ಉಪವಾಸ ನಿಲ್ಲಿಸಿ: ಸೊನಮ್‌ ವಾಂಗ್ರೂಕ್‌ಗೆ ಸಿಜೆಪಿ ಮನವಿ

Picture of Savistara

Savistara

Bureau Report

ನವದೆಹಲಿ: ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವಂತೆ ಕಾಕ್ರೋಚ್ ಜನತಾ ಪಾರ್ಟಿಯು (ಸಿಜೆಪಿ) ಹೋರಾಟಗಾರ ಸೊನಮ್ ವಾಂಗ್ಟಕ್ ಅವರಿಗೆ ಬುಧವಾರ ಮನವಿ ಮಾಡಿದೆ.

ವಾಂಗ್ಟಕ್ ಅವರಿಗೆ ಸಿಜೆಪಿ ಬರೆದ ಬಹಿರಂಗ ಪತ್ರದಲ್ಲಿ, ‘ನಿಮ್ಮ ತ್ಯಾಗವು ದೇಶದಾದ್ಯಂತ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದೆ. ಈಗ ನಿಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸಬೇಕಾಗಿದೆ’ ಎಂದು ಹೇಳಿದೆ.’ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಹೋರಾಟವು ಬೇಡಿಕೆ ಈಡೇರುವವರೆಗೆ ಮುಂದುವರಿಯಲಿದೆ. ಅದಕ್ಕಾಗಿ ನಮ್ಮಿಂದ ಸಾಧ್ಯವಿರುವಷ್ಟು ಪ್ರಯತ್ನಿಸುತ್ತೇವೆ’ ಎಂದು ಅವರಿಗೆ ಸಿಜೆಪಿ ಭರವಸೆ ನೀಡಿದೆ.

ಚುನಾವಣೆ ಗೆಲ್ಲುವುದು ಮಾತ್ರ ರಾಜಕೀಯವಲ್ಲ’

ವಾಂಗ್ಟಕ್ ಅವರ ಉಪವಾಸ ಸತ್ಯಾಗ್ರಹ 25ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಪ್ರಧಾನಿ ಈವರೆಗೆ ಮೌನ ಮುರಿದಿಲ್ಲ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪೈ ಅವರು ‘ಎಕ್ಸ್’ ಮಾಡಿದ್ದಾರೆ. ‘ರಾಜಕೀಯವೆಂದರೆ ಯಾಲಿಗಳು ನಡೆಸಿ ಚುನಾವಣೆ ಗೆಲ್ಲುವುದು ಮಾತ್ರವಲ್ಲ. ಅದು ಜನರಿಗೆ ಉತ್ತರದಾಯಿಯಾಗಿರುವುದು ಕೂಡಾ ಆಗಿದೆ’ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಯಾಕೆ ವಾಂಗ್ಟಕ್ ಅವರನ್ನು ಸಂಪರ್ಕಿಸಿಲ್ಲ? ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಪೊಲೀಸರು ಯಾಕೆ ಕ್ರೂರವಾಗಿ ನಡೆದುಕೊಂಡರು? ಮತ್ತು ಪರೀಕ್ಷಾ ಅಕ್ರಮಗಳ ಬಗ್ಗೆ ಇಷ್ಟೆಲ್ಲಾ ವಿವಾದ ಇದ್ದರೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಯಾಕೆ ಇನ್ನೂ ರಾಜೀನಾಮೆ ನೀಡಿಲ್ಲ ಎಂದು ದೀ ಅವರು ಪ್ರಶ್ನಿಸಿದ್ದಾರೆ.

[t4b-ticker]
error: Content is protected !!