2ನೇ ಪಟ್ಟಿ ಪ್ರಕಟಿಸಿದ BJP: 25 ವರ್ಷದ ಗಾಯಕಿ ಮೈಥಿಲಿ ಕಣಕ್ಕೆ

Picture of Savistara

Savistara

Bureau Report

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿಯು 12 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು (ಬುಧವಾರ) ಪ್ರಕಟಿಸಿದೆ.

ಗಾಯಕಿ ಮೈಥಿಲಿ ಠಾಕೂರ್ ಅವರನ್ನು ಅಲಿನಗರ ಕ್ಷೇತ್ರದಿಂದ ಮತ್ತು ಮಾಜಿ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ಅವರನ್ನು ಬಕ್ಸಾ‌ರ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.ರಾಮಚಂದ್ರ ಪ್ರಸಾದ್ ಅವರು ಹಯಾಘಾಟ್ ಕ್ಷೇತ್ರದಿಂದ ಸ್ಪರ್ಧಿಸಿದರೆ, ಛೋಟಿ ಕುಮಾರಿ ಮತ್ತು ರಾಕೇಶ್ ಓಜಾ ಕ್ರಮವಾಗಿ ಛಾಪ್ರಾ ಮತ್ತು ಶಾಹಪುರದಿಂದ ಸ್ಪರ್ಧಿಸಲಿದ್ದಾರೆ.

ಬೀರೇಂದ್ರ ಕುಮಾರ್ ಮತ್ತು ಮಹೇಶ್ ಪಾಸ್ವಾನ್ ಅವರು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ರೋಸೆರಾ ಮತ್ತು ಅಗಿಯಾನ್‌ನಿಂದ ಸ್ಪರ್ಧಿಸಿದರೆ, ರಂಜನ್ ಕುಮಾರ್ ಮುಜಫರ್‌ಪುರದಿಂದ ಮತ್ತು ಸುಭಾಷ್ ಸಿಂಗ್ ಗೋಪಾಲ್‌ಗಂಜ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

25 ವರ್ಷದ ಮೈಥಿಲಿ ಠಾಕೂರ್ ಹಲವು ಸಂಗೀತ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಮಧುರ ಕಂಠದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದು, 2024ರಲ್ಲಿ ಪ್ರಧಾನಿಯವರಿಂದ ‘ನ್ಯಾಷನಲ್ ಕ್ರಿಯೆಟರ್ ಪ್ರಶಸ್ತಿ’ಯನ್ನೂ ಪಡೆದಿದ್ದಾರೆ.243 ಸ್ಥಾನಗಳ ಪೈಕಿ ತಲಾ 101 ಸ್ಥಾನಗಳಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಸ್ಪರ್ಧಿಸಲಿವೆ. ಇನ್ನುಳಿದ ಸ್ಥಾನಗಳನ್ನು ಇತರೆ ಸಣ್ಣ ಮೈತ್ರಿ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ.ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್ 6 ಮತ್ತು 11ರಂದು ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.

[t4b-ticker]
error: Content is protected !!