ಡೊನಾಲ್ಡ್ ಟ್ರಂಪ್‌ಗೆ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ

Picture of Savistara

Savistara

Bureau Report

ಜೆರುಸಲೇಂ: ಒತ್ತೆಯಾಳುಗಳ ಬಿಡುಗಡೆ ಹಾಗೂ ಗಾಜಾ ವಿರುದ್ಧದ ಯುದ್ಧ ಕೊನೆಗೊಳಿಸಲು ಸಹಾಯ ಮಾಡಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ‘ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ’ ಪ್ರದಾನ ಮಾಡುವುದಾಗಿ ಇಸ್ರೇಲ್‌ ಅಧ್ಯಕ್ಷ ಐಸಾಕ್ ಹೆರ್ಜೊಗ್ ಹೇಳಿದ್ದಾರೆ.

‘ತಮ್ಮ ದಣಿವರಿಯದ ಪ್ರಯತ್ನದ ಮೂಲಕ ಅಧ್ಯಕ್ಷ ಟ್ರಂಪ್‌ ಅವರು ನಮ್ಮ ಪ್ರೀತಿ ಪಾತ್ರರು ಮನೆಗೆ ಮರಳುಂತೆ ಮಾಡಿದ್ದರಲ್ಲದೆ, ಮಧ್ಯಪ್ರಾಚ್ಯದಲ್ಲಿ ಭದ್ರತೆ, ಸಹಕಾರ ಹಾಗೂ ಶಾಂತಿಯುತ ಭವಿಷ್ಯಕ್ಕೆ ಅಡಿಗಲ್ಲು ಹಾಕಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೆರ್ಜೋಗ್ ಅವರ ಕಚೇರಿ ತಿಳಿಸಿದೆ.’ಅವರಿಗೆ ಇಸ್ರೇಲಿ ಅಧ್ಯಕ್ಷೀಯ ಪದಕ ಪ್ರದಾನ ಮಾಡುವುದು ನನಗೆ ಗೌರವದ ವಿಷಯ’ ಎಂದು ಅವರು ತಿಳಿಸಿದ್ದಾರೆ.ಮುಂದಿನ ದಿನಗಳಲ್ಲಿ ಪ್ರಶಸ್ತಿ ಪ್ರದಾನ ಮಾಡುವುದಾಗಿ ತಿಳಿಸಿರುವ ಅವರು, ಸೋಮವಾರ ಟ್ರಂಪ್ ಅವರು ಇಸ್ರೇಲ್‌ಗೆ ಬಂದಾಗ ಈ ವಿಷಯ ತಿಳಿಸುವುದಾಗಿ ಹೇಳಿದ್ದಾರೆ.

ಡೊನಾಲ್ಡ್‌ ಟ್ರಂಪ್ ಪ್ರಸ್ತಾಪಿಸಿದ ಕದನ ವಿರಾಮ ಅನ್ವಯ ಸೋಮವಾರ ಇಸ್ರೇಲ್ ಹಾಗೂ ಹಮಾಸ್ ನಡುವೆ ಕೈದಿಗಳು ಹಾಗೂ ಒತ್ತೆಯಾಳುಗಳ ವಿನಿಮಯ ನಡೆಯಲಿದೆ.’ಗಾಜಾ ಯುದ್ಧ ಕೊನೆಗೊಂಡಿದೆ’ ಎಂದು ಟ್ರಂಪ್ ಸೋಮವಾರ ಘೋಷಿಸಿದ್ದಾರೆ. ಒತ್ತೆಯಾಳುಗಳ ಸ್ವೀಕಾರಕ್ಕೆ ಇಸ್ರೇಲ್‌ ಎದುರು ನೋಡುತ್ತಿದೆ.

[t4b-ticker]
error: Content is protected !!