ಬಿಲ್ಲವ ಜಾತಿ ಮಾತ್ರ, ಉಪಜಾತಿ ಇಲ್ಲ: ಬಿಲ್ಲವ ಮುಖಂಡರ ಸ್ಪಷ್ಟನೆ

Picture of Savistara

Savistara

Bureau Report

ಉಡುಪಿ, ಸೆ. 20: ರಾಜ್ಯ ಸರಕಾರ ಸೆ.22ರಿಂದ ಅ.7ರ ವರೆಗೆ ನಡೆಸಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಬಿಲ್ಲವ ಸಮುದಾಯದವರು ಎಲ್ಲಿಯೂ ಕೂಡ ಉಪಜಾತಿ ನಮೂದಿಸಬಾರದು ಎಂದು ಬಿಲ್ಲವ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.

ವಿವಿಧ ಬಿಲ್ಲವ ಸಂಘಗಳ ತೀರ್ಮಾನದಂತೆ ಈ ನಿರ್ಧಾರಕ್ಕೆ ಬರಲಾಗಿದೆ. ಉಪನಾಮಗಳನ್ನು ಬಳಸುವುದು ಬೇಡ. ಕೇವಲ ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿಯ ಕಾಲಂನಲ್ಲಿ ಬಿಲ್ಲವ ಎಂದು ನಮೂದಿಸಬೇಕು. ಉಪಜಾತಿ ಕಾಲಂನಲ್ಲಿ ಏನೂ ಬರೆಯುವುದು ಬೇಡ. ಜಾತಿಯಪರ್ಯಾಯ ಹೆಸರುಗಳನ್ನು ಕಾಲಂ 11ರಲ್ಲಿಯೂ ಬರೆಯುವುದು ಬೇಡ.

ನಮ್ಮಲ್ಲಿ ಬಳಕೆಯಲ್ಲಿ ಇರುವ ಪದನಾಮ(ಸರ್ನೇಮ್), ಬಳಿ, ಗೋತ್ರಾ, ಕುಲ ಇತ್ಯಾದಿಗಳನ್ನು ಉಲ್ಲೇಖ ಮಾಡುವುದು ಬೇಡ. ಕೇವಲ ಜಾತಿ ಕಾಲಂನಲ್ಲಿ ಬಿಲ್ಲವ ಎಂದಷ್ಟೆ ಬರೆಯಬೇಕು ಎಂದು ಸಮುದಾಯದ ಮುಖಂಡರಾದ ಬಿ.ಎನ್.ಶಂಕರ್ ಪೂಜಾರಿ, ಪ್ರಮಲ್ ಕುಮಾರ್ ಡಾ| ಸಂತೋಷ್ ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಸರಕಾರವು ಬಿಲ್ಲವ ಜಾತಿಯೊಂದಿಗೆ ಕ್ರಿಶ್ಚಿಯನ್ ಎಂಬ ರ್ಪ ಉಲ್ಲೇಖಿಸಿ ಇನ್ನೊಂದು ಉಪಜಾತಿ ಮಾಡಿರುವ ಕುರಿತು ಸಮಾಜದ ಮುಖಂಡರೆಲ್ಲ ಸೇರಿ ಈಗಾಗಲೇ ಆಕ್ಷೇಪಣೆಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ನಮ್ಮಲ್ಲಿ ಬಿಲ್ಲವ ಕ್ರಿಶ್ಚಿಯನ್ ಎನ್ನುವ ಜಾತಿಯಿಲ್ಲ ನಮ್ಮದ ಬಿಲ್ಲವ ಜಾತಿ ಮಾತ್ರ ಎಂಬುದನ್ನು ಸಮಾಜ ಬಾಂಧವರು ಸಮೀಕ್ಷೆಯ ಸಂದರ್ಭದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು ಎಂದರು. ಮಂಜುನಾಥ, ಅಣ್ಣಪ್ಪ ಪೂಜಾರಿ, ಅನಿಲ್ ಪೂಜಾರಿ ಉಪಸ್ಥಿತರಿದ್ದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!