ಶಿವಮೊಗ್ಗದ ತಿಲಕ್ ನಗರದಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳೊಂದಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜಿಲ್ಲೆಯ ಜನತೆಗೆ ಉತ್ತಮ ಚಿಕಿತ್ಸೆ ಕೊಡುವ ಸದುದ್ದೇಶದಿಂದ ಸುಸಜ್ಜಿತವಾಗಿ ನಿರ್ಮಾಣ ಮಾಡಿರುವ “Sun Bone & Spine Speciality Hospital” ಇದರ ಉದ್ಘಾಟನೆಯನ್ನು ಸಂಸದ ಬಿ. ವೈ ರಾಘವೇಂದ್ರ ಉದ್ಘಾಟಿಸಿದರು.

ಶಿವಮೊಗ್ಗ ಜಿಲ್ಲೆ ಅವಕಾಶಗಳ ತವರೂರು. ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಪ್ರಥಮ ಎನ್ನಬಹುದು. ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಕೈಗಾರಿಕಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಎಲ್ಲರನ್ನೂ ತನತ್ತ ಸೆಳೆಯುತ್ತಿದೆ.

ಈ ಬೆಳವಣಿಗೆ ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಎನ್ನಬಹುದು. ಇದಕ್ಕೆ ಪೂರಕ ಎಂಬಂತೆ, ಶಿವಮೊಗ್ಗ ಜಿಲ್ಲೆಯಲ್ಲಿ ಮೂಳೆ ಮತ್ತು ಬೆನ್ನುಮೂಳೆ ವಿಭಾಗಕ್ಕೆ ಪ್ರತ್ಯೇಕ ಆಸ್ಪತ್ರೆ ಇರಲಿಲ್ಲ.

ಈ ಸುಸಜ್ಜಿತ ಆಸ್ಪತ್ರೆ ನಿರ್ಮಾಣದಿಂದ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಜೊತೆಗೆ ನೂರಾರು ಪದವಿದರರಿಗೆ ಉದ್ಯೋಗಾವಕಾಶ ಲಭಿಸುವುದು ಉತ್ತಮ ಬೆಳವಣಿಗೆ.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಿ ಸಾವಿರಾರು ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸಿ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ಭರವಸೆ ಬಂದಿದೆ.

ಅದರಂತೆ, ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ತರಬೇಕಿರುವ ಇನ್ನಷ್ಟು ವಿನೂತನ ಯೋಜನೆಗಳನ್ನು ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಂದು ರಾಘವೇಂದ್ರ ಹೇಳಿದರು.

ಈ ಸಮಯದಲ್ಲಿ ವೀರಾಪುರ ಹಿರೇಮಠದ ಡಾ. ಮರುಳಸಿದ್ದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಆಸ್ಪತ್ರೆ ಮಾಲೀಕರುಗಳಾದ ಶ್ರೀ ಸೂರ್ಯನಾರಾಯಣ ಹೊಸತೋಟ ಅವರು, ಶ್ರೀ ಡಾ. ಆಕಾಶ್ ಹೊಸತೋಟ ಅವರು, ಗಣ್ಯರಾದ ಶ್ರೀ ಸತೀಶ್ ರುದ್ರಪ್ಪ ಅವರು, ಶ್ರೀ ಈಶ್ವರಪ್ಪ ಅವರು, ಶ್ರೀ ರುದ್ರೇಗೌಡ ಅವರು, ಶ್ರೀ ಶಂಕರ್ ಅವರು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.











































