ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಉದ್ಯೋಗ ಕೌಶಲ್ಯತೆ, ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯ ವೃದ್ಧಿ, ಇತ್ಯಾದಿಗಳಲ್ಲಿ ಪರಿಣಿತರ ತಂಡವನ್ನೊಳಗೊಂಡಿರುವ ಪ್ರತಿಷ್ಠಿತ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯು ವಿದ್ಯಾರ್ಥಿಗಳ ಶೈಕ್ಷಣಿಕ ಪಯಣದಲ್ಲಿ ಅತ್ಯಂತ ಪರಿಣಾಕಾರಿ ಎಂದೇ ಪರಿಗಣಿಸಲ್ಪಡುವ ‘ಗಣಿತ’ ವಿಷಯಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪರಿಹರಿಸಬಲ್ಲ ಒಂದು ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸುತ್ತಿದೆ.ಸಾಮಾನ್ಯವಾಗಿ ಗಣಿತಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಇರುವ ಸಮಸ್ಯೆಗೆ ಪೋಷಕರು ಟ್ಯೂಷನ್ ಗಳ ಮೊರೆ ಹೋಗುವುದು ಸಾಮಾನ್ಯ, ಟ್ಯೂಷನ್ ಎಂಬುದು ಆ ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಯನ್ನು ಪರಿಹರಿಸಲು ನೇರವಾಗಬಹುದೇ ವಿನಃ ಅದು ಶಾಶ್ವತ ಪರಿಹಾರವಲ್ಲವೆಂಬುದುದನ್ನು ಕಂಡುಕೊಂಡು, ವಿದ್ಯಾರ್ಥಿಗಳಿಗೆ ಶಾಶ್ವತ ಪರಿಹಾರವನ್ನು ನೀಡುವ ಯೋಜನೆಯೇ ವಿದ್ಯಾಮಾತಾ – ‘ಮ್ಯಾಥ್ಸ್ ಕ್ಲಬ್’.*ಮ್ಯಾಥ್ಸ್ ಕ್ಲಬ್ ನಲ್ಲಿ ಏನೇನಿರಲಿದೆ…..??*ಗಣಿತದ ಸಮಸ್ಯೆಯನ್ನು ಹೋಗಲಾಡಿಸಲು ವಿದ್ಯಾರ್ಥಿಗಳಲ್ಲಿ ಮಾನಸಿಕ ಸಾಮರ್ಥ್ಯ ತರಗತಿಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ವಿವಿಧ ಟ್ರಿಕ್ಸ್ ಗಳನ್ನೊಳಗೊಂಡ ಒಂದು ಸಿಲೆಬಸ್ ನ್ನು ರೂಪಿಸಲಾಗಿದೆ. ಅಲ್ಲದೇ ಅಬಾಕಸ್, ವೇದಿಕ್ ಗಣಿತ, ಇತ್ಯಾದಿ ತರಗತಿಗಳ ಸಂಯೋಜನೆಗಳನ್ನು ಜೊತೆ ಜೊತೆಯಾಗಿ ಮಾಡಲಾಗಿದೆ.
ಯಾರೆಲ್ಲ ಪಾಲ್ಗೊಳ್ಳಬಹುದು…??7ವರ್ಷದಿಂದ 15ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಅವಕಾಶವಿದ್ದು, Online Live ತರಗತಿಯ ಮೂಲಕ ಸ್ಥಳೀಯ ಅಥವಾ ದೇಶ- ವಿದೇಶದ ವಿದ್ಯಾರ್ಥಿಗಳು ಕೂಡ ಈ ತರಗತಿಗಳನ್ನು ಪಡೆದುಕೊಳ್ಳಬಹುದು. ತರಗತಿಯು ಶುಕ್ರವಾರ ಮತ್ತು ಶನಿವಾರ ರಾತ್ರಿ 7 ರಿಂದ 8(1ಗಂಟೆ)ರವರೆಗೆ 6 ತಿಂಗಳು ದೊರಕಲಿದೆ, 30 ವಿದ್ಯಾರ್ಥಿಗಳಿಗೆ ಮಾತ್ರ 1 ಬ್ಯಾಚ್ ನಲ್ಲಿ ಅವಕಾಶವಿದ್ದು,ಪ್ರತೀ ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಗಮನಹರಿಸಲಾಗುತ್ತದೆ.
ವಿದ್ಯಾಮಾತಾ ಅಕಾಡೆಮಿಯ ಸಾಧನೆಗಳು
ವಿವಿಧ ರೀತಿಯ ತರಬೇತಿಯನ್ನು ನೀಡಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯು 2022ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದ ಅಬಾಕಸ್ ಚಾಂಪಿಯನ್, 2023, 2024ಹಾಗೂ 2025ನೇ ಸಾಲಿನಲ್ಲಿ ಅಂತಾರಾಷ್ಟ್ರೀಯ ಅಬಾಕಸ್ ಚಾಂಪಿಯನ್ ಆಗಿರುವುದನ್ನು ಸ್ಮರಿಸಿಕೊಳ್ಳಬಹುದು. ಈ ಸಾಧನೆ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಪ್ರಮುಖ ಪಾತ್ರ ವಹಿಸುವ ಮಾನಸಿಕ ಸಾಮರ್ಥ್ಯ, ಗಣಿತ ವಿಷಯಗಳ ಕುರಿತು ತರಬೇತಿ ನೀಡಿ ಸಂಸ್ಥೆಯ ವಿದ್ಯಾರ್ಥಿಗಳು ಬ್ಯಾಂಕಿಂಗ್ ಕ್ಷೇತ್ರ, ಸೇನಾ ನೇಮಕಾತಿ, ಸೈನಿಕ ಶಾಲೆ, ನವೋದಯ ಪ್ರವೇಶ ಪರೀಕ್ಷೆ ಸೇರಿದಂತೆ ವಿವಿಧ ಅರ್ಹತಾ ಪರೀಕ್ಷೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಉತ್ತೀರ್ಣರಾಗಿ ನೇಮಕಾತಿಗೊಂಡಿರುತ್ತಾರೆ, ಈ ಸಾಧನೆಯಿಂದ ಇನ್ನಷ್ಟು ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ಬರುತ್ತಿರುವ ಮಾಥ್ಸ್ ಕ್ಲಬ್ ಯೋಜನೆಯ ಸದುಪಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ವಿದ್ಯಾಮಾತಾ ಅಕಾಡೆಮಿ
ಪುತ್ತೂರು /ಸುಳ್ಯ /ಕಾರ್ಕಳ
PH: 9620468869/ 9148935808