ಉಡುಪಿ ಜಿಲ್ಲೆ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಹೊಸಹಿತ್ಲುವಿನಲ್ಲಿ ಸಮುದ್ರದಲ್ಲಿ ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ಬಾಲಕರು ದುರ್ಮರಣ ಹೊಂದಿದ ಸುದ್ದಿ ತುಂಬಾ ವಿಷಾದಕರವಾಗಿದೆ. ಅಮೂಲ್ಯವಾದ ಬಾಲ ಜೀವಗಳು ಹೀಗೆ ಅಕಾಲದಲ್ಲಿ ಕಳೆದುಹೋಗಿರುವುದು ಅತೀವ ಬೇಸರದ ವಿಷಯವಾಗಿದೆ. ಮೃತರಾದ ಆಶಿಶ್ ದೇವಾಡಿಗ (15), ಸೂರಜ್ ಪೂಜಾರಿ (16), ಮತ್ತು ಸಂಕೇತ್ ದೇವಾಡಿಗ(18) ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಹಾಗೂ ಮೃತ ಮಕ್ಕಳ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪವನ್ನು ತಿಳಿಸುತ್ತೇನೆ.ಈ ದುಃಖದ ಸಂದರ್ಭದಲ್ಲಿ ದೇವರು ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ನೀರಿನಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಕುಟುಂಬಗಳಿಗೆ ಸಂಸದ ಬಿ.ವೈ ರಾಘವೇಂದ್ರ ಅವರಿಂದ ಸಂತಾಪ

Savistara
Bureau Report
[t4b-ticker]