ಸುಬ್ರಮಣ್ಯ: ಕುಕ್ಕೆ ಸುಬ್ರಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ವಿಚಾರದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು ದೇವಸ್ಥಾನ ಸಮಿತಿ ಸದಸ್ಯ ಮಹೇಶ್ ಭಟ್ ಕರೀಕ್ಕಳ ಮೇಲೆ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಕುಕ್ಕೇಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಮಾಸ್ಟರ್ ಪ್ಲಾನ್ ಸದಸ್ಯ ಲೋಲಾಕ್ಷ ಕೈಕಂಬ, ಸತೀಶ್ ಕುಜುಗೋಡು, ಶಿವರಾಮ್ ರೈ, ಪವನ್ ಉತ್ತರಧಿ ಮಠ ವಿಚಾರ ದಲ್ಲಿ ದೇವಸ್ಥಾನ ಅಧ್ಯಕ್ಷ ಹರೀಶ್ ಇಂಜಡಿ ವಿರುದ್ದ ಹೇಳಿಕೆ ನೀಡಿರುವುದನ್ನು ಖಂಡಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪವನ್ ಕುಕ್ಕೆ ದೇವಸ್ಥಾನ ಸಮಿತಿ ಸದಸ್ಯರಾಗಿ ಮಹೇಶ್ ಭಟ್ ಅಧ್ಯಕ್ಷ ಸ್ಥಾನ ಸಿಗಲಿಲ್ಲವೆಂಬ ಒಂದೇ ಕಾರಣಕ್ಕೆ ಇಂಜಡಿ ಮೇಲೆ ದ್ವೇಷವನ್ನು ಮಾಡುತ್ತಿದ್ದು ಒಬ್ಬ ಸದಸ್ಯನಾಗಿ ದೇವಸ್ಥಾನ ಸಮಿತಿ ವಜಾಗೊಳಿಸಲು ಪ್ರಯತ್ನಪಡುತ್ತಿದ್ದಾರೆ ಕೇವಲ ಅಧಿಕಾರದ ಆಸೆಗೋಸ್ಕರ ಈ ರೀತಿ ಮಾಡುತ್ತಿದ್ದಾರೆ ಕ್ಷೇತ್ರದ ಅಭಿವೃದ್ಧಿಗೆ ಕರಿಕ್ಕಳ ರ ಕೊಡುಗೆ ಏನು ಪ್ರಶ್ನಿಸಿದ್ದಾರೆ, ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಇನ್ನೂ ಮುಂದೆ ಸಹಿಸಲು ಸಾಧ್ಯವಿಲ್ಲ ವೆಂದಿದ್ದಾರೆ, ಈ ವೇಳೆ ಲೋಲಕ್ಷ ಕೈಕಂಬ ಮಾತನಾಡಿ ಮುಂದಿನ ದಿನಗಳಲ್ಲಿ ಸಮಿತಿ ಸಭೆಗೆ ಬಂದಾಗ ನಮ್ಮ ಕಾರ್ಯಕರ್ತರು ದಿಕ್ಕಾರ ಕೂಗುವ ದಿನ ದೂರವಿಲ್ಲವೆಂದರೂ ಅಲ್ಲದೆ ಕಾಂಗ್ರೆಸ್ ನಾಯಕರು ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಶಿವರಾಮ ರೈ ಮಾತನಾಡಿ ಪ್ರಾಧಿಕಾರ ರಚಣೆಯಾಗಲೆಂದು ಹೇಳುವ ಇವರು ಸಮಿತಿ ಸದಸ್ಯರಾಗಿದ್ದು ಯಾಕೆ ಅಗತ್ಯವಿರಲಿಲ್ಲ ವೆಂದರು. ತನ್ನ ಕುಟುಂಬದ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದವರು ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವೇ ವೆಂದು ಸತೀಶ್ ಕುಜುಗೋಡು ಮಹೇಶ್ ಭಟ್ ಉದ್ದೇಶಿಸಿ ಹೇಳಿಕೆ ನೀಡಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಸುಬ್ರಮಣ್ಯ ಕಾಂಗ್ರೆಸ್ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

ಕುಕ್ಕೆ ದೇವಸ್ಥಾನ ವ್ಯವಸ್ಥಾಪನ ಸಮಿತಿ ವಿಚಾರ ನಿಲ್ಲದ ಕಾಂಗ್ರೆಸ್ ಒಳಜಗಳ | ತಾರಕಕ್ಕೆಯೆರಿದ ವಾಕ್ಸ್ಮರ, ಸಮಿತಿ ಸದಸ್ಯ ಮಹೇಶ್ ಭಟ್ ರ ಮೇಲೆ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಿಂದ ವಾಗ್ದಾಳಿ

Savistara
Bureau Report
[t4b-ticker]