ಆರ್​ಎಸ್​ಎಸ್​ ನಿಷೇಧ ಮಾಡಿ ಅಂತ ನಾನು ಹೇಳಿಲ್ಲ, ಸರ್ಕಾರಿ ಸ್ಥಳಗಳಲ್ಲಿ ಬೇಡ ಅಂದಿದ್ದೇನೆ: ಸಚಿವ ಪ್ರಿಯಾಂಕ್​ ಖರ್ಗೆ ಯೂ ಟರ್ನ್

Picture of Savistara

Savistara

Bureau Report

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ಹಿಂದೂ. ಆದರೆ ಹಿಂದೂ ಧರ್ಮದ ವಿರೋಧಿ ಅಲ್ಲ. ನಾನು ಆರ್ ಎಸ್ಎಸ್ ನ ವಿರೋಧಿ. ಕರಾವಳಿ, ಮಲೆನಾಡಿನಲ್ಲಿ ಯಾರು ಬಲಿಯಾಗಿದ್ದಾರೆ?. ಅವರ ಮಾಹಿತಿಯನ್ನ ತೆಗೆಯಿರಿ. ಬೇರೆ ಸಂಘಟನೆಯವರು ದೊಣ್ಣೆ ಹಿಡಿದು ಓಡಾಡಿದ್ರೆ ಒಪ್ತಾರಾ?. ದಲಿತ, ಹಿಂದುಳಿದ ಸಂಘಟನೆ ಹಿಡಿದ್ರೆ ಒಪ್ತಾರಾ?. ಶಾಲೆಗಳಲ್ಲಿ ಆರ್ ಎಸ್ ಎಸ್ ಬ್ರೈನ್ ವಾಷಿಂಗ್ ನಿಲ್ಲಬೇಕು‌. ಮೋಸ್ಟ್ ಸೀಕ್ರೆಟ್ ಆರ್ಗನೈಸೇಷನ್ ಆರ್ ಎಸ್ ಎಸ್. ಬಿಜೆಪಿ ಆರ್ ಎಸ್ ಎಸ್ ನ ಕೈಗೊಂಬೆ. ಆರ್ ಎಸ್ ಎಸ್ ಇಲ್ಲದೆ ಬಿಜೆಪಿ ಶೂನ್ಯ. ಧರ್ಮ ಇಲ್ಲದೆ ಆರ್ ಎಸ್ ಎಸ್ ಝೀರೋ ಎಂದು ಟೀಕಿಸಿದ್ದಾರೆ.ಈ ಹಿಂದೆ ಆರ್​ಎಸ್​ಎಸ್​ಅನ್ನು ನೆಹರು, ಇಂದಿರಾ ಗಾಂಧಿಯಿಂದಲೇ ಬ್ಯಾನ್ ಮಾಡಲಾಗಲಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ”ಸರ್ದಾರ್ ಪಟೇಲ್ RSS ಬ್ಯಾನ್ ಮಾಡಿದ್ದರು. ಇತಿಹಾಸದ ಪುಟವನ್ನು ತಿರುಗಿಸಿ RSS ಓದಲಿ. ಸಂಘದವರು ಬಂದು ಪಟೇಲರ ಕೈ ಕಾಲಿಗೆ ಬಿದ್ದಿದ್ರು. ನಾವು ಕೇಂದ್ರದ ನಿಯಮಗಳನ್ನು ಪಾಲಿಸುತ್ತೇವೆ. ನಮ್ಮ ನಿಯತ್ತು ರಾಷ್ಟ್ರ ಧ್ವಜಕ್ಕೆ ಇರುತ್ತದೆ. ಹೀಗಂತ ಆಗ ಕ್ಷಮೆ ಕೋರಿದ್ದರು. ಆಗ RSS ಬ್ಯಾನ್ ತೆರವು ಮಾಡಲಾಗಿತ್ತು. ಇದು ವಿಷಕಾರಿ ಎಂದು ನೆಹರು ಅವರಿಗೆ ಆಗ ಪಟೇಲರೇ ಪತ್ರ ಬರೆದಿದ್ದರು. ಬಿಜೆಪಿಯವರು ಈಗ ಪಟೇಲರ ಪ್ರತಿಮೆ ಕಟ್ಟಿದ್ದಾರೆ. ಅವರೇ ಹೇಳಿರೋದು ಇದು ವಿಷಕಾರಿ ಅಂತ. ಕೈಕಾಲಿಗೆ ಬಿದ್ದಾಗ ಪಟೇಲರು ಓಕೆ ಅಂದಿದ್ರು” ಎಂದು ತಿರುಗೇಟು ನೀಡಿದರು.”ಆರ್ ಎಸ್ ಎಸ್ ನವರು ಹೇಡಿಗಳು. ಅವರ ಇತಿಹಾಸದ ಪುಟ ತೆಗೆದು ನೋಡಿ. ಸಾವರ್ಕರ್ ಬ್ರಿಟಿಷರಿಂದ ಪೆನ್ಶನ್ ತೆಗೆದುಕೊಳ್ತಿದ್ದರು. ಅವರು ದೇಶ ಭಕ್ತರಾರಾ?. ರಾಷ್ಟ್ರಧ್ವಜವನ್ನೇ ಅವರ ಕಚೇರಿ ಮೇಲೆ ಹಾಕಿರಲಿಲ್ಲ. ಇಂತವರು ಹೇಗೆ ದೇಶ ಭಕ್ತರಾಗ್ತಾರೆ. ಯಾವ ಸಂಘಟನೆ ರಾಷ್ಟ್ರದ ನಿಯಮ ಪಾಲಿಸಲ್ಲ. ರಿಜಿಸ್ಟ್ರೇಷನ್ ಕೂಡ ಮಾಡಿಸದಿದ್ದರೆ ದೇಶಭಕ್ತರಾ?. ಮೋಹನ್ ಭಾಗವತರಿಗೆ ಅಷ್ಟು ಸೆಕ್ಯೂರಿಟಿ ಯಾಕೆ?. ಗೃಹ ಸಚಿವರಿಗೆ ಇರುವಷ್ಟು ಭದ್ರತೆ ಅವರಿಗೆ ಯಾಕೆ?. ನಿಮ್ಮ ಮನೆಯಲ್ಲಿ ಆಚರಣೆ ಮಾಡಿ ಯಾರು ಬೇಡ ಅಂತಾರೆ?. ಜೋಶಿಯವರ ಮಕ್ಕಳು ಗಣವೇಷ ಹಾಕಲಿ. ಗಣವೇಶ ಹಾಕಿ ಆಚರಣೆ ಮಾಡಲಿ ಬೇಡ ಅನ್ನಲ್ಲ. ಅವರ ಮಕ್ಕಳಿಗೆ ಒಂದು ನಿಯಮ. ಬಡವರ ಮಕ್ಕಳಿಗೆ ಒಂದು ನಿಯಮ ಯಾಕೆ?. ಇಷ್ಟನ್ನೇ ನಾವು ಕೇಳ್ತಿರೋದು” ಎಂದರು.

[t4b-ticker]
error: Content is protected !!