ಬೆಳಗಾವಿ : ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆ ಹಿನ್ನಲೆಯಲ್ಲಿ ರೆಸಾರ್ಟ್ ರಾಜಕಾರಣ ಜೋರಾಗಿದೆ. ನಿಪ್ಪಾಣಿಯಿಂದ ಸ್ಪರ್ಧೆ ನಡೆಸಿರುವ ಅಣ್ಣಾಸಾಹೇಬ್ ಜೊಲ್ಲೆ ತಮ್ಮ ಬೆಂಬಲಿತ ಸದಸ್ಯರ ಜೊತೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.ಈ ಮಧ್ಯೆ ಅವರ ಪ್ರತಿಸ್ಪರ್ಧಿ ಉತ್ತಮ ಪಾಟೀಲ ಹೆಜ್ಜೆ, ಹೆಜ್ಜೆಗೂ ತೊಡಕಾಗಿದ್ದಾರೆ. ಜೊಲ್ಲೆ ಕ್ಯಾಂಪ್ ನಲ್ಲಿದ್ದ ಸುಮಾರು 11 ಸದಸ್ಯರನ್ನು ತಮ್ಮತ್ತ ಸೆಳೆಯುವಲ್ಲಿ ಉತ್ತಮ ಪಾಟೀಲ್ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.ನಿಪ್ಪಾಣಿ ಕ್ಷೇತ್ರದಲ್ಲಿ ಒಟ್ಟು 119 ಪಿಕೆಪಿಎಸ್ ಇದ್ದು ಇವುಗಳ ಪೈಕಿ 70 ಕ್ಕೂ ಅಧಿಕ ಜನ ಜೊಲ್ಲೆ ಬೆಂಬಲಕ್ಕೆ ನಿಂತಿದ್ದರು. ಆದರೆ ಮತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಉತ್ತಮ ಪಾಟೀಲ್ ಜೊಲ್ಲೆ ಬಣದ ಸದಸ್ಯರನ್ನು ಹೈಜಾಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.ಒಟ್ಟಿನಲ್ಲಿ ಜಿದ್ದಾಜಿದ್ದಿಗೆ ಕಾರವಾಗಿರುವ ನಿಪ್ಪಾಣಿ ಡಿಸಿಸಿ ನಿರ್ದೇಶಕ ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಿಸಿದೆ. ಜೊತೆಗೆ ಉತ್ತಮ ಪಾಟೀಲ ಏಟಿಗೆ ಜೊಲ್ಲೆ ತಿರುಗೇಟು ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಜೊಲ್ಲೆ ಕ್ಯಾಂಪ್ ನಲ್ಲಿದ್ದ 11 ಪಿಕೆಪಿಎಸ್ ಸದಸ್ಯರು ಹೈಜಾಕ್..? ದಾಳ ಉರುಳಿಸಿದ ಉತ್ತಮ್ ಪಾಟೀಲ…!

Savistara
Bureau Report
[t4b-ticker]