ಲಕ್ಷ ರೂಪಾಯಿ ಸನಿಹಕ್ಕೆ ಸರಕು ಅಡಕೆ ಧಾರಣೆ

Picture of Savistara

Savistara

Bureau Report

ಶಿವಮೊಗ್ಗ: ಸರಕು ಅಡಕೆ ಹಾಗೂ ಚಿನ್ನ ಎರಡೂ ಧಾರಣೆ ವಿಷಯದಲ್ಲಿ ಪೈಪೋಟಿಗೆ ಬಿದ್ದಂತಿದೆ. ಚಿನ್ನದ ಬೆಲೆ 10 ಗ್ರಾಂಗೆ ಲಕ್ಷ ರೂ. ದಾಟಿದ್ದರೆ, ಸರಕು ಅಡಕೆ ಲಕ್ಷ ರೂ. ತಲುಪಲು ಇನ್ನೊಂದು ಮೆಟ್ಟಿಲು ಬಾಕಿ. ಐದು ತಿಂಗಳ ಹಿಂದೆ ಲಕ್ಷ ರೂ. ಸನಿಹ ಹೋಗಿ ಅಲ್ಪ ಮಟ್ಟಿನ ಕುಸಿತ ಕಂಡಿದ್ದ ಸರಕು ಅಡಕೆ ಈಗ ಕ್ವಿಂಟಾಲ್‌ಗೆ ಬರೋಬ್ಬರಿ 99,999 ರೂ. ಮೌಲ್ಯ ಪಡೆದುಕೊಂಡಿದೆ.ಇನ್ನೂ ಹೊಸ ಅಡಕೆ ಮಾರುಕಟ್ಟೆಗೆ ໖໐໖. ಹೀಗಾಗಿ ಈ ಬಾರಿ ಸರಕಿನ ಬೆಲೆ ಲಕ್ಷ ದಾಟುವುದು ನಿಶ್ಚಿತ ಎಂಬ ಚರ್ಚೆ ಬೆಳೆಗಾರರು ಹಾಗೂ ವರ್ತಕರ ವಲಯದಲ್ಲಿ ನಡೆಯುತ್ತಿದೆ. ಎಲೆಚುಕ್ಕೆ ರೋಗ, ಫಸಲು ಕುಸಿತದಿಂದ ಕಂಗೆಟ್ಟಿರುವ ಅಡಕೆ ಬೆಳೆಗಾರರಿಗೆ ಈಗ ಸಮಾಧಾನ ಪಡುವ ಸನ್ನಿವೇಶ ಸೃಷ್ಟಿಯಾಗಿದೆ.ಸರಕು ಮಾತ್ರವಲ್ಲದೆ, ಹೆಚ್ಚು ಉತ್ಪಾದನೆಯಾಗುವ ರಾಶಿ ಇಡಿ ಕೂಡಾ ಏರುಗತಿಯಲ್ಲೇ ಇದೆ. ಕಳೆದ ವರ್ಷದ ಅಡಕೆ ಸಂಸ್ಕರಣೆ ಪ್ರಕ್ರಿಯೆ ಆರಂಭದಿಂದಲೂ 45-50 ಸಾವಿರ ರೂ. ನಡುವೆ ಹೊಯ್ದಾಡುತ್ತಿದ್ದ ರಾಶಿ ಇಡಿ ಬೆಲೆ ಈಗ 60 ಸಾವಿರ ರೂ. ಗಡಿ ದಾಟಿದೆ.

[t4b-ticker]
error: Content is protected !!