ಕಾಯಕ ಯೋಗಿಯ ಜನ್ಮದಿನ – ಸೇವಾ ಪಾಕ್ಷಿಕ ಅಭಿಯಾನಕ್ಕೆ ಚಾಲನೆ

Picture of Savistara

Savistara

Bureau Report

ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಜನ್ಮ ದಿನದ ನಿಮಿತ್ತ “ಸೇವಾ ಪಾಕ್ಷಿಕ” ಅಭಿಯಾನದಡಿಯಲ್ಲಿ ಮಹಿಳೆಯರಿಗೆ ಉತ್ತಮ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಜೊತೆಗೆ ಆರೋಗ್ಯದ

ಕಾಳಜಿ ನೀಡುವ ಉದ್ದೇಶದಿಂದ ತೀರ್ಥಹಳ್ಳಿ ರಸ್ತೆಯಲ್ಲಿರುವ “ನಾರಾಯಣ ಹೃದಯಾಲಯ” ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ “ಸ್ವಸ್ಥ ನಾರಿ – ಸಶಕ್ತ ಪರಿವಾರ” ಅಡಿಯಲ್ಲಿ ಉಚಿತ ಹೃದಯ ತಪಾಸಣಾ ಶಿಬಿರಕ್ಕೆ ಇಂದು ಚಾಲನೆ ಕೊಡಲಾಯಿತು.

ಸನ್ಮಾನ್ಯ ನರೇಂದ್ರ ಮೋದಿ ಅವರು ದೇಶದ ಆಡಳಿತ ಚುಕ್ಕಾಣಿಗೆ ಬಂದ ದಿನದಿಂದ ಅವರ ಹುಟ್ಟು ಹಬ್ಬವನ್ನು ಅತ್ಯಂತ ಅರ್ಥಗರ್ಭಿತವಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳ ಮೂಲಕ ಜನಸಾಮಾನ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಯೋಜನೆ ರೂಪಿಸಲಾತ್ತಿದೆ.

ಅದರಂತೆ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರ ಕರೆಯ ಮೇರೆಗೆ ಬಿಜೆಪಿ ಶಿವಮೊಗ್ಗ ಇಂದಿನಿಂದ ಅಕ್ಟೋಬರ್ 02 ರ ಗಾಂಧಿ ಜಯಂತಿಯ ವರೆಗೆ

ಸಾರ್ವಜನಿಕರಿಗೆ ಉಪಯುಕ್ತವಾಗುವ ವಿವಿಧ ರೀತಿಯ ಸಾಮಾಜಿಕ ಕಾರ್ಯಗಳು ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ವಿಶೇಷವಾಗಿ ನಡೆಸಲು ಯೋಜನೆ ಸಿದ್ಧಪಡಿಸಿದೆ.

[t4b-ticker]
error: Content is protected !!