ವಿಶ್ವದ ಮೊದಲ ಸಂಸತ್ ಭವನ ಅನುಭವ ಮಂಟಪದ ರೂವಾರಿ ಶರಣ ಶ್ರೀ ಅಲ್ಲಮಪ್ರಭುಗಳ ಪುಣ್ಯಭೂಮಿ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ ಗ್ರಾಮದಲ್ಲಿರುವ ಶ್ರೀ ಅಲ್ಲಮಪ್ರಭುಗಳ ಪೂಜ್ಯ ತಂದೆ ತಾಯಿಯವರ ಗದ್ದುಗೆ

ಪುನಶ್ಚೇತನ ಮಾಡುವ ಉದ್ದೇಶದಿಂದ ಕೇಂದ್ರ ಪುರಾತತ್ವ ಇಲಾಖೆಯ ಅನುದಾನದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗೆ ಇಂದು ಗದ್ದುಗೆ ಆವರಣದಲ್ಲಿ ಶಂಕು ಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಬಳ್ಳಿಗಾವಿ ಅಲ್ಲಮಪ್ರಭು ಪೀಠದ ಶ್ರೀ ಇಂದುಧರ ಸ್ವಾಮಿಗಳು, ಶಿರಾಳಕೊಪ್ಪ ವಿರಕ್ತಮಠದ ಶ್ರೀ ಸಿದ್ದೇಶ್ವರ ಸ್ವಾಮಿಗಳು, ಸಂಸದ ಬಿ ವೈ ರಾಘವೇಂದ್ರ, ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖಂಡರಾದ ಗುರುಮೂರ್ತಿ, ಪದ್ಮನಾಭ , ಹಕ್ಕರೆ ಮಲ್ಲಿಕಾರ್ಜುನ್ , ಸತೀಶ್ ಅವರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.