವಿದ್ದರೂ, ಬೀದಿ ಬದಿಯ ವ್ಯಾಪಾರಿಗಳಿಗೆ ಸಣ್ಣವರ್ತಕರಿಗೆ ವಹಿವಾಟು ರೂ. 40 ಲಕ್ಷ ದಾಟಿದೆಂಬ ನೆಪದಲ್ಲಿ ಅವರ ಹೊಟ್ಟೆಗೆ ಹೊಡೆಯಲು ಯತ್ನಿಸಿ, ಶೇಕಡ 18ರಂತೆ ತೆರಿಗೆ, ಬಡ್ಡಿ, ದಂಡ ಇತ್ಯಾದಿಗಳನ್ನು ನಮೂದಿಸಿ ನಿಯಮ ಬಾಹಿರವಾಗಿ ನೋಟಿಸ್ ನೀಡಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದ ನಿಜ ಬಣ್ಣ ಈಗ ರಾಜ್ಯದ ಜನತೆಯ ಮುಂದೆ ಬಟಾಬಯಲಾಗಿದೆ ಎಂದು ಹರೀಶ್ ಪೂಂಜ ಪತ್ರಿಕ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!